ಶುಕ್ರವಾರ, ಡಿಸೆಂಬರ್ 16, 2011

ಪ್ರಗತಿಪರರು ಆಚರಣೆ ವಿರೋಧಿಗಳಲ್ಲ, ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರೋಧಿಗಳು

ಕಳೆದ ಕೆಲವು ದಿನಗಳಿಂದ ಸುಬ್ರಮ್ಮಣ್ಯ ದೇವಸ್ಶಾನದಲ್ಲಿನ ಮಡೆಸ್ನಾನದ ಆಚರಣೆ ಕುರಿತು ಹಲವಾರು ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲವು ಹಿತಾಸಕ್ತಿಗಳು ಮಡೆ ಸ್ನಾನವನ್ನು ಇತರೆ ಜಾತಿಯವರು ಹಲವು ಕಡೆ ಮಾಡಿತ್ತಿದ್ದಾರೆ, ಒಂದು ಊರಿನ ಸಂಪ್ರದಾಯವನ್ನು ಪ್ರಶ್ನಿಸಲು ನಾವ್ಯಾರು ಎಂದು ಹೇಳುವ ಮೂಲಕ ಸಮಥರ್ಿಸುತ್ತಿದ್ದಾರೆ. ಮಡೆ ಸ್ನಾನವನ್ನು ಯಾವುದೇ ಜಾತಿ ಆಚರಿಸಲಿ ಅದು ಅಮಾನಿಯವೇ, ಮತ್ತು ಬೇರೆ ಜಾತಿಯವರು ಇದನ್ನು ಮಾಡುತ್ತಿದ್ದಾರೆ ಎಂಬ ವಾದ ಇದುವರೆಗೂ ಈ ಆಚರಣೆ ಮಾಡಿಕೊಂಡು ಬಂದ ಬ್ರಾಹ್ಮಣಶಾಹಿಯ ಸಮರ್ಥನೆಯಾಗಲಾರದು. ಎಂಬ ನನ್ನ ನಿಲುವಿನ ಆಧಾರದ ಮೇಲೆ ಮೇಲೆ ನನ್ನ ಅಭಿಪ್ರಾಯ ತಿಳಿಸಬಯಸುತ್ತೇನೆ ಒಟ್ಟಾರೆ ಮಡೆ ಸ್ನಾನ ಕುರಿತು ಚಚರ್ೆಗಳಲ್ಲಿ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು

1) ಮಡೆಸ್ನಾನ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರರು ಭಾಗವಹಿಸುತ್ತಿದ್ದಾರೆ ಇದರಿಂದ ತಿಳಿದು ಬರುವುದು ಏನೆಂದರೆ ಈ ಆಚರಣೆಯು ಯಾವುದೋ ಒಂದು ಸಮುದಾಯದ (ಮುಖ್ಯವಾಗಿ ಬ್ರಾಹ್ಮಣರ) ಕುತಂತ್ರವಲ್ಲ ಬದಲಾಗಿ ಜನರು ಸ್ವಯಂ ಇಚ್ಚೆಯಿಂದ ಮಾಡುತ್ತಿರುವ ಕ್ರಿಯಾ ವಿಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಒಂದು ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂಬುದು.

2) ಭಾರತೀಯ ಸಮಾಜದಲ್ಲಿ ಆಚರಣೆಗಳನ್ನು ಮಾಡಲು ನಿಧರ್ಿಷ್ಟ ವೈಚಾರಿಕ ವಿವರಣೆ ಅಥವ ಕಾರಣ ಇರಬೇಕೆಂಬ ನಿಯಮವೇನಿಲ್ಲ ಯಾವುದೇ ಕಾರಣಗಳಿಲ್ಲದೆಯೇ ಜನರು ತಲಾತಲಾಂತರದಿಂದ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆ ಅಚರಣೆಗಳಿಗೆ ಕಾರಣಗಳಿಲ್ಲ ಹಾಗಾಗಿ ಇವುಗಳನ್ನು ಮೂಢ ಆಚರಣೆಗಳು ಆ ಕಾರಣಕ್ಕಾಗಿ ಅವುಗಳನ್ನು ನಿಲ್ಲಿಸಬೇಕು ಎನ್ನುವವರು, ಮನುಷ್ಯವರ್ತನೆಯ ಒಂದು ವೈಜ್ಞಾನಿಕ ಸತ್ಯವನ್ನು ಅರಿತಿಲ್ಲ. ಅದೆಂದರೆ ಆಚರಣೆಗಳನ್ನು ಮುಂದುವರಿಸಲು ಕಾರಣ ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರವು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು. ಇದು ಮಾನವ ಆಚರಣೆಯ ಕುರಿತು ವಿಜ್ಞಾನಿಗಳೇ ಹೇಳಿದ ವಿಚಾರ ಅದ್ದರಿಂದ ಈ ಸತ್ಯವನ್ನು ಪ್ರಗತಿಪರರು ಮತ್ತು ಆಚರಣೆಯಲ್ಲಿ ತೋಡಗಿರುವ ಭಕ್ತಸಮೂಹ ಅರ್ಥಮಾಡಿಕೊಂಡಿಲ್ಲ. ಅದ್ದರಿಂದಲೇ ಕುಕ್ಕೆ ಸುಬ್ರಹ್ಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ ಅದಕ್ಕೆ ವಿರುದ್ಧವಾಗಿ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ (ಪ್ರಗತಿಪರರು) ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂಬುದು.

ವಿದ್ವಾಂಸರ ಮೇಲಿನ ವಾದದ ಆಧಾರದ ಮೇಲೆ ಮೊದಲನೆಯ ವಿವರಣೆಯನ್ನು ನೋಡುವುದಾದರೆ ಯಾವುದೇ ಸಮಾಜ ವಿಜ್ಞಾನದ ಸಂಶೋಧನೆಗಳು ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಒಂದು ನಿಧರ್ಿಷ್ಟ ಕಾಲಘಟ್ಟದ ಸಮಾಜದ ಮೇಲೆ ಹಲವಾರು ಮೌಲ್ಯಗಳು ಪ್ರಭಾವ ಬೀರುತ್ತವೆ ಬಹುಸಂಸ್ಕೃತಿಯುಳ್ಳ ಭಾರತದ ಸಮಾಜದ ಮೇಲೆ ಬ್ರಾಹ್ಮಣ ಕೆಂದ್ರಿತ ಮೌಲ್ಯಗಳ ಪ್ರಾಭಾವ ಹೆಚ್ಚಾಗಿವೆ ಮಡೆಸ್ನಾನದಂತಹ ಆಚರಣೆಗಳು ಇದೇ ವಿದ್ಯಮಾನವನ್ನು ಗಟ್ಟಿಗೊಳಿಸುತ್ತಿವ.ೆ ಆ ಮೂಲಕ ಮೂಲತ: ಮನುವಿನಿಂದ ಮುಂದಿಡಲ್ಪಟ್ಟು ಸಮಾಜದ ಎಲ್ಲಾ ಮಾನವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಬ್ರಾಹ್ಮಣಿಯ ಮೌಲ್ಯ, ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. (ಈ ವಾದದದ ಸತ್ಯತೆ ಕುರಿತು ಹಲವಾರು ಗುಣಾತ್ಮಕ ಚಚರ್ೆಗಳು ಈಗಾಗಲೇ ನಡೆಯುತ್ತಿವೆ ಅದು ಬೆರೆಯದೇ ವಿಚಾರ) ಅದ್ದರಿಂದ ಮಾನವ ಸಮಾನತೆಯನ್ನು ಬಯಸುವವರು, ಸಮಾಜವು ಆಚರಣೆಗಳ ಹೆಸರಿನಲ್ಲಿ ಬ್ರಾಹ್ಮಣಿಕರಣಕ್ಕೆ ಒಳಗಾಗುವುದನ್ನು ಆ ಮೂಲಕ ಮಾನವ ವಿರೋಧಿಯಾಗುವುದನ್ನು ತಡೆಯಬೇಕು ಎಂಬುದು ಇದುವರೆಗಿನ ಸಮಾಜ ಸಂಶೋಧನೆಗಳ ಒಟ್ಟು ಸಾರ. ಇದನ್ನು ಭಾರತದ ಪ್ರಖ್ಯಾತ ಸಮಾಜ ಸಂಶೋಧಕರೇ ಅನುಮೂದಿಸಿದ್ದಾರೆ ಅಸಕ್ತಿಕರ ಅಂಶವೆಂದರೆ ಇವರಲ್ಲಿ ಬಹುಪಾಲು ಚಿಂತಕರು ಬ್ರಾಹ್ಮಣ ಸಮುದಾಯಕೆ ಸೇರಿದ್ದಾರೆ. ಕನರ್ಾಟಕದ ಸಂದರ್ಭದಲ್ಲಿ ಇದನ್ನ ಇನ್ನು ನಿಧರ್ಿಷ್ಟವಾಗಿ ಗುರುತಿಸಬಹುದು. ಇದೇ ಅಲ್ಲದೇ ಈ ಚಚರ್ೆಯಲ್ಲಿ ಭಾಗವಹಿಸಿದ ಬಹುಪಾಲು ಚಿಂತಕರು ಮಡೆಸ್ನಾನ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರರು ಭಾಗವಹಿಸುತ್ತಾರೆ. ಎನ್ನುವ ಮೂಲಕ ತಾವೇ ಸ್ವತ; ಬ್ರಾಹ್ಮಣೀಯ ರಾಜಕಾರಣದ ಭಾಗವಾಗಿದ್ದಾರೆ ಎನ್ನುವ ಭಾವನೆ ಬರುವಂತೆ ಮಾಡಿದ್ದಾರೆ. ಎಕೆಂದರೆ ಭ್ರಾಹ್ಮಣರು, ಮಾದಿಗರು, ಮಲೆಕುಡಿಯವರು, ಬಲಜಿಗರು, ಹೊಲೆಯರು ಮತ್ತು ಗೌಡರು ಇತ್ಯಾದಿ ಹಲವು ಜಾತಿಯವರು ಮಡೆಸ್ನಾನ ಆಚರಣೆಯಲ್ಲಿ ಭಾಗವಹಿಸುತ್ತಾರೆ ಎಂಬುದಾಗಿ ಹೇಳಬಹುದಿತ್ತು ಅದಕ್ಕೆ ಬದಲಾಗಿ ಭ್ರಾಹ್ಮಣರು, ಬ್ರಾಹ್ಮಣೇತರರು ಎಂದು ಹೇಳುವ ಮೂಲಕ ಭಾರತದಲ್ಲಿ ಇರುವುದು ಎರಡೇ ಜಾತಿ ಒಂದು ಬ್ರಾಹ್ಮಣರು ಇನ್ನೊಂದು ಬ್ರಾಹ್ಮಣೇತರರು ಎನ್ನುವ ಮೂಲಕ ಅವರಿಗೆ ತಿಳಿಯದಂತೆ ಒಂದು ನಿಧರ್ಿಷ್ಟ ರಾಜಕೀಯ ಗ್ರಹಿಕೆಯ ಮೂಲಕ ಜಾತಿಗಳನ್ನು ಗುರುತಿಸುವ ಮನಸ್ಥಿತಿಯ ಭಾಗವಾಗಿ ಬಿಟ್ಟಿದ್ದಾರೆ ಇದು ನಿಜವಾದ ದುರಂತ (ಜಾತಿ ಆಧಾರಿತ ಈ ಕಲ್ಪಿತ ವಿಂಗಡನೆಯನ್ನು ಕನರ್ಾಟಕದ ಹಿಂದುಳಿದ ವರ್ಗಗಳ ಹೋರಾಟದ ಕಾಲದಲ್ಲಿ ಹೆಚ್ಚಾಗಿ ಬಳಸಿದ್ದಾರೆ. ಮುಂದುವರಿದು ರಾಜಕೀಯ ಚಿಂತಕರು ಇದನ್ನು 20ನೇ ಶತಮಾನದ ಜಾತಿ ರಾಜಕೀಯದ ಭಾಗ ಎಂದು ಗುರುತಿಸಿದ್ದಾರೆ.)

ಇನ್ನು ಎರಡನೇಯ ಕಾರಣವನ್ನು ನೋಡುವುದಾದರೆ ಕುಕ್ಕೆ ಸುಬ್ರಹ್ಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ ಅದಕ್ಕೆ ವಿರುದ್ಧವಾಗಿ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ (ಪ್ರಗತಿಪರರು) ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂಬ ವಿವರಣೆ ನಿಜವಾಗಿಯು ಪ್ರಗತಿಪರರನ್ನು ಆಶ್ಚರ್ಯಗೂಳಿಸುತ್ತದೆ. ಏಕೆಂದರೇ ಯಾವುದೇ ಪ್ರಗತಿಪರ ಸಂಘಟನೆಗಳು ಆಚರಣೆಗಳ ವಿರೋಧಿಯಲ್ಲ. ಭಾರತದಂತಹ ಬಹುಸಂಸ್ಕ್ರತಿ ಸಮಾಜದಲ್ಲಿ ಅದು ಸಾಧ್ಯವೂ ಇಲ್ಲ, ಇಲ್ಲಿ ಸಾವಿರಾರು ಆಚರಣೆಗಳಿವೆ ಲಕ್ಷಾಂತರ ನಂಬಿಕೆಗಳಿವೆ ಒಟ್ಟಾರೆ ಹೇಳುವುದಾರೆ ಆಚರಣೆ ಮತ್ತು ನಂಬಿಕೆಗಳೇ ಭಾರತದ ಜನಜೀವನದ ಜೀವಾಳ ಹೀಗಿರುವಾಗ ಪ್ರಗತಿಪರ ಸಂಘಟನೆಗಳು ಆಚರಣೆಗಳನ್ನು ವಿರೋಧಿಸುತ್ತಾರೆ ಎಂದು ಕಲ್ಪಿಸಿಕೊಳ್ಳುವುದು ಸಂಕುಚಿತ ಮನಸ್ಸಿನ ವಿಚಾರವಾಗುತ್ತದೆ. ಲೇಖಕರು ಗಮನಿಸಬೇಕಾದ ವಿಚಾರ ಎಂದರೆ ಪ್ರಗತಿಪರ ಸಂಘಟನೆಗಳು ಆಚರಣೆ ವಿರೋಧಿಗಳಲ್ಲ ಬದಲಾಗಿ ಯಾವುದಾದರೋ ಆಚರಣೆ ಮೌಡ್ಯದಿಂದ ಕೂಡಿದ್ದು ಮಾನವನ ಗೌರವಕ್ಕೆ, ಸಾಮುದಾಯಿಕ ಬದುಕಿಗೆ ವಿರೋಧಿಯಾಗಿದ್ದರೆ ಅಂತಹ ಆಚರಣೆಗಳಲ್ಲಿನ ಮೌಡ್ಯತೆಯ ವಿರುದ್ಧ ಪ್ರಗತಿಪರರು ದ್ವನಿ ಎತ್ತುತ್ತಾರೆಯೇ ವಿನಹ ಆಚರಣೆಗಳ ವಿದ್ಧವಾಗಿ ಅಲ್ಲ ಈ ನಾಡಿನ ಬಹುಪಾಲು ಪ್ರಗತಿಪರರು, ಬುದ್ಧಿಜೀವಿಗಳು ಸುಬ್ರಮ್ಮಣ್ಯ ದೇವಸ್ಶಾನದಲ್ಲಿನ ಮಡೆಸ್ನಾನವನ್ನು ಈ ಹಿನ್ನಲೆಯಲ್ಲಿಯೇ ಮಾನವ ಪರ ನೆಲೆಯಿಂದ ವಿಮಶರ್ಿಸಿದ್ದಾರೆ. ಇನ್ನು ಮುಂದುವರಿದು ಆಚರಣೆಗಳು ಒಂದು ನಿದರ್ಿಷ್ಟ ಸಮಯ ಮತ್ತು ಸ್ಥಳದಲ್ಲಿ ಪ್ರಸ್ಥುತತೆ ಹೊಂದಿರುತ್ತವೆ. ಅವುಗಳಿಗೆ ಕಾರಣವಿಲ್ಲ ಅದ್ದರಿಂದ ಅವುಗಳನ್ನು ಆಚರಿಸುವವರು ಮತ್ತು ವಿರೋಧಿಸುವವರು ನಮಗೆ ಅರ್ಥವಾಗುತ್ತಿಲ್ಲ ಎಂದಾದರೆ. ಕನರ್ಾಟಕದ ಹಲವಾರು ಚಳುವಳಿಗಳು ತಮ್ಮ ಮೌಲ್ಯ ಕಳೆದುಕೊಂಡು ಬಿಡುತ್ತವೆ. ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರುಧ್ದ ಹೋರಾಡಿ ಯಶಸ್ವಿಯಾದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ ( ಉದಾ; ಚಂದ್ರಗುತ್ತಿಯ ಬೆತ್ತಲೆ ಸೇವೆ, ಉತ್ತರ ಕನರ್ಾಟಕದ ಬಸವಿ ಬಿಡುವ ಪದ್ಧತಿ ಇತ್ಯಾದಿಗಳನ್ನು ಹೆಸರಿಸಬಹುದು) ಅವೆಲ್ಲವೂ ಸಮಾಜ ಅರ್ಥವಾಗದೇ ಪ್ರಗತಿಪರರು ಮಾಡಿದ ಹೋರಾಟ ಎಂದಾಗುತ್ತದೆ, ಇಲ್ಲಿ ಪ್ರಗತಿಪರರ ವಿರೋಧ ಇರುವುದು ಆಚರಣೆಗಳ ಹೆಸರಿನಲ್ಲಿ ಮಾನವ ವಿರೋಧಿ ಮೌಡ್ಯಗಳನ್ನು ಪ್ರೋತ್ಸಾಹಿಸಿ ಅದನ್ನು ಸಮಾಜದ ಸಾಮಾನ್ಯ ವಿದ್ಯಮಾನ ಎಂದು ಬಿಂಬಿಸುತ್ತಿರುವ ಮೇಲ್ವರ್ಗದ ರಾಜಕೀಯ ನಿಲುವಿನ ವಿರುದ್ಧವಾಗಿಯೇ ಹೊರತು. ಈ ದೇಶದ ಆಚರಣೆಗಳ ವಿರುದ್ಧ ಅಲ್ಲ. ಆದರೆ ತಳಸಮುದಾಯದವರನ್ನು ಎತ್ತಿ ಕಟ್ಟಿ ಈ ರಾಕಾರಣದ ಭಾಗವಾಗಿ ಬಳಸಲ್ಪಡುತ್ತಿರುವುದು ನಿಜವಾದ ದುರಂತ. ಇದಕ್ಕೆ ಮಲೆಕುಡಿ ಜನಾಂಗ ಪ್ರಸ್ಥುತ ಉದಾಹರಣೆಯಾಗಿದೆ

ಅಂತಿಮವಾಗಿ ಹೇಳುವುದಾದರೆ ಶತಮಾನಗಳ ಹೋರಾಟ, ಬಲಿದಾನದ ಮೂಲಕ ಸಂವಿಧಾನವನ್ನು ರಚಿಸಿ ಕಾನೂನಾಗಿಯಾದರೂ ಮೇಲ್ವರ್ಗದ ಜನರಿಗೆ ಶತಮಾನಗಳ ಕಾಲ ತಾವು ಮಾಡಿದ ಶೋಷಣೆಯ ಅರಿವಾಗಲಿ ಎಂದು ಚಿಂತಕರು ಹಂಬಲಿಸುತ್ತಿರುವ ಮತ್ತು ಅರಿವು ಮೂಡಿಸುತ್ತಿರುವ ಈ ಸಂದರ್ಭದಲ್ಲಿ ಶತಮಾನಗಳಿಂದ ನೀವು ದಲಿತರನ್ನು ಹೊರಗಿಟ್ಟಿರುವುದು, ಅವರಿಗೆ ಮಲತಿನ್ನಿಸಿರುವುದು, ಕುಡಿಯಲು ನೀರು ನೀಡದಿರುವುದು, ದೇವಸ್ಥಾನ ಪ್ರವೇಶ ನಿಷೇದ, ಎಂಜಲೆಲೆಯ ಮೇಲೆ ಹೊರಳಾಡಿಸುವುದು ಇತ್ಯದಿಗಳು ಆಚರಣೆಗಳು ಅಷ್ಟೆ ಇದು ಯಾವುದೇ ಸಮುದಾಯದ (ಮುಖ್ಯವಾಗಿ ಬ್ರಾಹ್ಮಣಶಾಹಿ ಚಿಂತನೆಯ) ಉದ್ದೇಶ ಪೂರ್ವಕ ಕ್ರೀಯೇ ಅಲ್ಲ. ಎಕೆಂದರೆ ಭಾರತದ ಸಂದರ್ಭದಲ್ಲಿ ಆಚರಣೆಗಳಿಗೆ ಕಾರಣವೇ ಇಲ್ಲ, ಅದನ್ನು ಮೂದಲು ಅರ್ಥಮಾಡಿಕೊಳ್ಳಬೇಕು ಎಂದು ಒಂದು ಸಂಶೋಧನೆ ಲಾಜಿಕಲ್ ಆಗಿ ನಿರೂಪಿಸಿದರ,ೆ ಆಚರಣೆಯ ಹೆಸರಿನಲ್ಲಿ ಮೌಢ್ಯತೆಯನ್ನು ಪಾಲಿಸುತ್ತಿರುವ ಮತ್ತು ಆ ಮೂಲಕ ತಳಸಮುದಾಯದವರನ್ನು ನಿರಂತರವಾಗಿ ಶೋಷಿಸುತ್ತಿರುವ ಮೇಲ್ವರ್ಗಗಳು ಹೊ. . . ! ಇದುವರೆಗು ನಾವು ಪಾಲಿಸುತ್ತಿರುವುದು ಹಿಂದಿನಿಂದ ಬಂದ ಆಚರಣೆಗಳನ್ನು ಅದ್ದರಿಂದ ಅದು ಅಮಾನುಷವೂ ಅಲ್ಲ, ಮಾನವ ವಿರೋಧಿಯೂ ಅಲ,್ಲ ಎಂಬ ಧರ್ಮ ಸಮರ್ಥನೆಗೆ ತೋಡಗಿಬಿಡುತ್ತವೆ. ಇದು ನಿಜವಾಗಿಯು ಮಡೆಸ್ನಾನಕ್ಕಿಂತ ಅಪಾಯಕಾರಿ ಅದ್ದರಿಂದ ಈ ಕುರಿತಂತೆ ಮಾತನಾಡುವವರು ಆಚರಣೆಗಳಿಗೂ ಮತ್ತು ಅದರ ಹೆಸರಿನಲ್ಲಿ ನಡೆಯುವ ಮೌಢ್ಯತೆಗೂ ನಡುವಿನ ವ್ಯತ್ಯಾಸ ತಿಳಿಯಬೇಕು ಎರಡನೆಯದಾಗಿ ಮಡೆಸ್ನಾನ ಕುರಿತ ಪ್ರಗತಿಪರರ ವಿರೋಧವನ್ನು ಶತಮಾನಗಳಿಂದ ಬಂದಿರುವ ಆಚರಣೆಗಳ ವಿರೋಧವಾಗಿ ಗ್ರಹಿಸದೆ ಆಚರಣೆಯ ಹೆಸರಿನಲ್ಲಿ ಮಾನವ ವಿರೋಧಿ ಮೌಢ್ಯಗಳನ್ನು ಸಮಾಜದಲ್ಲಿ ಸ್ಥಾಪಿಸುತ್ತಿರುವ ಮೇಲ್ವರ್ಗದ ವಿಚಾರಗಳ ವಿರೋಧವಾಗಿ ಅರ್ಥಮಾಡಿಕೊಳ್ಳಬೇಕು.