ಗುರುವಾರ, ಫೆಬ್ರವರಿ 19, 2009

ಮಹಾತ್ಮಾ ಗಾಂಧಿ ಮತ್ತು ಕ್ರಾಂತಿ

ಹಿಂದ್ ಸ್ವರಾಜ್ ದ್ವೇಷಕ್ಕೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮ ಬಲವನ್ನು ನಿಲ್ಲಿಸುತ್ತದೆ.

; ಮಹಾತ್ಮ ಗಾಂಧಿ

ಹಿಂದ್ ಸ್ವರಾಜ್ ಮಹಾತ್ಮ ಗಾಧಿಯವರು ಬರೆದ ಒಂದು ಅಂತ್ಯಂತ ಪ್ರಸಿದ್ದ ಗ್ರಂx. ಇದು ಅವರು ಲಂಡನ್ನಿನಿಂದ ದಕ್ಷಿಣ ಆಪ್ರಿಕಾಕ್ಕೆ ಹಡಗಿನಲ್ಲಿ ಹಿಂದುರುಗುವಾಗ ಬರೆದ ಪುಸ್ತಕ. ಇದು ಮೂವತ್ತು ಸಾವಿರ ಪದಗಳನ್ನು ಹೊಂದಿದೆ ೧೯೦೮ ನವೆಂಬರ್ ೧೩ ರಿಂದ ೨೨ ರವರೆಗೆ ಹಗಲು ರಾತ್ರಿ ಇದನ್ನು ಬರೆದಿದ್ದಾರೆ. ೨೭೧ ಹಸ್ತಪ್ರತಿಯ ಈ ಗ್ರಂಥದ ೫೦ ಹಸ್ತಪ್ರತಿಗಳನ್ನು ಗಾಂಧಿಜಿಯವರು ತಮ್ಮ ಎಡಗೈಯಲ್ಲಿ ಬರೆದಿದ್ದಾರೆ ಆಧುನಿಕಥೆಯನ್ನು ತಿರ್ವವಾಗಿ ಖಂಡಿಸುವ ಹಿಂದ್ ಸ್ವರಾಜ್‌ನ ಮೂಲ ಗುಜರಾತಿ ಬಾಷೆಯಲ್ಲಿದೆ.

ಹಿಂದ್ ಸ್ವರಾಜ್ ಪುಸ್ತಕದ ತಾಂತ್ರಿಕವಾದ ತಿಳುವಳಿಕೆಗೆ ಈ ಮೇಲಿನ ಮಾಹಿತಿಗಳು ಸಾಕು ಆದರೆ ಗಾಂಧಿಯವರ ವಿಚಾರ ಅವರ ತತ್ವಗಳು ಮತ್ತು ಇಂದು ಅದರ ಪ್ರಸ್ಥುತತೆಯನ್ನು ತಿಳಿಯಲು ಪುಸ್ತಕದ ಕುರಿತು ಸ್ವಲ್ಪ ವಿವರಣಾತ್ಮಕವಾಗಿ ಚರ್ಚಿಸುವ ಅಗತ್ಯತೆ ಇದೆ. ಪ್ರತಿಯೊಂದು ಗ್ರಂಥವು ಸಮಾಜಕ್ಕೆ ಕೊಡಬಹುದಾದ ಕೆಲವು ಕೊಡುಗೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುತ್ತದೆ. ಎಂದು ನೊಡುವುದಾದರೆ ಹಿಂದ್ ಸ್ವರಾಜ್ ಇಂದಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ ಏನು ? ಎಂಬುದನ್ನು ವಿಶ್ಲೇಷಿಸುವುದೆ ಈ ಲೇಖನದ ಉದ್ದೇಶ.

ನಿಜವಾದ ಅರ್ಥದಲ್ಲಿ ಹಿಂದ್ ಸ್ವರಾಜ್ ನ ತತ್ವಗಳು ಇಂದು ಪ್ರಸ್ಥುತ ಸಮಾಜಕ್ಕೆ ಅಂತ್ಯಂತ ಅಗತ್ಯವಾಗಿ ಬೇಕಾಗಿರುವ ಅಂಶಗಳಾಗಿವೆ.

ಗಾಂದಿಜಿಯವರು ಹಿಂದ್ ಸ್ವರಾಜ್ ಬರೆಯಲು ಇದ್ದ ಅನೇಕ ಪ್ರಮುಖ ಕಾರಣಗಳಲ್ಲಿ ಭಾರತೀಯ ದೇಶಸೇವಕರಲ್ಲಿ ಬೆಳೆಯುತ್ತಿದ್ದ ಹಿಂಸಾ ಪ್ರವೃತ್ತಿಯು ಒಂದು. ಗಾಂಧಿಜಿಯವರ ಪ್ರಕಾರ ಹಿಂಸೆಯಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಒಂದು ವೇಳೆ ಬದಲಾವಣೆ ಆದರೂ ಕ್ಷಣಿಕವಾಗಿರುತ್ತದೆ. ಇದನ್ನು ವಿವರವಾಗಿ ನೊಡುವುದಾದರೆ ಹಿಂದ್ ಸ್ವರಾಜ್ ಕೃತಿಯಲ್ಲಿ ಅವರು ಭಾರತದ ಕ್ರಾಂತಿಕಾರಿಗಳಿಗೆ ಹೇಳುತ್ತಾರೆ. ಬ್ರಿಟಿಷರು ನಮ್ಮನ್ನು ಆಳುತ್ತಿರುವುದು ಬಲದ ಆಧಾರದ ಮೇಲೆ ಅವರ ಆಳ್ವಿಕೆಗೆ ಶಕ್ತಿಯೇ ಮೂಲ ಒಂದು ವೇಳೆ ನಾವು ನಮ್ಮ ಪ್ರಭುತ್ವಕ್ಕೆ ಬಲವೆ ಆಧಾರ ಎಂದು ತಿಳಿದು , ಬಲದ ಮೂಲಕ ಸ್ವತಂತ್ರ್ಯ ಪಡೆಯಲು ಹೊರಟರೆ ನಮಗೊ ಅವರಿಗೊ ಅಂತಹ ವ್ಯತ್ಯಸ ಕಾಣುವುದಿಲ್ಲ ಒಂದು ವೇಳೆ ಬಲಪ್ರಯೋಗದ ಮೂಲಕ ನಾವು ಸ್ವಾತಂತ್ರ್ಯ ಪಡೆದದ್ದೆ ಆದರೆ ನಾವು ಕಟ್ಟುವ ಸ್ವಾತಂತ್ರ್ಯ ಪ್ರಭುತ್ವ ಬ್ರಿಟಿಷರ ಪ್ರಭುತ್ವಕ್ಕಿಂತ ವಿಭಿನ್ನವಾಗಿರುವುದಕ್ಕೆ ಸಾಧ್ಯವೇ ಇಲ್ಲ. (ಹಿಂದ್ ಸ್ವರಾಜ್: ಉದ್ದೇಶ: ಐತಿಹಾಸಿಕ ಸಂದರ್ಭ ಪ್ರೋ ಜೆ.ಎಸ್.ಸದಾನಂದ;) ಅದ್ದರಿಂದ ಹಿಂಸೆಗೆ ಬದಲು ಅಹಿಂಸೆ ಪ್ರಬಲವಾದ ಅಸ್ತ್ರವಾಗಬೇಕು ಎಕೆಂದರೆ ಹಿಂಸೆ ಬಲವನ್ನು ಆಶ್ರಯಿಸಿದರೆ ಅಹಿಂಸೆ ಮನೋಸ್ಥೈರ್ಯ , ಆತ್ಮವಿಶ್ವಾಸವನ್ನು ಅವಲಂಬಿಸಿರುತ್ತದೆ. ಮತ್ತು ಇದು ವ್ಯಕ್ತಿಗೆ ಆರ್ಥವಾಗಬೇಕಾದರೆ ಅವನಿಗೆ ತನ್ನನ್ನು ಆಳಿಕೊಳ್ಳಲು ತಿಳಿದಿರಬೇಕು. (Seಟಜಿ ಡಿue) ನಮಗೆ ತಿಳಿದಿರುವ ಇತಿಹಾಸ ಜಗತ್ತಿನ ಯುದ್ದಗಳ ಮತ್ತು ರಾಜರುಗಳ ಕಥೆ ಮಾತ್ರ ರಾಜರು ಹೇಗೆ ಆಟವಾಡಿದರು ಹೇಗೆ ಪರಸ್ಪರ ಹಗೆಗಳಾದರು ಹೇಗೆ ಒಬ್ಬರೊನ್ನಬ್ಬರು ಕೊಂದರು ಎಂಬುದೆಲ್ಲಾ ಈಗಿನ ಇತಿಹಾಸದಲ್ಲಿ ವರ್ಣಿತವಾಗಿದೆ. ಜಗತ್ತಿನಲ್ಲಿ ಇಷ್ಟೆ ಆಗಿದ್ದರೆ ಈ ಲೋಕ ಏಂದೊ ಮುಳುಗಿ ಹೋಗುತ್ತಿತ್ತು ಜಗತ್ತಿನ ಇತಿಹಾಸ ಯುಧ್ದದಿಂದ ಮೂದಲಾಗಿದ್ದರೆ ಇಂದು ಒಬ್ಬ ಮನುಷ್ಯನು ಬದುಕಿರುತ್ತಿರಲಿಲ್ಲ. ಜಗತ್ತಿನಲ್ಲಿ ಇನ್ನೂ ಕೋಟ್ಯಾಂತರ ಜನ ಬದಿಕಿದ್ದಾರೆ ಏಂಬುದೇ ಈ ಜಗತ್ತು ಶಸ್ತ್ರಬಲದಿಂದ ನಡಿದಿಲ್ಲ ಆತ್ಮಬಲದಿಂದ ನಡೆದಿದೆ ಎಂಬುದಕ್ಕೆ ಸಾಕ್ಷಿ. ಇಂದು ಜಗತ್ತಿನಲ್ಲಿ ಲಕ್ಷಾಂತರ ಜನ ಈ ಆತ್ಮ ಬಲವನ್ನೆ ನಂಬಿ ಬದುಕುತ್ತಿದ್ದಾರೆ. ( ಗಾಂಧಿಜಿ, ಹಿಂದ್ ಸ್ವರಾಜ್, ಪುಟ ೭೫) ಪ್ರಸ್ಥುತ ಸಮಾಜಕ್ಕೆ ಗಾಂದಿಜಿಯವರ ಈ ಅಂಶ ಅತ್ಯಂತ ಅಗತ್ಯವಾಗಿ ಅರ್ಥವಾಗಬೇಕಿದೆ ಎಕೆಂದರೆ ಇಂದು ನಮ್ಮ ಕಣ್ಣೆದುರಿಗೆ ಹಲವಾರು ಹಿಂಸಾತ್ಮಾಕ ಚಳುವಳಿಗಳು ನಡೆಯುತ್ತಿವೆ ಇವು ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ , ಶೋಷಿತರ ಧ್ವನಿ ಇಂದು ಹೊರಾಟದಲ್ಲಿ ಅಡಗಿದೆ. ಎಂದು ಬಿಂಬಿಸುವುದರ ಮೂಲಕ ಹಿಂಸೆಯನ್ನೆ ಪ್ರಚೋದಿಸುತ್ತಿದೆ. ಉದಾ; ನಕ್ಸಲಿಸಂ , ಅಸ್ಸಾಂನ ಮಾವೂಯಿಸಂ ,ಕಾಶ್ಮಿರದ ಭಯೊತ್ಪಾದನೆ ಮುಂತಾದವು . ನಿಜ ಇಂದು ವ್ಯವಸ್ಥೆ ಭ್ರಷ್ಟರಿಂದ ಕೊಡಿದೆ , ಉಳ್ಳವನು ಇಲ್ಲದವನ್ನು ಶೋಷಿಸುತ್ತಿದ್ದಾನೆ , ಶೋಷಿತರ ಹೋರಾಟಕ್ಕೆ ಸದೃಢ ದ್ವನಿಯೇ ಇಲ್ಲವಾಗಿದೆ , ಇಂದು ಕೆಲವೇ ಜನರ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿ ಎಂದು ಬಿಂಬಿತವಾಗುತ್ತಿವೆ. ಪಟ್ಟಭದ್ರ ಹಿತಾಸಕ್ತಿಗಳು ಇಂದು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಉನ್ನತ ಹಂತದ ರಾಜಕಾರಣಿಯಿಂದ ಹಿಡಿದು ಕೆಳಗಿನ ಸಾಮಾನ್ಯ ಡಿ ಗ್ರೋಪ್ ನೌಕರನವರೆಗೆ ಭ್ರಷ್ಟಚಾರ ಹಬ್ಬಿದೆ ! ಪರಿಸ್ಥಿತಿ ಹಿಗಿರುವಾಗ ನಿಜವಾದ ಶೋಷಿತರ ದ್ವನಿಗೆ ಬೇಲೆ ಎಲ್ಲಿದೆ ? ಇದಕ್ಕೆ ಪರಿಹಾರವೇನು ? ಎಂಬ ಪ್ರಶ್ನೆಗಳಿಗೆ ಹಿಂದ್ ಸ್ವರಾಜ್‌ನಲ್ಲಿ ತಕ್ಕ ಮಟ್ಟಿಗೆ ಉತ್ತರ ಪಡೆಯಬಹುದು.

ಸರಿ ತಾವು ಹೇಳಿದ ಎಲ್ಲಾ ಸಮಸ್ಯಗಳೂ ಇವೆ. ಅದರೆ ಆದಕ್ಕೆ ಪರಿಹಾರ ಕ್ರಾಂತಿ ಅಲ್ಲ , ಇ ಎಲ್ಲಾ ಸಮಸ್ಯಗಳನ್ನು ಇಂದು ತಂದೊದಡ್ಡಿದವರು ಈ ದೇಶದ ಪ್ರಭಾವಿ ರಾಜಕಾರಣಿಗಳು , ನೌಕರಶಾಹಿತ್ವ , ಮತ್ತು ಬಂಡವಾಳಶಾಹಿಗಳು, ಆದರೆ ನೆನಪಿಡಿ ಇವರೆಲ್ಲರೂ ಸಾಮಾನ್ಯ ಜನರನ್ನು ಶೋಷಿಸಲು ಬಳಸುತ್ತಿರುವುದು ಬದಲಾದ ಬಲದ ಸ್ವರೊಪನ್ನೆ ಅಂದರೆ ಬ್ರಿಟಿಷರು ಅಂದು ನಮ್ಮನ್ನು ಆಳಲು ಸೈನಿಕಬಲ , ನೌಕಬಲವನ್ನು ಆಶ್ರಯಿಸಿದ್ದರೆ ಇಂದು ಈ ಪಟ್ಟಭದ್ರ ಗುಂಪುಗಳು ನಮ್ಮನ್ನು ಆಳಲು ಹಣದ ಬಲ , ಜಾತಿಯ ಬಲ , ಅಧಿಕಾರದ ಬಲಗಳನ್ನು ಬಳಸುತ್ತಿದ್ದಾರೆ. ಒಂದುವೇಳೆ ನಾವು ಇವರನ್ನು ಮಣಿಸಲು ಮತ್ತು ಶೋಷಿತರ ಪರ ಅವರ ಹಕ್ಕುಗಳಿಗಾಗಿ ಹೋರಾಡಲು ಬಲವನ್ನೆ (ಕ್ರಾಂತಿ) ಅವಲಂಬಿಸಿದರೆ. ನಮಗೂ ಅವರಿಗೂ ಅಂತಹ ವ್ಯತ್ಯಸ ಕಾಣುವುದಿಲ್ಲ. ಹಿಂದಿನ ಹಲವಾರು ಚಳುವಳಿಗಳಂತೆ ಈ ಚಳುವಳಿಯು ಸಹ ಯಾವುದೂ ಒಂದು ವರ್ಗಕ್ಕೊ ಜಾತಿಗೊ ಸಿಮಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಹಿಂಸೆಯನ್ನು ಬಿಟ್ಟು , ಅಸ್ತ್ರಬಲದ ಬದಲು ಆತ್ಮಬಲ , ಮನೋಸ್ಥೈರ್ಯ,ದ ಮೂಲಕ ಹೋರಾಡುವ ಅಗತ್ಯತೆ ಇದೆ. ಈ ರೀತಿಯ ಹೋರಾಟಕ್ಕೆ ಇರುವ ದಾರಿ ಸತ್ಯಗ್ರಹ ಸ್ವಯಂ ಕಷ್ಟಸಹಿಸಿ ತಮ್ಮ ಅಧಿಕಾರಗಳನ್ನು ಗಳಿಸುವ ಪದ್ದತಿಯೇ ಸತ್ಯಗ್ರಹ ( ಗಾಂಧಿಜಿ, ಹಿಂದ್ ಸ್ವರಾಜ್, ಪುಟ ೭೭) ಈ ದಾರಿ ಇಂದಿನ ಸಮಾಜಕ್ಕೆ ಸಹ್ಯವೇ ಎಂಬುದೆ ನಮ್ಮ ಮುಂದಿರುವ ಪ್ರಶ್ನೆ ? ಕೊನೆಯ ಮಾತು ಹಿಂಸೆ ಎಂದಿಗೂ ಬಲವನ್ನೆ ನಂಬಿದೆ ಹಿಂಸೆ ಕೈಗೂಳ್ಳಲು ಜನಬಲ ಬೇಕು ಆದರೆ ಗಾಂಧಿಜಿಯವರು ತಿಳಿಸಿದ ಅಹಿಂಸಾ ಮಾರ್ಗಕ್ಕೆ ಆತ್ಮಬಲ ಹೊಂದಿರುವ ಒಬ್ಬ   ಸಾಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ