ಗುರುವಾರ, ಫೆಬ್ರವರಿ 19, 2009

ಭಾರತದ ಸಮಾಜ ವಿಜ್ಞಾನಗಳು ಮತ್ತು ಜಾತಿ ವ್ಯವಸ್ಥೆ . . .

ಪ್ರಸ್ತುತ ಲೇಖನದಲ್ಲಿ ನಾನು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ನನ್ನ ಜ್ಞಾನದ ಮಿತಿಯಲ್ಲಿ ಜಾತಿ, ಧರ್ಮ ಮತ್ತು ತಾರತಮ್ಯ ಕುರಿತಾಗಿನ ಚರ್ಚೆಗೆ ಪ್ರತಿಕ್ರಿಯೆ ನೀಡಲು ಬಯಸುತ್ತೇನೆ. ಇಲ್ಲಿನ ನನ್ನ ವಾದಗಳು ಯಾರ ಪರವೂ ಅಲ್ಲ ವಿರುದ್ಧವು ಅಲ್ಲ ಬದಲಾಗಿ ಸಮಾಜ ವಿಜ್ಞಾನಗಳ ಸಂಶೋಧನೆಯ ಬಗೆಗಿನ ನನ್ನ ಆಸಕ್ತಿಯಿಂದ ನೀಡಿದಂತಹವು. ಒಟ್ಟಾರೆ ಈ ಲೇಖನದ ಪ್ರಯತ್ನ ಕುಸಿಯುತ್ತಿರುವ ಸಮಾಜ ವಿಜ್ಞಾನಗಳ ಜನಪ್ರ್ರಿಯತೆಯ ಬಗೆಗಿನ ನನ್ನ ಕಾಳಜಿ ಮಾತ್ರವಾಗಿದೆ. ಹೊಸ ಆಲೋಚನೆಗಳು ಅಥವಾ ಅವುಗಳ ಪರ ವಿರೋಧ ವಾದಗಳು ಸಮಾಜ ವಿಜ್ಞಾನಗಳ ಈಗಿನ ಕುಸಿತ ತಡೆದು ಅವುಗಳಿಗೆ ಒಂದು ಭದ್ರ ಸೈದ್ಧಾಂತಿಕ ಬುನಾದಿ ನೀಡಬಹುದು ಎಂಬ ಅಲೋಚನೆ ನನ್ನ ಈ ಬರವಣಿಗೆಗೆ ಕಾರಣ.


ಆಗಸ್ಟ್ ತಿಂಗಳ ಸಂವಾದ ಪ್ರತಿಕೆಯಲ್ಲಿ ಪ್ರಕಟಗೊಂಡ ಜಾತಿ, ಧರ್ಮ, ತಾರತಮ್ಯ ಕುರಿತಾದ ಚರ್ಚೆ ಸಮಾಜ ವಿಜ್ಞಾನ ಶಾಖೆಗಳಲ್ಲಿ ಸಂಶೋಧನೆ ಕೈಗೊಂಡಿರುವ ಸಂಶೋಧಕರಿಗೆ ಒಂದು ಹೊಸ ರೀತಿಯ ಆಲೋಚನೆಗೆ ಆಹ್ವಾನ ನೀಡುತ್ತದೆ, ಪ್ರಸ್ತುತ ಚರ್ಚೆ ಸಮಾಜ ವಿಜ್ಞಾನದ ಸಂಶೋದನಾ ವಿದ್ಯಾರ್ಥಿಯಾದ ನನ್ನ ದೃಷ್ಟಿಯಲ್ಲಿ ಅಗತ್ಯ ಮಾತ್ರವಲ್ಲದೆ ಅನಿವಾರ್ಯವೂ ಆಗಿದೆ. ಈ ಒಂದು ಚರ್ಚೆಗೆ ವೇದಿಕೆಯನ್ನು ಒದಗಿಸಿಕೊಟ್ಟ ಸಂವಾದದ ಸಂಪಾದಕರಿಗೆ ನನ್ನ ಕೃತಜ್ಞತೆಗಳು.
ನಾನು ನೋಡಿದಂತೆ ಕಳೆದ ಮೂರು ಸಂಚಿಕೆಗಳಿಂದ ಈ ಕುರಿತಾದ ಚರ್ಚೆಗಳು ನಡೆಯುತ್ತಿವೆ. ಡಾ. ಡೊಮಿನಿಕ್.ಡಿ ರವರ ಲೇಖನಕ್ಕೆ ಪ್ರತಿಕ್ರಿಯಿಸಿರುವ ಡಾ. ಎ. ಷಣ್ಮುಖರವರು ಭಾರತದಲ್ಲಿನ ಜಾತಿ ಪದ್ಧತಿಯ ಕುರಿತಾದ ಪ್ರೊ. ಬಾಲಗಂಗಾಧರ್ ರವರ ತಾತ್ವಿಕವಾದಂತಹ ನಿಲುವುಗಳನ್ನು ವಿವರಿಸಿದ್ದಾರೆ. ಡಾ.ಎ.ಷಣ್ಮುಖರವರ ಲೇಖನಕ್ಕೆ ಪ್ರತಿಕ್ರಿಯಿಸಿ ಡಾ.ಸಿ.ಜಿ. ಲಕ್ಷ್ಮೀಪತಿ, ಡಾ. ವಿ.ಎನ್. ಶ್ರೀಧರ್ ಮತ್ತು ಡಾ. ಡಿ ಡೊಮಿನಿಕ್ ರವರು ತಮ್ಮ ಲೇಖನಗಳನ್ನು ಬರೆದಿದ್ದಾರೆ. ಸಂಶೋಧನೆಯ ದೃಷ್ಟಿಯಿಂದ ಈ ಎಲ್ಲಾ ಲೇಖನಗಳು ಬಹಳಷ್ಟು ವಿದ್ವತ್‌ಪೂರ್ಣವಾಗಿ ಮತ್ತು ಉಪಯುಕ್ತವಾಗಿವೆ (Iಟಿಜಿoಡಿmಚಿಣive) ಎಂಬುದನ್ನು ನಾವೆಲ್ಲರೂ ಒಪ್ಪಬೇಕಾಗಿದೆ. ನಿಜವಾಗಿಯೂ ಸೈದ್ಧಾಂತಿಕ ತಳಹದಿಯಲ್ಲಿ ಗ್ರಹಿಸುವುದಾದರೆ ಎಲ್ಲಾ ವಾದಗಳು ಪ್ರಸ್ತುತವೇ (ಪರ ವಿರೋಧ ಎಂಬ ಭಾವನೆಯನ್ನು ತೆಗೆದುನೋಡಿದಾಗ) ನಾನು ಪ್ರೊ. ಬಾಲುರವರ ಖಿhe ಊeಚಿಣheಟಿ iಟಿ his ಃಟiಟಿಜಟಿess ಮತ್ತು ಅವರ ಇತರ ಲೇಖನಗಳನ್ನು ಅರ್ಥಮಾಡಿಕೊಂಡಂತೆ ಅವರ ಪ್ರಮುಖವಾದ ವಾದವೇನೆಂದರೆ ಇಂದು ಸಮಾಜ ವಿಜ್ಞಾನಗಳಲ್ಲಿ ಕಂಡುಬರುವ ಭಾರತದ ಸಮಾಜದ ಕುರಿತ ವಿವರಣೆ (ಸಿದ್ಧಾಂತಗಳು) ನಮ್ಮ ಸಮಾಜದ ನಿಜವಾದ ಸ್ವರೂಪವನ್ನು ಕಟ್ಟಿಕೊಡುವಲ್ಲಿ ಸೋತಿವೆ. ಅದಕ್ಕೆ ಪ್ರಬಲವಾದ ಕಾರಣ ಈ ಸಿದ್ಧಾಂತಗಳು ಪಾಶ್ಚ್ಚಾತ್ಯ ಚಿಂತನಾ/ಪರಿಕಲ್ಪನಾ ಚೌಕಟ್ಟಿನಿಂದ ಪ್ರೇರಿತವಾಗಿ ಕಟ್ಟಲ್ಪಟ್ಟವು. ಅವು ಅವರ ಅಂದರೆ ಪಾಶ್ಚಾತ್ಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ನಿರೂಪಣೆಗೊಂಡಂತಹವು. ಆದ್ದರಿಂದ ಈ ಸಿದ್ಧಾಂತಗಳು ನಮ್ಮ ಸಮಾಜದ ಬಗ್ಗೆ ಪರಿಣಾಮಕಾರಿಯಾದಂತಹ ವಿವರಣೆ ನೀಡುವ ಬದಲು ಒಂದು ರೀತಿಯ ಚಿಜ-hoಛಿ ವಿವರಣೆಗಳನ್ನು ನೀಡಿವೆ. ಇದಕ್ಕೆ ಮೂಲ ಕಾರಣ ಪಾಶ್ಚಾತ್ಯರ ಒಂದು ರಿಲಿಜಿಯಸ್ ಸಾಂಸ್ಕೃತಿಕ ಹಿನ್ನೆಲೆಯಾಗಿದೆ. ಇದನ್ನು ಸ್ವಲ್ಪ ವಿವರಿಸುವ ಅಗತ್ಯವಿದೆ.
ಏಕೆ ಭಾರತವನ್ನು ಕುರಿತಂತೆ ಈ ರೀತಿಂii ಗ್ರಹಿಕೆಗಳಿವೆ ?

ಪ್ರೊ. ಬಾಲಗಂಗಾಧರ್ ರವರು ತಮ್ಮ ಒಂದು ಪುಸ್ತಕ ದ ಹಿದನ್ ಇನ್ ಹಿಸ್ ಬ್ಲೈಂಡ್ನೆಸ್ ನಲ್ಲಿ ಭಾರತದ ಸಮಾಜವನ್ನು ಕುರಿತಂತೆ ವಿಭಿನ್ನವಾದ ವಾದಗಳನ್ನು ಮಂಡಿಸಿದ್ದಾರೆ. ಭಾರತವನ್ನು ಕುರಿತ ಪ್ರಸ್ತುತ ಇರುವ ಸಿದ್ಧಾಂತ ಮತ್ತು ವಿವರಣೆಗಳು ಹೇಗೆ ಭಾರತದ ಸಾಮಾಜಿಕ ರಚನೆಯನ್ನು ವಾಸ್ತವದಲ್ಲಿರುವಂತೆ ಅರ್ಥಮಾಡಿಕೊಳ್ಳಲು ವಿಫಲವಾಗಿವೆ ಎಂಬುದನ್ನು ವಿವರಿಸಿದ್ದಾರೆ. ಬಾಲಗಂಗಾಧರ ರವರ ವಿವರಣೆಯ ಪ್ರಕಾರ ಪಾಶ್ಚಾತ್ಯ ಪ್ರವಾಸಿಗರು, ಕ್ರಿಶ್ಚಿಯನ್ ಮಿಷನರಿಗಳು, ನಂತರ ಬಂದಂತಹ ಪಾಶ್ಚಿಮಾತ್ಯ ಚಿಂತಕರು ಭಾರತದ ಸಂಸ್ಕೃತಿಯನ್ನು ತಮ್ಮ ಒಂದು ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಗ್ರಹಿಸಿ ವಿವರಿಸಿದ್ದಾರೆ. ಪಾಶ್ಚಾತ್ಯರ ಪ್ರಕಾರ ರಿಲಿಜಿಯನ್ ಎಂಬುದು ಸಾರ್ವತ್ರಿಕವಾಗಿ ಸಂಸ್ಕೃತಿಯೊಂದಿಗೆ ಸಮ್ಮಿಲನಗೊಂಡಿರುವ (ಖeಟigioಟಿ is ಚಿಟಿ iಟಿಣegಡಿಚಿಟ ಠಿಚಿಡಿಣ oಜಿ ಣhe ಛಿuಟಣuಡಿe) ಅಂಶ. ಅಥವ ಜಗತ್ತಿನಲ್ಲಿ ಎಲ್ಲೂ ರಿಲಿಜನ್ ಇಲ್ಲದ ಸಂಸ್ಕ್ರತಿಗಳು ಇರಲು ಸಾಧ್ಯವಿಲ್ಲ ಎನ್ನುವ ನಂಬಿಕೆ. ಇಂತಹ ನಂಬಿಕೆಯ ಹಿಂದಿರುವ ಬಲವಾದ ಕಾರಣವೇನೆಂದರೆ ಪಾಶ್ಚಿಮಾತ್ಯರ ಬದುಕಿನ ಅನುಭವ (ಟiveಜ exಠಿeಡಿieಟಿಛಿe). ಈ ಅಂಶ ಅವರನ್ನು ಜಗತ್ತಿನ ಎಲ್ಲಾ ಸಂಸ್ಕೃತಿಗಳು ರಿಲಿಜಿಯನ್ ಹೊಂದಿವೆ ಎಂಬ ನಂಬಿಕೆಗೆ ನಿರ್ಬಂಧಗೊಳಿಸಿದೆ. (ಖಿheiಡಿ ಠಿಡಿe ಣheoಡಿeಣiಛಿಚಿಟ ಚಿssumಠಿಣioಟಿs oಜಿ ಡಿeಟigioಟಿ ಚಿs ಚಿ ಛಿuಟಣuಡಿಚಿಟ uಟಿiveಡಿse.) ಭಾರತೀಯ ಸಂಸ್ಕ್ರತಿಯಲ್ಲಿ ಹಿಂದೂಯಿಸಂ ಅವರಿಗೆ ಕಾಣಿಸಿದ್ದು ಅಂತಹ ನಂಬಿಕೆಯಿಂದಾಗಿಯೆ. ಜಾತಿ ವ್ಯವಸ್ಥೆ ಮತ್ತು ವರ್ಣದ ಸಿದ್ಧಾಂತಗಳು ಇಲ್ಲಿನ ಸ್ಥಳೀಯ ರಿಲಿಜಿಯನ್ ಆದ ಹಿಂದೂಯಿಸಂನ ಅಂತಸ್ಸತ್ವಗಳಾಗಿ ಗುರುತಿಸಲ್ಪಟ್ಟವು. ಮನುಧರ್ಮ ಶಾಸ್ತ್ರ, ವೇದಗಳು ಮತ್ತು ಪುರುಷಸೂಕ್ತಗಳು ಹಿಂದೂ ರಿಲಿಜಿಯನ್‌ನ ರಿಲಿಜಿಯಸ್ ಗ್ರಂಥಗಳಾದವು. ಒಟ್ಟಾರೆಯಾಗಿ ಹೇಳುವುದಾದರೆ ರಿಲಿಜಿಯನ್ ಎನ್ನುವುದು ಪ್ರತಿ ಸಂಸ್ಕೃತಿಯ ಸಾರ್ವತ್ರಿಕ ಮತ್ತು ಮೂಲಭೂತ ಲಕ್ಷಣ ಎನ್ನುವ ಗ್ರಹಿಕೆಯ ಮೇಲೆ ಅವರು ಭಾರತವನ್ನು ಅಧ್ಯಯನ ಮಾಡಿದ್ದಾರೆ.

ಇಲ್ಲಿನ ಸಮಸ್ಯ್ಯೆ ಎಂದರೆ ಪಾಶ್ಚ್ಯಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಿರೂಪಿತವಾದ ಭಾರತದ ಸಮಾಜದ ಕುರಿತಾದ ಈ ವಿವರಣೆ ಒಂದು ವೈಜ್ಞಾನಿಕ ನಿರೂಪಣೆ ಎಂದೇ ಸಮಾಜ ವಿಜ್ಞಾನದ ವಲಯದಲ್ಲಿ ಇಂದಿಗೂ ನಂಬಲಾಗಿದೆ. ಅಷ್ಟೇ ಅಲ್ಲ ಈ ವಿಶ್ಲೇಷಣೆಗಳು ಭಾರತದ ಸಾಮಾಜಿಕ ನ್ಯಾಯ, ಮೀಸಲಾತಿ, ಶಿಕ್ಷಣ ವ್ಯವಸ್ಥೆಗಳನ್ನು ಪ್ರಭಾವಿಸಿರುವುದು ಮಾತ್ರವಲ್ಲದೆ. ಭಾರತದ ಸಮಾಜದ ಬಗೆಗಿನ ಒಟ್ಟಾರೆ ಸಂಶೋಧನೆಯ ಮೇಲೆ ಯಜಮಾನ್ಯತೆಯನ್ನು ಹೊಂದಿವೆ. ಪಾಶ್ಚಾತ್ಯರು ಮತ್ತು ಕ್ರೈಸ್ತ ಮಿಷನರಿಗಳು ಮಧ್ಯಯುಗದ ಯುರೋಪ್‌ನಲ್ಲಿದ್ದ ತಮ್ಮ ಅನುಭವಾತ್ಮಕ ರಿಲಿಜಿಯನ್, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗಳ ಮಾದರಿಯಲ್ಲಿ ಭಾರತೀಯ ಸಮಾಜವನ್ನು ವಿವರಿಸಿದ್ದಾರೆ. ಕಳೆದ ೫ ಶತಮಾನಗಳಿಂದಲೂ ಈ ಜ್ಞಾನ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಕುರಿತಂತೆ ಕೆಲಸ ಮಾಡುತ್ತಿರುವ ವಿದ್ವಾಂಸರು ಮತ್ತು ಚಿಂತಕರ ಮೇಲೆ ಗಾಢವಾದ ಪ್ರಭಾವ ಬೀರಿದೆ.

ಭಾರತ ಸಮಾಜವನ್ನು ತಮಗಿಂತ ಹಿಂದುಳಿದ ಸಮಾಜವಾಗಿದೆ ಎಂಬ ಪೂರ್ವಗ್ರಹಿಕೆ ಪಾಶ್ಚಾತ್ಯರನ್ನು ಇಲ್ಲಿ ರಿಲಿಜಿಯನ್, ಜಾತಿವ್ಯವಸ್ಥೆ ಮುಂತಾದವನ್ನು ಗುರುತಿಸುವಂತೆ ಮಾಡಿದೆ. (ಇದು Uಟಿiveಡಿsಚಿಟ ಊisಣoಡಿಥಿ ಯ ಪರಿಕಪಲ್ಪನೆಯೊಳಗಿನಿಂದ ಪಡೆದ ಗ್ರಹಿಕೆ ) ಪ್ರೊ. ಬಾಲಗಂಗಾಧರ್ ರವರು ಹೇಳುವಂತೆ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿನಲ್ಲಿ ತಮ್ಮ ಚಿಂತನೆಯನ್ನು ರೂಪಿಸಿಕೊಂಡ ಪಾಶ್ಚಾತ್ಯರು ಕ್ರಿಶ್ಚಿಯನ್‌ರಲ್ಲದವರು ಸುಳ್ಳಾದ ರಿಲಿಜಿಯನ್ ಹೊಂದಿದ್ದಾರೆ ಎಂಬ ಪ್ರಬಲವಾದ ನಂಬಿಕೆಯನ್ನು ಹೊಂದಿದ್ದರು. (ಬ್ಯೆಬಲ್ ನ ಪ್ರಕಾರ ದೇವದೂತ ಏಸು ಜನರಿಗೆ ಸತ್ಯವಾದ ಧೈವವಾಣಿಯನ್ನು ತಿಳಿಸುವ ಮೊದಲು ವಿಶ್ವದ ಎಲ್ಲ ಜನರು ಸುಳ್ಳು ದೇವರುಗಳನ್ನು ಪೂಜಿಸುತಿದ್ದರು) ಅಂತಹ ನಂಬಿಕೆಗೆ ಪೂರಕವಾಗಿ ಭಾರತೀಯರೂ ಸಹ ತಪ್ಪಾದ ರಿಲಿಜಿಯನ್ ಹೊಂದಿದ್ದಾರೆ ಎಂದು ಗ್ರಹಿಸಿದರು ಏಕೆಂದರೆ ಇವರು ಪ್ರಾಣಿ, ಮರ, ಗಿಡಗಳಂತಹ ಸುಳ್ಳು ದೇವರುಗಳಾದ ಡೆವಿಲ್ಸ್ (ದೆವ್ವ)ಗಳನ್ನು ಪೂಜಿಸುತ್ತಾರೆ. ಆದ್ದರಿಂದಲೆ ಮಿಷನರಿಗಳು ಭಾರತೀಯರು ಅಥವಾ ಹಿದನ್‌ಗಳನ್ನು ಕ್ರಿಶ್ಚಿಯಾನಿಟಿಯ ಮೂಲಕ ಪಾವಿತ್ರ್ಯಗೊಳಿಸಿ ಅವರನ್ನು ಸರಿಯಾದ ರಿಲಿಜಿಯನ್ ಕಡೆಗೆ ತರುವುದು ಅಗತ್ಯವಾದ ಒಂದು ಅಂಶ ಎಂದು ಚಿಂತಿಸಿದರು. ಆದರೆ ಹಾಗೆ ಮಾಡಲು ಅವರಿಗೆ ಈ ಸುಳ್ಳು ರಿಲಿಜನ್ ನ ಸ್ವರೂಪವೇನು ಎನ್ನುವುದು ತಿಳಿಯಬೇಕಿತ್ತು.

ಈ ಒಂದು ಹಿನ್ನೆಲೆಯಲ್ಲಿಯೇ ಕ್ರೈಸ್ತ ಮಿಷನರಿಗಳು ಭಾರತೀಯ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಚೌಕಟ್ಟಿನ ಒಳಗೆ ಅಧ್ಯಯನ ಮಾಡಲು ಪ್ರಾರಂಬಿಸಿದರು. ಭಾರತೀಯ ಸಂಸ್ಕೃತಿ ರಿಲಿಜಿಯನ್ ಅನ್ನು ಹೊಂದಿರದೆ ಕ್ರಿಶ್ಚಿಯನ್ ಸಂಸ್ಕ್ರತಿಗಿಂತ ಭಿನ್ನವಾಗಿರಬಹುದು ಎಂಬ ಆಲೋಚನೆಯನ್ನು ಪಾಶ್ಚಾತ್ಯರು ಮಾಡಲೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಹೋಲಿಸಿದರೆ ಭಾರತೀಯ ಸಂಸ್ಕೃತಿ ಇನ್ನು ಬಾಲ್ಯವಸ್ಥೆಯಲ್ಲಿ ಇದೆ ಎಂಬ ಗ್ರಹಿಕೆಯನ್ನು ಹೊಂದಿದ್ದರು. ಈ ಒಂದು ಅಂಶದ ಹಿನ್ನೆಲೆಯಲ್ಲಿ ಪ್ರೊ. ಬಾಲಗಂಗಾಧರ್‌ರವರು ರಿಲಿಜಿಯನ್ ವಿಶ್ವ ವ್ಯಾಪ್ತಿಯಾಗಿದೆಯೇ ಎಂಬ (Is ಡಿeಟigioಟಿ is ಛಿuಟಣuಡಿಚಿಟ uಟಿiveಡಿse?) ಪ್ರಶ್ನೆಯನ್ನು ಎತ್ತುತ್ತಾರೆ. ಉದಾ: ಎಲ್ಲಾ ಸಂಸ್ಕೃತಿಗಳು ರಿಲಿಜಿಯನ್ ಹೊಂದಿವೆ ಎಂಬ ಪಾಶ್ಚಾತ್ಯ ಚಿಂತನೆಯನ್ನು ಪ್ರಶ್ನಿಸುತ್ತಾರೆ. ಮುಂದುವರಿದು ತಮ್ಮ ಗ್ರಂಥದಲ್ಲಿ ಪ್ರತಿಯೊಂದು ಸಂಸ್ಕೃತಿಯು ಅವುಗಳದ್ದೆ ಆದಂತಹ ಕಲಿಯುವಿಕೆಯ ವಿಧಾನವನ್ನು ಹೊಂದಿರುತ್ತವೆ. ಅಂತೆಯೇ ಪಾಶ್ಚಾತ್ಯ ಸಂಸ್ಕೃತಿಯು ಸಿದ್ಧಾಂತ ಪ್ರಧಾನವಾದ (ಖಿheoಡಿeಣiಛಿಚಿಟ ತಿಚಿಥಿ oಜಿ ಟeಚಿಡಿಟಿiಟಿg) ಕಲಿಯುವಿಕೆಯನ್ನು ಹೊಂದಿದ್ದು ಕ್ರಿಶ್ಚಿಯನ್ನರು ಸಿದ್ಧಾಂತಗಳಿಂದ ಪ್ರಭಾವಿತರಾದ ಜನರಾಗಿದ್ದಾರೆ. ಆದ್ದರಿಂದಲೇ ಅವರಿಗೆ ಃeಟieಜಿ, ಈಚಿiಣh ಗಳು ಆಚರಣೆಗಳಿಗಿಂತಲೂ ತುಂಬಾ ಪ್ರಮುಖವಾಗಿರುತ್ತವೆ. ಮತ್ತು ಅವರ ಪ್ರಬಲ ನಂಬಿಕೆಯೆಂದರೆ ಎಲ್ಲಾ ಸಂಸ್ಕೃತಿಗಳಲ್ಲೂ ಆಚರಣೆಗಳ ಹಿಂದೆ ಃeಟieಜಿ ಇರುತ್ತದೆ ಮತ್ತು ಅದು ಆಚರಣೆಯನ್ನು ನಿರ್ದೆಶಿಸುತ್ತದೆ ಎನ್ನುವುದಾಗಿತ್ತು.

ಆದರೆ ಏಷ್ಯಾ ಅದರಲ್ಲಿಯೂ ಭಾರತ ಸಂಸ್ಕೃತಿ ಇದಕ್ಕಿಂತ ಭಿನ್ನವಾದ ಒಂದು ಕಲಿಕಾ ವಿಧಾನವನ್ನು ಹೊಂದಿದೆ. ಉದಾ: ಇಲ್ಲಿ ಆಚರಣೆಯೇ ಪ್ರಧಾನ, ಮತ್ತು ಅಂತಹ ಆಚರಣೆಯನ್ನು ಯಾವುದೇ ರೀತಿಯ ಃeಟieಜಿ ನಿರ್ದೇಶಿಸುತ್ತಿರುವುದಿಲ್ಲ. ಕ್ರಿಶ್ಚಿಯನ್ನರಿಗೆ ರಿಲಿಜಿಯನ್ ಎಷ್ಟು ಮುಖ್ಯವೋ ಭಾರತೀಯ ಸಮಾಜಕ್ಕೆ ಖiಣuಚಿಟ (ಸಂಪ್ರದಾಯ) ಅಷ್ಟೇ ಮುಖ್ಯವಾಗಿದೆ. ಆದ್ದರಿಂದಲೇ ಭಾರತೀಯ ಸಮಾಜ ಒಂದು ಆಚರಣೆ ಪ್ರಧಾನ ಜ್ಞಾನದ (Peಡಿಜಿoಡಿmಚಿಣive ಞಟಿoತಿಟeಜge) ಸಮಾಜವೇ ಹೊರತು ಪಾಶ್ಚಾತ್ಯರು ವಿವರಿಸುವಂತೆ ಸಿದ್ಧಾಂತ ಪ್ರಧಾನವಾದ ರಿಲಿಜಿಯಸ್ ಸಮಾಜವಲ್ಲ ಆದ್ದರಿಂದ ರಿಲಿಜಿಯನ್ ಎಂಬ ಪರಿಕಲ್ಪನೆ ಭಾರತದಂತಹ ಆಚರಣೆಯ ಪ್ರಧಾನ ಸಂಸ್ಕೃತಿಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಮತ್ತು ಆ ಜ್ಞಾನದ ಸೈದ್ಧಾಂತಿಕ ಚೌಕಟ್ಟಿನಲ್ಲಿ (ಖeಟigious) ಭಾರತದಂತಹ ಸಂಪ್ರದಾಯ ಪ್ರಧಾನ ಸಮಾಜವನ್ನು ವಿವರಿಸಲು ಸಾಧ್ಯವಿಲ್ಲ. ರಿಲಿಜಿಯನ್ ಎಂಬ ಒಂದು ಪರಿಕಲ್ಪನೆಯೇ ಭಾರತದ ಸಾಮಾಜಿಕ ಸಂದರ್ಭಕ್ಕೆ ಅಗತ್ಯವಿಲ್ಲದ್ದಾಗಿದೆ. ವಸಾಹತುಷಾಹಿ ಚಿಂತಕರ ಪ್ರಮುಖವಾದ ಸಮಸ್ಯೆಯೆಂದರೆ ಅವರು ಈ ಎರಡು ಕಲಿಕಾ ವಿಧಾನಗಳ ನಡುವಿನ ಭಿನ್ನತೆಯನ್ನು ಗುರುತಿಸಲು ವಿಫಲರಾಗಿದ್ದಾರೆ. ಆದರೆ ಪಾಶ್ಚಾತ್ಯ ದೃಷ್ಠಿಕೋನದ ಹಿನ್ನೆಲೆಯಲ್ಲಿ ಕಟ್ಟಲ್ಪಟ್ಟ ಹಲವಾರು ಪ್ರಖ್ಯಾತ ವಾದಗಳು ಭಾರತ ಸಮಾಜ ಕುರಿತಂತೆ ಅಸ್ಥಿತ್ವದಲ್ಲಿವೆ. ಅವುಗಳಲ್ಲಿ ಪ್ರಮುಖವಾದುದು ಜಾತಿ ವ್ಯವಸ್ಥೆಯು ಭಾರತದ ಹಿಂದೂ ರಿಲಿಜನ್ ಸಮಾಜದ ಅಂತಸ್ಸತ್ವವಾಗಿದೆ ಹಾಗೂ ಶತಮಾನಗಳಿಂದಲೂ ಯಾವುದೇ ಬದಲಾವಣೆಗೆ ಒಳಗಾಗದೆ ತನ್ನತನವನ್ನು ಉಳಿಸಿಕೊಂಡಿದೆ ಎನ್ನುವುದು.

ಪ್ರೊ. ಬಾಲಗಂಗಾಧರ್ ರವರ ಪ್ರಕಾರ ಭಾರತದ ಸಮಾಜದಲ್ಲಿ ಅಚಿsಣe ಅಥವಾ ಜಾತಿಯನ್ನು ಒಂದು ವ್ಯವಸ್ಥೆಯಾಗಿ ಗುರುತಿಸುವುದು ಅರ್ಥವಾಗದ ವಿಶ್ಲೇಷಣೆ (ಚಿಜ-hoಛಿ exಠಿಟಚಿಟಿಚಿಣioಟಿ) ಭಾರತದ ಸಮಾಜದಲ್ಲಿ ನಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಜಾತಿಗಳು ಅಸ್ಥಿತ್ವದಲ್ಲಿವೆ. ಆದರೆ ಅವುಗಳನ್ನೆಲ್ಲ ಈಗಾಗಲೇ ನಾವು ಬೌದ್ಧಿಕ ವಾದಗಳಲ್ಲಿ ಗುರುತಿಸಿರುವಂತೆ ಒಂದು ವ್ಯವಸ್ಥೆಯ ಮಾದರಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜಾತಿಗಳ ಪರಸ್ಪರ ಸಂಬಂಧ ಅವುಗಳ ಆಚರಣೆಯ ನಿರ್ದೇಶಿಸುವ ಸಂಪ್ರದಾಯಗಳ ಸ್ವರೂಪ ಪಾಶ್ಚಾತ್ಯರು ನೀಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿವರಿಸಿರುವುದಕ್ಕಿಂತ ಭಿನ್ನವಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜಾತಿಗಳು ಸಮಾಜದಲ್ಲಿ ಹೇಗೆ ಸಂಘಟನೆಗೊಂಡವು ಮತ್ತು ಹೇಗೆ ಜನರಿಂದ ಗುರುತಿಸಲ್ಪಡುತ್ತವೆ ಎನ್ನುವುದರ ಕುರಿತ ಅಧ್ಯಯನವು ಇಂದಿನ ಅಗತ್ಯವಾಗಿದೆ. ಈ ರೀತಿಂii ಅಧ್ಯಯನಕ್ಕೆ ನಾವು ಜಾತಿಯನ್ನು ಭಿನ್ನ ದೃಷ್ಠಿಕೋನದಿಂದಲೇ ನೋಡಬೇಕಾಗುತ್ತದೆ.

ನನಗನಿಸಿದಂತೆ ಮೇಲಿನ ವಿವರಣೆಗಳಿಂದ ತಿಳಿಯುವ ಅಂಶಗಳೆಂದರೆ.


೧. ಭಾರತದ ಸಮಾಜ ವಿಜ್ಞಾನಗಳಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವರ್ಗೀಕರಣ ಪದಗುಚ್ಚಗಳು (ಕೆಟೆಗರಿಸ್) ಕ್ರಿಶ್ಚಿಯನ್ ಥಿಯಾಲಜಿಯ ಮೂಲದಿಂದ ಬಂದವುಗಳಾದ್ದರಿಂದ ನಮ್ಮ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ನಿಜರೂಪವನ್ನು ಗುರುತಿಸಲು ವಿಫಲವಾಗಿವೆ. ಪಾಶ್ಚಾತ್ಯರು ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ದಾರೆ ಎಂದು ಅವರು (ಬಾಲು) ಹೇಳುವುದಿಲ್ಲ. ಯುರೋಪಿನವರು ಬಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸ್ವರೂಪವನ್ನು ಹಾಗೆ ಗುರುತಿಸದೆ ಅನ್ಯ ಮಾರ್ಗವೇ ಅವರಿಗಿರಲಿಲ್ಲ ಎನ್ನುವುದು ಅವರ ವಾದ. ಒಂದು ರೀತಿಯಲ್ಲಿ ಇದು ಎರಡು ಭಾಗಗಳ (ಇಚಿsಣ ಚಿಟಿಜ ತಿesಣ) ನಡುವಿನ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿರುವ ಜ್ಞಾನದ ಸ್ವರೂಪವನ್ನು ನಿರ್ಧರಿಸುವ ಪ್ರಶ್ನೆಯಾಗಿ ಕಾಡುತ್ತದೆ. ಇದನ್ನು ನಾವು ಒಂದು ಪ್ರಾಕಲ್ಪನೆ ಎಂದು ಸ್ವೀಕರಿಸಿದರೂ ಪ್ರಸ್ತುತ ಸಮಾಜ ವಿಜ್ಞಾನಿಗಳ ಸಂಶೋಧನೆಯನ್ನು ಒಂದು ಭಿನ್ನವಾದಂತಹ ದೃಷ್ಟಿಕೋನದಿಂದ ಪರೀಕ್ಷಿಸಲು ಅರ್ಹವಾಗಿದೆ. ಡಾ. ವಿ.ಎಸ್. ಶ್ರೀಧರ್ ಮತ್ತು ಡಾ. ಸಿ.ಜಿ ಲಕ್ಷ್ಮಿಪತಿ ಇವರು ಪ್ರತಿಪಾದಿಸಿರುವಂತೆ ಒeಣhoಜoಟogಥಿ ಯ ಸಮಸ್ಯೆ ತುಂಬಾ ಗಂಭೀರವಾದುದಾಗಿದೆ. ಅಂದರೆ ನಾವು ಈ ಒಂದು ಪ್ರಮೇಯ ಮತ್ತು ಗ್ರಹಿತಗಳನ್ನು ಯಾವ ಒಂದು ಒeಣhoಜoಟogಥಿ ಯನ್ನು ಬಳಸಿ ಸಾಧಿಸಬಹುದಾಗಿದೆ ಎಂಬುದು.

೨. ಬಾಲಗಂಗಾಧರ ಅವರ ವಾದವನ್ನು ಒಪ್ಪುವುದು ಅಥವ ಒಪ್ಪದೆ ಇರುವುದು ಬೇರೆ ವಿಷಯ ಆದರೆ ಪ್ರಸ್ತುತ ಅವರ ಚಿಂತನೆ ಇದುವರೆಗೂ ನಡೆದಿರುವ ಸಮಾಜ ವಿಜ್ಞಾನಗಳ ಸಂಶೋಧನೆಯ ದಿಕ್ಕಿಗೆ ಭಿನ್ನವಾದ ಬೆಳಕನ್ನು ಚೆಲ್ಲುತ್ತದೆ ಎಂಬುದು ಸಮಾಜ ವಿಜ್ಞಾನಗಳ ಸಂಶೋಧನೆಯ ದೃಷ್ಟಿಯಿಂದ ಸ್ವಾಗತಾರ್ಹ ಎನ್ನುವುದು ನನ್ನ ನಂಬಿಕೆ. ಅವರ ಚಿಂತನೆಗಳು, ಪ್ರಮೇಯಗಳು ಮತ್ತು ಗ್ರಹಿತಗಳಂತೆ ಕಂಡರೂ ಸಹ ಡಾ. ಡೊಮಿನಿಕ್.ಡಿ ಇವರು ಹೇಳಿದಂತೆ ಈ ಪ್ರಮೇಯ ಮತ್ತು ಗ್ರಹಿತಗಳು ಮುಂದೆ ಕೈಗೊಳ್ಳಬಹುದಾದ ಸಂಶೋಧನೆಯ ಧಿಕ್ಕನ್ನು ಸೂಚಿಸುತ್ತವೆ ಎಂಬುದು ಸಹ ಆಸಕ್ತಿಕರ ಅಂಶವೆ. ಇಲ್ಲಿ ಗಮನಿಸಬಹುದಾದ ಪ್ರಮುಖ ಅಂಶವೆಂದರೆ ಸ್ವತಃ ಬಾಲುರವರೇ ತಮ್ಮ ಗ್ರಂಥದ ಮೂದಲನೇ ಅಧ್ಯಾಯದಲ್ಲಿ ಹೇಳುವಂತೆ ನಾನು ಇಂದು ಪ್ರಭಾವಶಾಲಿಯಾಗಿರುವ ವಿಚಾರಗಳನ್ನು ಮುಖಾಮುಖಿ ಮಾಡುತ್ತ ಈ ಪ್ರಶ್ನೆಗಳನ್ನು ರೂಪಿಸುತ್ತೇನೆ. ಏಕೆಂದರೆ ಭಾಗಶಃ ಈ ವಿಚಾರಗಳು ತಾವೇ ಸಮಸ್ಯೆಯನ್ನು ರಚಿಸುತ್ತವೆ. ಅಂದರೆ ರಿಲಿಜನ್ನಿನ ಸ್ವರೂಪಕ್ಕೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೇ, ಅನ್ಯ ಸಂಸ್ಕೃತಿಗಳಲ್ಲಿ ನಮ್ಮ ಲೇಖಕರು ರಿಲಿಜನ್ನುಗಳನ್ನು ಕಾಣುವುದೇ ಒಂದು ಸಮಸ್ಯೆಯಾಗಿದೆ ಎಂದು ವಾದಿಸುತ್ತೇನೆ. ಈ ಅರ್ಥದಲ್ಲಿ ಈ ಅಧ್ಯಾಯದಲ್ಲಿ ಬಳಸಲಾಗುವ ವಾದಗಳು ಸಂಶೋಧನೆಗೆ ಪ್ರವೇಶವನ್ನು ನೀಡುತ್ತವೆಯೇ ವಿನಃ ಅದರ ಸಮಸ್ಯೆಯನ್ನು ಯಾವುದೇ ರೀತಿಯಲ್ಲೂ ಪರಿಹರಿಸುವುದಿಲ್ಲ ಅಂದರೆ ಈ ಒಂದು ಪ್ರಯತ್ನ ಒಂದು ಪ್ರಮುಖ ಸಂಶೋಧನೆಗೆ ಸಿದ್ಧತೆಯಾಗಿರುವುದು ಕಂಡುಬರುತ್ತದೆ (ಊeuಡಿisಣiಛಿ ಜಿuಟಿಛಿಣioಟಿs)
೩. ತಮ್ಮ ಲೇಖನದಲ್ಲಿ ಡಾ.ಸಿ.ಜಿ.ಲಕ್ಷ್ಮೀಪತಿಯವರು ಹೇಳುವಂತೆ ಒರಿಯಂಟಲಿಸಂನ ದೃಷ್ಟಿಕೋನದಿಂದ ಜಾತಿಯನ್ನು ವಿವರಿಸ ಹೊರಟ ಕೂಡಲೇ ಅನ್ಯಾಯಕ್ಕೆ, ಅಸಮಾನತೆಗೆ ಗುರಿಯಾಗಿರುವ ಜಾತಿಗಳು, ಕುಲಸಮುದಾಯಗಳು ಆತಂಕಕ್ಕೆ ಒಳಗಾಗುವುದು ಸಹಜ. ಏಕೆಂದರೆ ಒರಿಯಂಟಲಿಸಂ ಪಶ್ಚಿಮದ ಅಧಿಕಾರವನ್ನು ವಿರೋಧಿಸುವ ನೆಲೆಯಲ್ಲಿಯೇ ಆಧುನಿಕತೆ, ತರ್ಕ, ಕಾರ್ಯಕಾರಣ ಸಂಬಂಧ, ವೈಜ್ಞಾನಿಕ ಮನೋಭಾವ ಮತ್ತು ಉದಾರ ಪ್ರಜಾಸತ್ತಾತ್ಮಕ ನೆಲೆಗಳನ್ನು ವಿರೋಧಿಸುವ ಸ್ವರೂಪ ಒಳಗೊಂಡಿದೆ. ಎಂಬುದು ತುಂಬಾ ಗಮನಾರ್ಹ ಅಂಶವಾದರೂ ಪ್ರೊ. ಬಾಲಗಂಗಾಧರ ರವರ ವಿಚಾರಗಳು ಒರಿಯಂಟಲಿಸಂನ ಮುಂದುವರೆದ ತಾತ್ವಿಕ ಪ್ರಣಾಳಿಕೆಯಂತೆ ಕಾಣುತ್ತವೆ ಎಂಬದು ಸಮಸ್ಯಾತ್ಮಕವಾಗಿದೆ. ಸಮಾಜ ವಿಜ್ಞಾನಗಳ ಜ್ಞಾನ ಮೀಮಾಂಸೆಯಲ್ಲಿ ಎಡ್ವರ್ಡ್ ಸೈದ್‌ನ ನಂತರ ಮುಂದೇನಾದರು ಇದೆಯೇ? ಎಂಬ ಪ್ರಶ್ನೆಯಲ್ಲಿ ಡಾ.ಲಕ್ಷ್ಮೀಪತಿಯವರ ವಾದ ನೆಲೆ ಕಂಡುಕೊಂಡಿರುವಂತೆ ಅನ್ನಿಸುತ್ತದೆ. ವಸಾಹತುಷಾಹಿ ಪಠ್ಯಗಳನ್ನು ಓದುವ ರೀತಿ ಮತ್ತು ಅರ್ಥೈಸುವ ಕ್ರಮದ ಬಗ್ಗೆ ಎತ್ತಿರುವ ಪ್ರಶ್ನೆ ತುಂಬಾ ಸೂಕ್ಷ್ಮವಾಗಿದ್ದು ಗಮನ ಸೆಳೆಯುತ್ತದೆ.
ಒಟ್ಟಾರೆ ಸಮಾಜ ವಿಜ್ಞಾನಗಳ ಸಂಶೋಧನೆ ಒಂದು ಆಸಕ್ತಿಯಾಗಿ ಕಂಡವರಿಗೆ ಈ ರೀತಿಯ ಬೆಳವಣಿಗೆಗಳು ನಿಜವಾಗಲು ಒಂದು ಹೊಸ ರೀತಿಯ ಚೈತನ್ಯವನ್ನು, ನೆಲೆಗಳನ್ನು ಸಂಶೋಧನೆಯ ಹಾದಿಯಲ್ಲಿ ತೆರೆಯುತ್ತದೆ. ಸಮಾಜ ವಿಜ್ಞಾನಿಗಳಿಗಿರಬೇಕಾದ ಮೂಲ ಗುಣಗಳಾದ ವಸ್ತುನಿಷ್ಠತೆ (ಔbರಿeಛಿಣiviಣಥಿ ಚಿಟಿಜ vಚಿಟue ಓeuಣಡಿಚಿಟiಣಥಿ) ಮತ್ತು ಮೌಲ್ಯ ತಟಸ್ಥ ನೆಲೆಯಿಂದ ತರ್ಕ ಮಾಡಿದ್ದೆ ಆದರೆ ಈ ಚರ್ಚೆ ಸಮಾಜ ವಿಜ್ಞಾನಗಳ ಸಂಶೋಧಕರಿಗೆ ಉಪಯುಕ್ತವಾಗಬಲ್ಲದ್ದಾಗಿದೆ. ಔbರಿeಛಿಣiviಣಥಿ ಮತ್ತು vಚಿಟue ಓeuಣಡಿಚಿಟiಣಥಿ ಗಳು ಪಾಶ್ಚಾತ್ಯರ ಸಮಾಜ ವಿಜ್ಞಾನಗಳ ನೆಲೆಯಿಂದಲೇ ಜನ್ಮತಾಳಿದವು ಎಂಬ ವಾದ ಮುಂದಿಟ್ಟರೆ ಈ ಪ್ರಶ್ನೆಗಳಿಗೆ ಉತ್ತರ, ಸಮಾಜ ವಿಜ್ಞಾನಗಳ ಥಿಯರಿ ಮತ್ತು ಸಂಶೋಧನೆಯ ಬೆಳವಣಿಗೆಯ ವಿವಿಧ ಹಂತಗಳನ್ನು ವಿವರಿಸಬೇಕಾಗುತ್ತದೆ.
ಪ್ರಸ್ತುತ ಬಾಲುರವರ ಚಿಂತನೆ ಮತ್ತು ಸಮಸ್ಯೆ ಇರುವುದು ಭಾರತದ ಸಮಾಜವನ್ನು ಕುರಿತಂತೆ ಇರುವ ಜ್ಞಾನ ಯಾವ ರೀತಿ ತನ್ನನ್ನು ನಿರ್ವವಹಿಸಿಕೊಂಡಿದೆ. ಇದರಲ್ಲಿರುವ ಸಮಸ್ಯೆಗಳೇನು? ಎಂಬುದಾಗಿದೆಯೇ ಹೊರತು ನನಗೆ ತಿಳಿದಿರುವಂತೆ ಜಾತಿಯ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಅವರು ತಮ್ಮ ಸಿದ್ದಾಂತವನ್ನು ಮುಂದಿಡುತ್ತಿಲ್ಲ. ಒಟ್ಟು ಸಮಾಜ ವಿಜ್ಞಾನಗಳ ಸಮಸ್ಯೆಯನ್ನು ಕುರಿತಂತೆ ಅವರು ಎತ್ತಿರುವ ಪ್ರಶ್ನೆಯ ವ್ಯಾಪ್ತಿಯಲ್ಲಿ ಜಾತಿಯ ಕುರಿತಾದ ಸಿದ್ಧಾಂತಗಳು ಸಹ ಬರುತ್ತವೆ ಎನ್ನುವುದನ್ನು ನಾವು ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಬಾಲುರವರ ವಾದವನ್ನು ನಾವು ಸಮಾಜ ವಿಜ್ಞಾನಗಳ ನಿರೂಪಣೆಯಲ್ಲಿನ ಸಮಸ್ಯೆಯಾಗಿ ಗ್ರಹಿಸಿದರೆ ಇನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಬದಲಾಗಿ ಕೇವಲ ಜಾತಿ ವ್ಯವಸ್ಥೆಯ ಕುರಿತಾದಂತೆ ಸಂಕುಚಿತ ಅರ್ಥದಲ್ಲಿ ಅವರ ವಾದಗಳು ಅರ್ಥವಾಗುವುದು ಕಷ್ಟಸಾಧ್ಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ