ಗುರುವಾರ, ಫೆಬ್ರವರಿ 19, 2009

ನಿನ್ನೆ ನಾನು ಸಮುದ್ರನಾ ಭೇಟಿ ಮಾಡಿದ್ದೆ . .

ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ ಸಮುದ್ರಕ್ಕೆ ನಿನ್ನ ಬಗ್ಗೆ ಹೇಳಿದೆ you know ಸಮುದ್ರ ಮಾತೆ ಆಡದೇ ಸುಮ್ಮನಾಗಿ ಬಿಟ್ಟಿತು !! ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ. . . 

ಎಂಬರ್ಥದ ಒಂದು ಮೇಸೆಜ್ ನನ್ನ ಮೊಬೈಲ್ ಪರೆದೆಯ ಮೇಲೆ ಮೂಡಿ ಮರೆಯಾಗುವ ಹೊತ್ತಿಗೆ ಆಕಾಶದಲ್ಲಿ ಧೋ ಮಳೆ ಆಗಲೇ ಮನಸ್ಸಿಗೆ ಅನ್ನಿಸಿದ್ದು ಗ್ರಿಷ್ಮ ಋತು ಪ್ರಾರಂಭವಾಗಿದೆ ಅಂತ .ಗ್ರಿಷ್ಮ ಋತು. ಋತುಗಳಲ್ಲೆ ಅಂತ್ಯಂತ ಸುಂದರವಾದದ್ದು. ಈ ಋತುವಿನಲ್ಲಿ ಬಿಳುವ ಚುಮು ಚುಮು ಮಳೆ , ಸ್ವಲ್ಪ ಸ್ವಲ್ಪ ಬಿಸಿಲು , ಸಂಜೆ ನಾಲ್ಕರ ಹೊತ್ತಿಗೆ ಆಕಾಶದ ಮೂಲೆಯಲ್ಲಿ ಮೂಡುವ ಕಾಮನಭಿಲ್ಲು, ಅದನ್ನು ನೂಡುವುದೇ ಚೆಂದ. ನನ್ನ ಬದುಕಿನ ಕೆಲವು ಸುಂದರ ಕ್ಷಣಗಳಲ್ಲಿ ಗ್ರಿಷ್ಮ ಋತುವಿನಲ್ಲಿ ಸಂಜೆ ಬೈಕ್‌ನಲ್ಲಿ ಒಂದು ರೈಡ್ ಹೋಗಿ ಮಲ್ಲಿಕಾರ್ಜುನ ಚಿತ್ರಮಂದಿರದ ಬಲಗಡೆ ಒಣಿಯಲ್ಲಿ ಇರುವ ಕಾಫಿ ಶಾಪ್‌ನಲ್ಲಿ ಚೀನಿ ಸಾಸರ್ ಕಪ್‌ನಲ್ಲಿ ಸಿಗುವ ಹಬೆಯಾಡುವ ಕಾಫಿ ಕುಡಿಯೊದು ಒಂದು. ಅದರ ಬಗ್ಗೆಯೆ ಯೊಚಿಸುತ್ತಾ ಹಾಸ್ಟೆಲ್‌ನ ಕಿಟಕಿಯಿಂದ ಆಚೆ ನೋಡಿದರೆ ಆಗತಾನೆ ಧೋ ಮಳೆಯಲ್ಲಿ ನೆನೆದು ಮರದ ಕೆಳಗೆ ನಿಂತಿರುವ ಒಂದು ಯುವ ಜೋಡಿ ಕಾಣಿಸಿತು ಹುಡುಗ ತನ್ನ ಕೈಯಲ್ಲಿರುವ ನೊಟ್ ಪುಸ್ತಕ ಆಕೆಯ ತಲೆಯ ಮೇಲೆ ಇಟ್ಟಿದ್ದ ಆಕೆ ತನ್ನ ಚುನ್ನಿ ಯನ್ನು ಆವನ ತಲೆಯ ಮೇಲೆ ಹೊದ್ದಿಸುತ್ತಿದ್ದಳು. ಅದನ್ನೆ ನೋಡುತ್ತಾ ಮನಸ್ಸು ಪ್ರಿತಿಯ ಬಗ್ಗೆ ಯೋಚಿಸಲು ಪ್ರಾರಂಬಿಸಿತು.

ಪ್ರಿತಿ ಯಾರು ಎಷ್ಟೆ ಅಥೈಸಲು ಪ್ರಯತ್ನಿಸಿದರು ಅಥೈಸಲು ಆಗದ ಒಂದು ಅದ್ಬುತ ಕಂಪನ ಜಗತ್ತಿನ ಪ್ರತಿಯೊಂದು ಜೀವಿಯು ಆ ಪ್ರಿತಿಗಾಗಿ ಅದು ನೀಡುವ ಕಂಪನಕ್ಕಾಗಿ ಹಾತೋರೆಯುತ್ತವೆ. ಪ್ರತಿಯೊಂದು ಯುವ ಮನಸ್ಸು ಅದಕ್ಕಾಗಿ ಹಂಬಲಿಸುವ ತುಡಿಯುವ ಕಾತರಿಸುವ ಭವ್ಯವಾದ ಒಂದು ಜಗತ್ತು ಅದು.

ಆದರೆ ದೇವರ ಒಂದು ತಪ್ಪು ಅಂದರೆ ಅವನು ಪ್ರಿತಿ ಮತ್ತು ಒದು ಎರಡನ್ನು ಒಂದೇ ವಯಸ್ಸಿನಲ್ಲಿ ಕರುಣಿಸಿದ್ದಾನೆ. ಪ್ರಿತಿಸಲು ಹೋದರೆ ಒದು ದೊರವಾಗುತ್ತದೆ. ಒದಲು ಹೋದರೆ ಪ್ರಿತಿ ದೊರವಾಗುತ್ತದೆ. ಈ ದ್ವಂದ್ವ ಇಂದು ನಿನ್ನೆಯದಲ್ಲ ತುಂಬಾ ಜನ ಇದರ ಬಗ್ಗೆ ಮಾತನಾಡಿದ್ದಾರೆ. ಆದರೆ ಇದಕ್ಕೆ ಪರಿಹಾರ ಎನು ? ಬದುಕಿನ ಈ ಎರಡು ಪ್ರಮುಖ ಭಾವಗಳನ್ನು ಪಡೆಯುವ ಬಗೆ ಯಾವುದು ? ಎಂಬುದೆ ಇಂದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ ? ಈ ಎರಡೂ ಬದುಕಿಗೆ ಅನಿವಾರ್ಯ ಹಾಗದರೆ ಅವನ್ನು ಪಡೆಯುವ ಬಗೆ ಹೇಗೆ ಎಂದು ಯೋಚಿಸಹೊರಟರೆ ಇಂದು ನಮ್ಮ ಯುವಜನತೆ ಪ್ರಿತಿಯನ್ನು ನೋಡುವ ದೃಷ್ಟಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡಿದ್ದೆ ಆದಲ್ಲಿ ಅದು ಸಾಧ್ಯವಿದೆ ! ಅಂದರೆ ಇಂದು ನಮ್ಮ ಯುವಜನತೆ ಪ್ರಿತಿಯನ್ನು ವ್ಯಕ್ತಿ ಕೆಂದ್ರವಾಗಿ ಮಾತ್ರ ನೋಡುತ್ತಿದೆ. ಅಂದರೆ ಪ್ರಿತಿ ಎಂದರೆ ಒಬ್ಬ ವ್ಯಕ್ತಿ. ಅವನು ಅಥವ ಅವಳು ಇಲ್ಲಾ ಎಂದರೆ ಬದುಕೆ ಇಲ್ಲ ? ಬದುಕಿನ ಅಂತಿಮ ಗುರಿ ಅಂದರೆ ಪ್ರಿತಿಸಿದವರೊಂದಿಗೆ ಬದುಕುವುದು. ಆ ರೀತಿಯ ವ್ಯಕ್ತಿ ಕೆಂದ್ರಿತ ಅಲೋಚನೆಗಳು ವಿದ್ಯಾರ್ಥಿಯ ಬದುಕಿನ ನಿಜವಾದ ಗುರಿ ಆಸೆ ಅಕಾಂಕ್ಷೆ ಎಲ್ಲಕ್ಕು ಮಾರಕವೇ ? ಹಾಗದರೆ ಇನ್ನಾವ ರೀತಿಯಲ್ಲಿ ಪ್ರಿತಿಯನ್ನು ನೋಡಬಹುದು ಅಂದರೆ. ಪ್ರಿತಿ ಎಂಬ ಭಾವವನ್ನೆ ಪ್ರಿತಿಸುವುದು ಅಂದರೆ ಪ್ರಿತಿಯನ್ನು ವ್ಯಕ್ತಿಯ ಸುತ್ತಾ ಕಟ್ಟಿಕೊಳ್ಳದೇ ಬದುಕಿನ ಸುತ್ತ ಕಟ್ಟಿಕೊಳ್ಳುವುದು ಅಂದರೆ ಯಾವುದೇ ವ್ಯಕ್ತಿಯನ್ನು ಪ್ರಿತಿಸದೆ ಪ್ರಿತಿ ಎಂಬ ಭಾವವನ್ನೆ ಪ್ರಿತಿಸಿಕೊಳ್ಳುವುದು (ನಮ್ಮ ಜೀವನದ ಗುರಿ ತಲುಪುವವರೆಗೆ ) ಅಂದರೆ ಯಾರಿಗಾಗಿಯೊ ಕಾಯುವುದರಲ್ಲಿ ಇರುವ ಸಂತೋಷ ಅವರಿಗಾಗಿಯೇ ಜೀವನದಲ್ಲಿ ಎನಾದರೋ ಸಾಧಿಸುವೆ ಎಂಬ ಛಲ ಮುಂತಾದವುಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ನಾವು ಸಾಧಿಸಬೇಕಾದ ಗುರಿ ತಲುಪಿದ ನಂತರ ಜೀವನದಲ್ಲಿ ಬರುವ ವ್ಯಕ್ತಿಯೊಂದಿಗೆ ಅ ಎಲ್ಲಾ ಭಾವನೆಗಳನ್ನು ಹಂಚಿಕೊಂಡು ಆನಂದಿಸುವುದು. ಇದೆಲ್ಲಾ ಯಾಕೆ ಹೇಳಿದೆ ಅಂದರೆ . . . . . . . .

ಶಿವಮೊಗ್ಗ ಮಲೇನಾಡಿನ ಮಧ್ಯದ ಒಂದು ಪ್ರಶಾಂತ ನಗರ ಇಲ್ಲಿನ ಕಾಲೇಜುಗಳಲ್ಲಿ ಒದುವ ಶೇ ೭೫ ರಷ್ಟು ಮಕ್ಕಳು ಸುತ್ತ ಮುತ್ತಲ ಹಳ್ಳಿಗಳಿಂದ ಬಂದು ಒದುವವರು ಅವರ ಒದಿನ ಹಿಂದೆ ಯಾವುದೋ ತಂದೆ ತಾಯಿಯ ದುಡಿಮೆ ,ಬೆವರು ,ಕನಸು ,ನೀರಿಕ್ಷೆ ಎಲ್ಲಾ ಇರುತ್ತದೆ. ಅದು ಅಲ್ಲದೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತನ್ನನ್ನು ತಾನು ರೂಪಿಸಿಕೊಳ್ಳುವ ಹೊಣೆಗಾರಿಕೆ ಇಂದಿನ ಯುವಕರ ಮೇಲಿದೆ. ಇಂದು ಪದವಿ ಪ್ರಮಾಣ ಪತ್ರಗಳು ನಿಮಗೆ ಕೆಲಸ ಕೊಡಿಸುತ್ತವೆ. ಅಂತ ಅಂದುಕೊಂಡಿದ್ದರೆ ಅದು ನಿಜವಾಗಲು ನಿಮ್ಮ ತಪ್ಪು ಕಲ್ಪನೆ ಇಂದಿನ ಜಾಗತಿಕರಣ ಪ್ರೇರಿತ ಉದ್ಯೋಗ ಮಾರುಕಟ್ಟೆಯಲ್ಲಿ ನೀವು ಸಲ್ಲಬೇಕಾದರೆ ಪದವಿಯ ಆಚೆಗೆ ಕೆಲವು ಕೌಶಲ್ಯಗಳು ತುಂಬ ಪ್ರಮುಖವಾಗುತ್ತವೆ . ಉದಾಹರಣೆಗೆ ನಾನೆ ಗಮನಿಸಿದ ಹಾಗೆ ನಮ್ಮಲ್ಲಿ ತುಂಬಾ ವಿಧ್ಯಾರ್ಥಿಗಳಿಗೆ ಇಂಗ್ಲಿಷ್ ಅಂದರೆ ಕಬ್ಬಿಣದ ಕಡಲೆ ಹಾಗಂತ ಅವರೆಲ್ಲರು ದಡ್ಡರ ! ಖಂಡಿತ ಅಲ್ಲ ಇವರಿಗೆ ಇರುವ ಜ್ಞಾನ ಅಧ್ಬುತವಾದುದು ಎಕೆಂದರೆ ಮೂದಲೇ ಹೇಳಿದಂತೆ ಇವರು ಹೆಚ್ಚಾಗಿ ಹಳ್ಳಿಯಿಂದ ಬಂದವರು ಇವರು ಅಲ್ಲಿನ ಕಷ್ಟ, , ಸುಖ , ನೋವು , ನಲಿವು , ರಾಜಕೀಯ , ಸಾಮಾಜಿಕ ರಚನೆಗಳ ಬಗ್ಗೆ ಹತ್ತಿರದಿಂದ ಬಲ್ಲವರು ಆದರೆ ಅದನ್ನು ಜಗತ್ತಿಗೆ ವಿವಿರಿಸುವ ಭಾಷ ಜ್ಞಾನ ಇಲ್ಲದೆ ಇವರು ದಡ್ಡರೆನಿಸಿಕೋಂಡಿದ್ದಾರೆ . ಇಂದು ಜಗತ್ತು ಅಂಗೈ ಬೆರಳ ತುದಿಯಲ್ಲಿ ಇದೆ ಎಂದು ಮಾತನಾಡುತ್ತೆವೆ . ಅದು ಯಾವಾಗ ಅಂದರೆ ನಿಮಗೆ ಕಂಪ್ಯೂಟರ್ ಜ್ಞಾನ ಇದ್ದಾಗ , ಇಂಟರ್ ನೆಟ್ ಬಳಸಲು ಬಂದಾಗ. ಇಲ್ಲವಾದರೆ ನಿಮ್ಮ ಪಾಲಿಗೆ ಜಗತ್ತು ಎಂದಿಗೂ ದೂರವೆ ಗೆಳೆಯ ಇಂದು ನಾವು ಮಾತನಾಡಬೇಕಾಗಿರುವುದು ನಮ್ಮ ಪಕ್ಕದ ಮನೆ , ಪಕ್ಕದ ಊರಿನವರೊಂದಿಗಲ್ಲ ಗೆಳಯ ಇಂದು ನಾವು ಮಾತನಾಡಬೇಕಾಗಿರುವುದು ಜಗತ್ತಿನೊಂದಿಗೆ. ಇಂದು ಜಗತ್ತಿಗೆ ನಿಮ್ಮ ಭಾವನೆ ನಿಮ್ಮ ಸಾಧನೆ ನಿಮ್ಮ ಕನಸನ್ನು ನಿನೇ ತೊರಿಸಿ ವಿವರಿಸಬೇಕಿದೆ. ಅದಕ್ಕೆ ಬೇಕಾಗಿರುವುದು ಕೌಶಲ್ಯ . ಇಂದಿನ ಜಾಗತಿಕರಣ ಪ್ರೆರಿತ ಉದ್ಯೋಗ ಮಾರುಕಟ್ಟೆಯಲ್ಲಿ ನೀನು ಸಲ್ಲಬೇಕಾದರೆ ಇದೆಲ್ಲಾ ಅಗತ್ಯ ಮಾತ್ರವಲ್ಲ ಅನಿವಾರ್ಯವು ಹೌದು. ಅದಕ್ಕೆ ಹೇಳಿದ್ದು ಪ್ರಿತಿ ಎಂಬ ಬಾವವನ್ನು ವ್ಯಕ್ತಿಕೆಂದ್ರವಾಗಿಸಬೇಡ ಅಂತ . ಅಂತಿಮವಾಗಿ ನಮ್ಮ ಬದುಕಿಗೆ ಒಂದು ಜೋತೆ ಸಿಗಲೇಬೆಕಲ್ಲವೇ. .  ಅಂದುಕೊಂಡ ಗುರಿ ತಲುಪಿದ ನಂತರ ನಮ್ಮ ಬದುಕಿನಲ್ಲಿ ಬರುವ ನಮ್ಮದೇ ಜೀವಕ್ಕೆ ನಿನೇ ಹೇಳಬಹುದಲ್ಲವ ನೋಡು ನಿನ್ನ ನೀರಿಕ್ಷೆಯಲ್ಲಿಯೇ , ನಿನಗಾಗಿಯೇ ಇದೆಲ್ಲಾ ಸಾಧಿಸಿದ್ದೆನೆ ಅಂತ. ಆಗ ನಿನ್ನಲ್ಲಿರುವ ಆತ್ಮವಿಶ್ವಾಸ , ಆ ಜೀವದ ಕಣ್ಣಲ್ಲಿನ ನಿನ್ನೆಡೆಗಿನ ಬೆರಗು , ತಂದೆ ತಾಯಿಯ ಸಮಾಧಾನದ ನಿಟ್ಟುಸಿರು ಎಲ್ಲವು ಪ್ರಿತಿಯೇ ಅಲ್ವಾ ! ಆಗ ಧೈರ್ಯವಾಗಿ ಹೇಳಬಹುದು ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ ಅಂತ. ಹಾಗೆ ಹೇಳುವುದಕ್ಕಿಂತ ಮುಂಚೆ ಸಾಧಿಸುವುದು ತುಂಬಾ ಇದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ