ಗುರುವಾರ, ಫೆಬ್ರವರಿ 26, 2009

ಸತ್ತ ಮಗಳು ತಾಯಿಗೆ ಬರೆದ ಪತ್ರ

ಇಂದು ಹೆಣ್ಣು ಭ್ರೂಣ ಹತ್ಯ ಸಮಾಜದ ಪ್ರಮುಖ ಸಮಸ್ಯಗಳಲ್ಲಿ ಒಂದಾಗಿದೆ ಮೂನ್ನೆ email ನಲ್ಲಿ ನನ್ನ ಗೆಳತಿ ಕಳುಹಿಸಿದ ಒಂದು ಪುಟ್ಟ ಮಗುವಿನ ಸ್ವಗತದ ಕಥೆ ಇಡಿ ದಿನ ನನ್ನನ್ನು ಕಾಡಿದೆ.ಕೈ ಹಿಡಿದು ಜಗ್ಗಿದೆ. ಅದನ್ನೆ ಕನ್ನಡಕ್ಕೆ ಅನುವಾದಿಸಿ ತಮ್ಮ ಮುಂದಿಡುತ್ತಿದ್ದೆನೆ. ಒದಿ ಕಣ್ಣು ತೆವವಾಗದಿರಲಿ.

ಪ್ರಿತಿಯ

ಅಮ್ಮ

ನಾನು ನಿನ್ನ ಪುಟ್ಟ ಮಗಳಾಗಬೇಕಿಂದಿದ್ದೆ, ಆದರೆ ನಾನೀಗ ಸ್ವರ್ಗದಲ್ಲಿದ್ದನೆ. ನನಗೆ ಎನಾಯಿತು ಅಂತ ನಿಜವಾಗಲು ಅರ್ಥವೆ ಆಗಲಿಲ್ಲ. ನಾನು ನನ್ನನ್ನು ಅರಿತುಕೊಳ್ಳುವಾಗ ಒಂದು ಕತ್ತಲ ಮನೆಯಲ್ಲಿದ್ದೆ. ಅದು ನನಗೆ ತುಂಬಾ ಆತ್ಮಿಯ ತಾಣ ಎನಿಸುತ್ತಿತ್ತು. ನನಗೆ ಆಗಲೇ ಕೈ ಬೆರಳುಗಳು , ಕಾಲುಗಳು ಮೂಡುತ್ತಿದ್ದವು. ನಾನು ದಿನದ ತುಂಬಾ ಸಮಯವನ್ನು ಯೋಚಿಸುವುದರಲ್ಲಿ ಮತ್ತು ನಿದ್ದೆಯಲ್ಲಿಯೇ ಕಳೆಯುತ್ತಿದ್ದೆ. ಹಾಗಂತ ನಾನು ಸೊಮಾರಿಯೇನು ಆಗಿರಲಿಲ್ಲ. ನನಗೆ ನನ್ನ ಮತ್ತು ನಿನ್ನ ನಡುವೆ ಒಂದು ಆತ್ಮಿಯ ಬಂಧ ಎರ್ಪಡುತ್ತಿದೆ ಅನ್ನಿಸುತ್ತಿತ್ತು. ಕೆಲವೊಂದು ಸಾರಿ ನಿನು ಅಳುವುದು ನನಗೆ ಕೆಳಿಸುತ್ತಿತ್ತು. ಆಗ ನಾನು ಅಳುತ್ತಿದ್ದೆ. ಕೆಲವೊಂದು ಸಾರಿ ನೀನು ತುಂಬಾ ಬೆಸರಮಾಡಿಕೊಂಡು ಕೂಗಿ ಅಳುತ್ತಿದ್ದೆ. ಆಗ ಅಪ್ಪ ನಿನಗೆ ಬೈಯುವುದು ನನಗೆ ಗೊತ್ತಾಗುತ್ತಿತ್ತು. ನನಗೆ ತುಂಬಾ ಬೆಸರವಾಗುತ್ತಿತ್ತು. ಆಗ ನಾನು ನಿನಗೆ ಒಳ್ಳೆಯ ದಿನಗಳು ಬರುತ್ತವೆ ಅಂತ ಅಂದುಕೊಳ್ಳುತ್ತಿದ್ದೆ. ನನಗೆ ನಿಜವಾಗಲು ನಿನು ಅಷ್ಟೊಂದು ಯಾಕೆ ಅಳುತ್ತಿಯ ಅಂತ ತಿಳಿಯುತ್ತಿಲಿಲ್ಲ. ಒಂದು ದಿನ ನನಗೆ ಚೆನ್ನಾಗಿ ನೆನಪಿದೆ ನಿನು ಅವತ್ತು ಇಡಿ ದಿನ ಅಳುತ್ತಲೇ ಇದ್ದೆ. ನಾನು ನಿನಗೆ ತುಂಬಾ ನೊವು ಕೊಟ್ಟೆ ಅನ್ನಿಸಿತು. ನನಗೆ ನಿವು ಯಾಕೆ ಇಷ್ಟೊಂದು ಅಸಂತೋಷವಾಗಿದ್ದಿರ ಅಂತ ತಿಳಿಯಲೆ ಇಲ್ಲ ಅಮ್ಮ.

 

ಅದೆ ದಿನ ತುಂಬಾ ಒಂದು ಕೆಟ್ಟ ಘಟನೆ ನಡೆಯಿತು. ಆ ದಿನ ನಮ್ಮ ಮನೆಗೆ ಒಬ್ಬ ತುಂಬಾ ಕ್ರೊರ ಮುಖದ ರಾಕ್ಷಸ ಕಾಲಿಟ್ಟ ನಾನು ಆಗ ಇನ್ನು ನಿನ್ನ ಹೊಟ್ಟೆಯಲ್ಲಿಯೇ ಇದ್ದೆ. ನಿಜ ನಂಗೆ ಅವನನ್ನು ನೂಡಿ ಭಯ ಆಯಿತು ಅಮ. ನಾನು ಕೂಗಲು ಪ್ರಾರಂಭಿಸಿದೆ ಆದರೆ ನಿನು ನನಗೆ ಸಹಾಯವೆ ಮಾಡಲಿಲ್ಲ. ನನ್ನ ಕೂಗು ನಿನಗೆ ಕೆಳಿಸುವುದಿಲ್ಲ ಅಂತ ಅಂದುಕೊಂಡು ಸುಮ್ಮನಾದೆ. ಆದರೆ ಆ ರಾಕ್ಷಸ ತುಂಬಾ ಅಂದರೆ ತುಂಬಾ ಹತ್ತಿರ ಬರುವುದಕ್ಕೆ  ಶುರುಮಾಡಿದ, ಆಗ ನಾನು ಜೊರಾಗಿ ಕೂಗಿದೆ ಅಮ್ಮ ಅಮ್ಮ ಕಾಪಾಡಮ್ಮ ಪ್ಲಿಸ್ ಅಂತ. ಆ ಕ್ಷಣ ನಿಜವಾದ ಭಯ ನನ್ನನ್ನು ಅವರಿಸಿಕೊಂಡಿತ್ತು. ನಾನು ಕೂಗುತ್ತಲೇ ಇದ್ದೆ, ಆ ರಾಕ್ಷಸ ನನ್ನ ಎಳೆಯ ಕೈಗಳನ್ನು ಹಿಡಿದು ನನ್ನನ್ನು ಎಳೆಯೊಕೆ ಶುರುಮಾಡಿದ ನನಗಾಗ ಎಷ್ಟುನೊವಾಯಿತು ಗೊತ್ತಾ , ಆ ನೊವು ವಿವರಿಸಲು ಆಗುವುದೆ ಇಲ್ಲ. ಅದರು ಅವನು ನಿಲ್ಲಿಸಲೆ ಇಲ್ಲ ನಾನು ಅವನ ಹತ್ತಿರ ಎಷ್ಟು ಬೆಡಿದೆ ಗೊತ್ತಾ ನಿಲ್ಲಿಸು ಅಂತ. ಆದರೆ ಅವನು ನನ್ನ ಕೂಗಿನಿಂದ ಇನ್ನಷ್ಟು ಉತ್ತೆಜಿತನಾಗಿ ನನ್ನ ಕಾಲನ್ನು ಹಿಡಿದು ಎಳೆಯಲು ಪ್ರಾರಂಭಿಸಿದ. ನಿಜವಾಗಲು ಆಗ ನಾನು ನೊವಿನ ಅಂತಿಮ ಹಂತದಲ್ಲಿದ್ದೆನೆ ಅನ್ನಿಸುತ್ತಿತ್ತು. ನಿಂಗೆ ಗೊತ್ತಾ ಅಮ್ಮ ನಾನು ಸಾಯುತ್ತಿದ್ದೆ. ಮತ್ತು ಸಾವಿನ ಪ್ರತಿ ಕ್ಷಣದ ನೊವನ್ನು ನಾನು ಅನುಭವಿಸುತ್ತಿದ್ದೆ. ನನಗೆ ಗೊತ್ತಾಯಿತು ನಾನು ನಿನ್ನ ಮುಖ ನೊಡಲು ನಿನ್ನ ಪ್ರಿತಿಯ ಮಾತುಗಳನ್ನು ಕೆಳಲು ಸಾಧ್ಯವಿಲ್ಲ ಅಂತ. ನಿಜ ಹೇಳಲ ಅಮ್ಮ ನಾನು ನಿನ್ನ ಕಣ್ಣಿರನ್ನೆಲ್ಲ ದೂರ ಮಾಡಿ ನಿಮಗೆಲ್ಲ ಸಂತೊಷವನ್ನು ನಿಡಬೆಕೆಂದಿದ್ದೆ. ನಾನು ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದೆ, ಆದರೆ ಈಗ ನನ್ನೆಲ್ಲ ಕನಸುಗಳು ಭಗ್ನಗೊಂಡಿ. ಈಗ ನಾನು ಅಂತ್ಯಂತ ನೊವು ಮತ್ತು ಭಯ ಅನುಭವಿಸುತ್ತಿದ್ದೆನೆ. ನನಗೆ ನನ್ನ ಹೃದಯವೇ ಒಡೆದುಹೊಗುವಷ್ಟು ನೊವಾಗುತ್ತಿದೆ. ಅಮ್ಮ ನಾನು ನಿನ್ನ ಮಗಳಾಗಬೇಕು ಅಂತ ಒಂದೆ ಆಸೆಯಲ್ಲಿದ್ದೆ , ಅದರೆ ಈಗ ಅದು ಸಾಧ್ಯವಿಲ್ಲ ಬಿಡು ನಾನು ನಿನ್ನ ಎದುರಿನಲ್ಲೆ ಅಂತ್ಯಂತ ನೊವಿನ ಸಾವು ಸಾಯುತ್ತಿದ್ದೆನೆ. ಆ ರಾಕ್ಷಸರು ನಮಗೆ ನಿಡುವ ನೊವನ್ನು ನಾನು ಕನಸಿನಲ್ಲಿಯು ಕಲ್ಪಿಸಿಕೊಂಡಿರಲಿಲ್ಲ ಕಣೇ. ಅಮ್ಮ ಸಾಯುವುದಕ್ಕಿಂತ ಮುಂಚೆ ನಿನಗೆ I love you ಹೆಳಬೇಕಿಂದಿದ್ದೆ ಆದರೆ ನನ್ನಿಂದ ಅದು ಆಗಲೇ ಇಲ್ಲ. ಯಾಕೆ ಅಂದರೆ ಅಷ್ಟರಲ್ಲಾಗಲೇ ಆ ರಾಕ್ಷಸ ನನ್ನನ್ನು ಪೂರ್ತಿಯಾಗಿ ನಿನ್ನ ಬಂಧನದಿಂದ ಕಿತ್ತು ಹಾಕಿದ್ದ. ನಾನು ಸತ್ತು ಹೊದೆ ಕಣೆ ಅಮ್ಮ ನಿನ್ನೆದಿರೆ. . . . . . . .

 

ನಂತರ ನನಗೆ ನಾನು ಮೇಲೆ ಹೊಗುತ್ತಿದ್ದೆನೆ ಅನ್ನಿಸಿತು ಒಬ್ಬ ದೆವ ಕನ್ಯ ನನ್ನನ್ನು ತಬ್ಬಿಕೊಂಡು ಒಂದು ಸುಂದರ ಪ್ರದೇಶಕ್ಕೆ ತಂದಳು ನಾನು ಅವಾಗಲು ಅಳುತ್ತಲೇ ಇದ್ದೆ ಅದರೆ ದೈಹಿಕವಾದ ನೊವು ಇರಲಿಲ. ಆ ದೆವಕನ್ಯ ಒಂದು ಒಳ್ಳೆಯ ತಾಣಕ್ಕೆ ಕರೆದೊಯ್ದಳು ಅದಕ್ಕೆ ಸ್ವರ್ಗ ಅಂತ ಹೆಸರಂತೆ.  ನನಾಗ ಸಾಮಾಧಾನಗೊಂಡೆ. ನಾನು ಆ ದೆವತೆಯನ್ನು ಕೆಳಿದೆ. ನನ್ನನ್ನು ಕೊಂದ ಆ ರಾಕ್ಷಸನ ಹೆಸರೆನು ಅಂತ. ಅವಳು ಹೇಳಿದಳು ಅಬರ್ಷನ್ ನಿಜ ಅಮ್ಮ ನನಗೆ ಬೆಜಾರಾಗುತ್ತದೆ ಎಷ್ಟುನೊವಾಗುತ್ತದೆ ಗೊತ್ತಾ ನನಗೆ , ಅಬಾರ್ಷನ್ ಅಂದರೆ ನಿಜ ಗೊತ್ತಿಲ್ಲ ಆದರೆ ನನ್ನನ್ನು ನೊಯಿಸಿ ಸಾಯಿಸಿದ ಆ ರಾಕ್ಷಸನನ್ನು ಗುರುತಿಸಬಲ್ಲೆ.

ನಾನು ಯಾಕೆ ಈ ಪತ್ರ ಬರೆದೆ ಅಂದರೆ ನಾನು ನಿನ್ನನ್ನು ತುಂಬಾ ಪ್ರಿತಿಸುತ್ತಿದ್ದೆ. ಮತ್ತು ನಿನ್ನ ಪುಟ್ಟ ಮಗಳಾಗಬೇಕು ಅಂತ ತುಂಬಾ ಕಾತರದಿಂದ ಕಾಯುತ್ತಿದ್ದೆ. ಆದರೆ ಬದುಕುವುದು ತುಂಬಾ ಕಷ್ಟ ಅಂತ ನನಗೆ ಗೊತ್ತಿರಲಿಲ್ಲ. ಆದರೆ ನಾನು ಬದುಕಬೇಕೆಂದಿದ್ದೆ. ನನಗೆ ಆ ಆತ್ಮವಿಶ್ವಸ ಇತ್ತು. ಆದರೆ ಆ ರಾಕ್ಷಸ ನನಗಿಂತ ತುಂಬಾ ಬಲಶಾಲಿಯಾಗಿದ್ದ ಅವನು ನನ್ನ ಕೈ , ಕಾಲು ಎಲ್ಲವನ್ನು ಹಿಡಿದು ಎಳೆದು ಹಾಕಿದ ನಾನು ಬದುಕಬಹುದಾದ ಒಂದೆ ಒಂದು ಅವಕಾಶವನ್ನು ನನಗೆ ನಿಡಲಿಲ್ಲ ಪಾಪಿ. ಅದರೆ ನನಗೆ ನಿನ್ನ ಜೊತೆಯೇ ಇರಬೇಕು ಅಂತ ಅನ್ನಿಸುತ್ತಿದೆ ನಾನು ಸಾಯೊಕೆ ಇಷ್ಟಪಟ್ಟಿರಲಿಲ್ಲ. ಅಮ್ಮ ದಯವಿಟ್ಟು ಅ ಅಬಾರ್ಷನ್ ಎಂಬ ರಾಕ್ಷಸನ ಬಗ್ಗೆ ಎಚ್ಚರದಿಂದಿರು ಯಾಕೆ ಅಂದರೆ ನಾನು ನಿನ್ನನ್ನು ಪ್ರಿತಿಸುತ್ತೆನೆ ಮತ್ತು ಆ ರಿತಿಯ ನೊವಿನ ಸಾವು ನನ್ನ ತಂಗಿಗೂ ಬಾರದಿರಲಿ. ಹುಷಾರು ಕಣೇ ಅಮ್ಮ. ನನಗೆ ಒಂದು ಹೇಳು  ಹೆಣ್ಣಿನ ವಿಷಯದಲ್ಲಿ ಮನುಷ್ಯರೆಲ್ಲ ಯಾಕಮ್ಮ ಇಷ್ಟು ಕ್ರೂರಿಗಳು. . . .

ಗುರುವಾರ, ಫೆಬ್ರವರಿ 19, 2009

ಸಂತೋಷ್ ಬರೆದ ಕವಿತೆ

ಎಲ್ಲಿಂದಲೋ ಬಂದೆವು, ಒಂದಾಗಿ ಬೆರೆತೆವು..
ಏನೇ ಆದರೂ ನಕ್ಕು ನಲಿಯುತ ಕಾಲ ಕಳೆದೆವು..
ಅನಿಸಿರಲಿಲ್ಲ, ದೂರವಾಗುವ ದಿನವೊಂದು
ಇಷ್ಟು ಬೇಗ ಬರುವುದೆಂದು...
ಏನು ಮಾಡುವುದು ಜಗತ್ತಿನ ರೀತಿಯೇ ಹಾಗೆ
ಪರಿಚಯವೊಂದು ದಿನ, ಸ್ನೇಹವೊಂದು ದಿನ
ದೂರವಾಗುವ ದಿನ ಮತ್ತೊಂದು..
ಬಯಸಿದರು ಬಿಟ್ಟು ಹೋಗಬಾರದೆಂದು
ಸಾಧ್ಯವಿಲ್ಲ....
ಏನಾಗಬೇಕೋ ಅದು ಆಗೇ ತೀರುವುದು..
ಎಲ್ಲವು ನೆನೆಪುಗಳೆಂಬ ಪುಸ್ತಕದಲ್ಲಿ
ಅಳಿಸಲಾಗದ ಅಕ್ಷರಗಳಾಗಿ ಉಳಿಯುವುವು....

ಮುಂಜಾವಿನ ಶುಭಾಶಯಗಳು......

ಜಾತಿ ವಾದಿಗಳಿಗೆ ಹಿನ್ನೆಡೆಯಾದ ಉತ್ತರ ಪ್ರದೇಶದ ಚುನಾವಣೆ

ನಿನ್ನೆ ಪ್ರಕಟಗೊಂಡ ಉತ್ತರ ಪ್ರದೇಶ ಚುನಾವಣಾ ಪಲಿತಾಂಶ ಭಾರತದ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಇಲ್ಲಿಯವರೆವಿಗೂ ಜಾತಿಯ ರಾಜಕಾರಣವನ್ನು ಕಸುಬಾಗಿಸಿಕೊಂಡಿದ್ದ ,ಜಾತಿಯ ನಡುವಿನ ತಾರತಮ್ಯಗಳನ್ನು ಜಾತಿ ವ್ಯವಸ್ಥೆ ಎಂದು ನಿರೂಪಿಸಿ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳಿಗೆ ಮತ್ತು ಜಾತಿವಾದಿಗಳಿಗೆ ಇದು ಅಚ್ಚರಿಯ ಸಂಗತಿಯಾಗಿದೆ. ಏಕೆಂದರೆ, ಇವರ ಪ್ರಕಾರ ಇಂದು ಭಾರತದಲ್ಲಿ ಜಾತಿವ್ಯವಸ್ಥೆ ಬೇರು ಬಿಟ್ಟಿದೆ, ದಲಿತರು ಸಂಪೂರ್ಣ ಶೋಷಣೆಗೊಳಗಾಗಿದ್ದಾರೆ, ಬ್ರಾಹ್ಮಣಶಾಹಿತ್ವ ಈಡೀ ಸಮಾಜವನ್ನು ಸಾಮಾಜಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ ಎಂಬ ನಂಬಿಕೆಗಳಿಗೆ, ಈ ಚುನಾವಣಾ ಪಲಿತಾಂಶ ಬಲವಾದ ಪೆಟ್ಟನ್ನು ನೀಡಿದೆ. ಇಂದು ಮಾಯಾವತಿ ಒಬ್ಬ ದಲಿತ ನಾಯಕಿಯಾಗಿ ಉತ್ತರಪ್ರದೇಶದಲ್ಲಿ ಗಳಿಸಿದ ಜಯಭೇರಿ ನಿಜವಾಗಲೂ ನಮ್ಮ ಜಾತಿ ವ್ಯವಸ್ಥೆ ಕುರಿತಾದ ಚಿಂತನೆಗಳ ದಿಕ್ಕನ್ನು ಬದಲಿಸಿಕೊಳ್ಳಲು ಸಹಕಾರಿಯಾಗಿದೆ. ಒಟ್ಟಾರೆ ಭಾರತದ ಜಾತಿ ವ್ಯವಸ್ಥೆಯ ಮೂಲಭೂತ ಲಕ್ಷಣಗಳಾದ ವರ್ಣವ್ಯವಸ್ಥೆ, ಮೇಲು-ಕೀಳು, ಶುದ್ಧ-ಅಶುದ್ಧ, ಬ್ರಾಹ್ಮಣ- ಅಸ್ಪೃಶ್ಯ ಎಂಬಿತ್ಯಾದಿ ಪೂರ್ವಗ್ರಹಿಕೆಗಳನ್ನು ಹೊಂದಿ ಕಳೆದ ೫೦-೬೦ ವರ್ಷಗಳಿಂದಲೂ ಈ ಹೇಳಿಕೆಗಳನ್ನೇ ಪುನರುಚ್ಚರಿಸುತ್ತಿದ್ದ ಜಾತಿವಾದಿಗಳಿಗೆ ಮತ್ತು ಜಾತಿ ಸಂಘಟನೆಗಳಿಗೆ, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಮಾಯಾವತಿಯ ಬಹುಜನ ಸಮಾವಾದಿ ಪಕ್ಷ ಪಡೆದಿರುವ ಜಯ, ಆ ಹಳೆಯ ಸಿದ್ದಾಂತಗಳನ್ನು ಬಿಟ್ಟು ಜಾತಿ ಮತ್ತು ರಾಜಕಾರಣದ ಕುರಿತು ಹೊಸ ರೀತಿಯಲ್ಲಿ ಯೋಚಿಸುವ, ಜ್ಞಾನವನ್ನು ಉತ್ಪಾದಿಸುವ, ಸಮಾಜದ ಸಂಪ್ರದಾಯಗಳನ್ನು ಸರಿಯಾಗಿ ಅರ್ಥೈಸಲು ಮತ್ತು ವ್ಯಾಖ್ಯಾನಿಸಲು ಅನೇಕ ಮಾರ್ಗಗಳನ್ನು ತೆರೆದಿದೆ. ಆದರೆ ನಮ್ಮ ವಿದ್ವಾಂಸರು ಹಳೆಯ ಪೂರ್ವಾಗ್ರಹಗಳಿಂದ ಹೊರಬಂದು ಸಮಾಜವನ್ನು ನೋಡುವ, ಅರ್ಥೈಸುವ ಅಗತ್ಯತೆ ಇದೆ.

ಲೇಖನ ಬರೆಯುತ್ತೇನೆ ಎಂದ ಹುಡುಗಿ. .

ಪೆಟ್ರೋಲ್ ಇಲ್ಲದೆ ಸೊರಗಿದ್ದ ನನ್ನ ಇನಿಯ ( ನನ್ನ ಬೈಕ್‌ನ ಹೆಸರು) ಪಕ್ಕೆಗೆ ಬಲವಾಗಿ ಒದ್ದು ಕಷ್ಟ ಪಟ್ಟು ಸ್ಟಾಟ್ ಮಾಡಿ ಕುವೆಂಪು ವಿ.ವಿ ಯ ಮೆಜೆಸ್ಟಿಕ್ ಎಂದೇ ಕರೆಯುವ ಬಸ್ ಸ್ಟಾಂಡ್ ಕಡೆ ಹೊರಟಾಗ ಆಗಲೇ ಸಂಜೆ ೫-೧೫ ಆಕಾಶ ಆಗಲೆ ಕೆಂಪು , ಕಪ್ಪು ಮಿಶ್ರಿತ ಬಣ್ಣದಿಂದ ಮಂಕಾಗಿತ್ತು. ಸೂರ್ಯ ಪಶ್ಚಿಮದಲ್ಲಿ ಯಾವುದೊ ನಿರಾಸೆಯಲ್ಲಿ ದಿನದ ಬೆಳಕಿಗೆ ವಿದಾಯ ಹೇಳಲು ಅಣಿಯಾಗುತ್ತಿದ್ದ . ಹಕ್ಕಿಗಳು ಗೊಡಿನ ಕಡೆ ಮುಖ ಮಾಡಿ ಹೊರಡುತ್ತಿದ್ದವು . ಆಗ ತಾನೆ ನೈಟ್ ಡ್ಯೂಟಿಗೆ ನಿಯೊಜನೆಗೊಂಡ ಸೆಕ್ಯುರಿಟಿಗಳನ್ನು ಸಾಲಾಗಿ ನಿಲ್ಲಿಸಿ ಅವರಿಗೆ ಡ್ಯೂಟಿ ವಿವರಿಸುತ್ತಿದ್ದ ಸೊಪರ್ ವೈಸರ್ ನನ್ನೆಡೆ ನೋಡಿ ಮುಗುಳ್ನಕ್ಕಾಗ ಆ ನಗುವಿನಲ್ಲಿ ಯಾವುದೊ ಆಕರ್ಷಣೆ ಇರುವಂತೆ ತೊರಿತು. ಅಷ್ಟರಲ್ಲಾಗಲೇ ಹಾಸ್ಟೆಲಿನಿಂದ ಹುಡುಗಿಯರ ದಂಡು ಮೆಜೆಸ್ಟಕ್ ಕಡೆ ಮುಖ ಮಾಡಿತ್ತು. ಅವರನ್ನೆ ಹಿಂಬಾಲಿಸುತ್ತಿದ್ದ ಹುಡುಗರ ದಂಡು ಬಸ್ ಸ್ಟಾಂಡ್ ಕಡೆ ತೆವಳುತ್ತಿತ್ತು. ಆ ಎರಡು ಗುಂಪುಗಳನ್ನು ತದೇಕಚಿತ್ತದಿಂದ ನೊಡುತ್ತಿದ್ದ ಕೆಳಗಿನ ಲೊಕಲ್ ಹುಡುಗರು ಸ್ಟಾಂಡಿನ ಎದುರಿನ ಕಟ್ಟೆಗಳ ಮೇಲೆ ಜಮಾಯಿಸಿ ಯಾವುದೊ ಅರ್ಥವಾಗದ ಭಾಷೆಯಲ್ಲಿ ಗುಸು ಗುಸು ಶುರುಮಾಡಿದ್ದರು. ಅದನ್ನೆ ಗಮನಿಸುತ್ತಾ ಮುಂದೆ ಹೊದರೆ ಆಗ ತಾನೆ ವ್ಯಪಾರಕ್ಕೆ ಅಣಿಯಾಗುತ್ತಿದ್ದ ಗೊಭಿ , ಪಾನಿ ಪುರಿ , ಮಂಡಕ್ಕಿಯ ವ್ಯಪಾರಿಗಳು ತಮ್ಮ ಗಿರಾಕಿಗಳ ನಿರಿಕ್ಷೇಯಲ್ಲೆ ನಿಂತಿರುವಂತೆ ತೊರುತ್ತಿದ್ದರು.

ಆಗ ಅಕಸ್ಮಾತ್ ಕಣ್ಣಿಗೆ ಬಿದ್ದವರು ಬೆಳಗ್ಗೆ ಇದ್ದಕ್ಕಿಂದಂತೆ ಎದುರಾಗಿ ನೀವು ಲೇಖನ ಬರೆಯುತ್ತಿರಂತೆ ! ನನ್ನ ಗೆಳತಿ ಹೇಳಿದಳು. (ಅನ್ನೊ ರೆಕಮೆಂಡ್ ಜೋತೆಗೆ ) ನಾನು ಬರೆಯಬೇಕು ಅಂತ ಇದ್ದೆನೆ. ಆದರೆ ಹೇಗೆ ಬರೆಯುವುದು ಎಂದು ಕೇಳಿ, ಬಸ್ ಸ್ಟಾಂಡ್ ಬಗ್ಗೆ ಬರೆಯುತ್ತೆನೆ. ಎಂಬ ಹೊಂ ವರ್ಕ್ ತೆಗೆದುಕೊಂಡು ಹೋದ ದಾವಣಗೆರೆಯ ಇಂಗ್ಲಿಷ್ ವಿಬಾಗದಲ್ಲಿ ಎಂ.ಎ ಮಾಡುತ್ತಿರುವ ಹುಡುಗಿ. ಯಾರೊ ನಾಲ್ಕು ಹುಡುಗಿಯರ ಜೋತೆ ಒಂದು ಸ್ವಿಟ್ ಸ್ಟಾಲ್ ಮುಂದೆ ಜಮಾಯಿಸಿ ಚೌಕಾಸಿಯಲ್ಲಿರುವಂತೆ ಕಾಣುತ್ತಿದ್ದರು. ಅವರಲ್ಲಿಯೆ ಇದ್ದ ಹುಡುಗಿಯೊಬ್ಬಳು ಯಾವುದೋ ಮುಗ್ದತೆಯಲ್ಲಿ ಜೀವನದ ಪ್ರಮುಖ ವಿಷಯವನ್ನು ಎಲ್ಲರಿಗೂ ಹೇಳುವ ಪ್ರಯತ್ನದಲ್ಲಿರುವಂತೆ ಕಂಡಾಗಲೆ ಜೋರಾಗಿ ಬಂದ ಬಸ್ಸು ಅವರ ಮುಖದ ಮೇಲೆಲ್ಲ ಧೂಳು ಹಾರಿಸಿ ನಕ್ಕು ಮುಂದಕ್ಕೆ ಹೊದಂತಾಯಿತು. ಮರುಕ್ಷಣವೇ ಎಲ್ಲರ ಚುನ್ನಿ ಅವರುಗಳ ಬಾಯಿ ಮುಖ ಮುಚ್ಚಿಯಾಗಿತ್ತು. ಪಾಪ ಜೀವನದ ಯಾವುದೊ ಘಟನೆಯನ್ನು ಹೇಳಲು ಹೊರಟಿದ್ದ ಹುಡುಗಿಯ ಬಾಯಿ ಮುಚ್ಚಿಸಿದ ಬಸ್ ಮೇಲೆ ನನಗೆ ಕೊಪ ಬರುತ್ತಿತ್ತು. ಬಸ್ ಸ್ಟಾಂಡ್ ಬಗ್ಗೆ ಲೇಖನ ಬರೆಯಲು ಹೊರಟ ಹುಡುಗಿಯ ಅವಸ್ಥೆ ನೋಡಿ ನಗುತ್ತಾ ಷ್ರೈಡ್ ರೈಸ್ ಗಾಡಿಯ ಹತ್ತಿರ ಹೋಗಿ ಖರವಾದ ರೈಸ್‌ಗೆ ಅರ್ಡರ್ ಮಾಡುವ ಹೊತ್ತಿಗೆ ಸರಿಯಾಗಿ , ಅದೇ ಗಾಡಿಯಲ್ಲಿ ಕೆಲಸ ಮಾಡುವ ೮-೧೦ ವರ್ಷದ ಹುಡುಗನಿಗೆ ವಿಪರಿತವಾದ ಜ್ವರ , ನೆಗಡಿ , ಕೆಮ್ಮು ಇರುವುದು ನನ್ನ ಗಮನಕ್ಕೆ ಬರತೊಡಗಿತು. ಆದರೂ ಅವನು ಕೆಮ್ಮುತ್ತಲೆ ಕೆಲಸ ಮಾಡುತ್ತಿದ್ದ. ಆಗ ತಾನೆ ಕೆಲಸ ಮುಗಿಸಿ ಅಲ್ಲಿಗೆ ಬಂದ ಆತನ ತಾಯಿ ಈಗ ಹೇಗಿದ್ದಿಯ ನನ್ನ ಮಾತೆ ಕೆಳಲ್ಲ ಅಣ್ಣಾ ! ಮಳೆಯಲ್ಲಿ ನೆನೆಯುತ್ತಾನೆ. ಈಗ ನೋಡು ಅಂತ ತಲೆ ಸವರಿ ಗಾಡಿಯ ಒನರ್‌ಗೆ ಹೇಳಿದಾಗ. ಆತ ಯಾವುದೊ ನಿರ್ಲಕ್ಷ್ಯದಲ್ಲಿ ಹೌದು ಹೌದು ಎಂದು ತಲೆಯಾಡಿಸಿದುದು ಕಾಣಿಸಿತು . ಆಗ ಇದೇ ಜಾಗದಲ್ಲಿ ಒನರ್‌ನ ಮಗನೆ ಇದ್ದಿದ್ದರೆ ಆತನ ಪ್ರತಿಕ್ರಿಯೇ ಹೇಗಿರುತ್ತಿತ್ತು ಎಂದು ನೆನೆದು ನನ್ನ ಮನಸ್ಸು ಸುಮ್ಮನಾಯಿತು. ಅಷ್ಟರಲ್ಲಾಗಲೇ ಹುಷಾರಿಲ್ಲದ ಮಗನಿಗೆ ರಜಾ ಸಿಗಬಹುದು ಎಂದು ನಿರಿಕ್ಷಿಸಿದ್ದ ತಾಯಿ ಭಾರವಾದ ಮನಸ್ಸು ಮತ್ತು ನಿಟ್ಟುಸಿರಿನೊಂದಿಗೆ ಮಗನೆಡೆಗೆ ನೋಡಿ ಬಸ್ಸು ಎಬ್ಬಿಸಿದ ಧೂಳಿನಲ್ಲಿ ಮರೆಯಾಗಿದ್ದಳು.

ಇದನ್ನೆ ಗಮನಿಸುತ್ತಾ ಲೇಖನ ಬರೆಯೋ ಹುಡುಗಿ ಎಲ್ಲಿದ್ದಾಳೆ ಎಂದು ಹುಡುಕಿದಾಗ ಆಗಲೇ ಇನ್ನಾವುದೊ ಅಂಗಡಿಯ ಮುಂದೆ ನಿಂತು ಮುಖಕ್ಕೆ ಹತ್ತಿದ್ದ ಧೂಳನ್ನು ಒರೆಸಿಕೊಳ್ಳುತ್ತಾ ಚೌಕಾಸಿ ಮಾಡುತ್ತಾ ನಿಂತಿರುವಂತೆ ಕಾಣಿಸಿತು. ಅದನ್ನೆ ನೊಡಿ ನಗುಬೇಕು ಅಂದುಕೊಂಡಾಗಲೇ ಏ. . . . .ಮಂಗ ನಿರು ಕೇಳಿ ಎಷ್ಟು ಹೊತ್ತಾಯಿತು ಕೊಡಲೇ . . . . .ಎಂದು ಅದೇ ಹುಷಾರಿಲ್ಲದ ಹುಡುಗನನ್ನು ಹುಡುಗಿಯರು ತನ್ನ ಸುತ್ತ ಇರುವ ಗತ್ತಿನಲ್ಲಿ ದಬಾಯಿಸುತ್ತಿದ್ದ ಸ್ನಾತಕೊತ್ತರ ಪದವಿ ಒದುತ್ತಿರುವ ಯುವಕ ಒಂದೆಡೆ ಕಂಡರೆ , ಇದಾವುದರ ಪರಿವೇ ಇಲ್ಲದೆ ಸಂಜೆಯ ರಂಗಿನಲಿ ತೆಲುತ್ತಿದ್ದ ಹುಡುಗ ಹುಡುಗಿಯರ ದಂಡು ನನ್ನ ಸುತ್ತಾ ನಲಿಯುತ್ತಿತ್ತು. ಅದನ್ನೆ ಯೊಚಿಸುತ್ತಾ ಹಾಸ್ಟೆಲ್‌ಗೆ ಬಂದು ಮಲಗಿದಾಗ ಏ. . . . . ಎನು ಆಗಲ್ಲ ಬಿಡೆ ಅಮ್ಮ ನಾ ಆಮೇಲೆ ಬರ್‌ತಿನಿ ನಿ ಹೋಗು ಮಳೆ ಬರ್‍ತದ ಎಂದು ತಾಯಿಗೆ ಹೇಳಿದ ಆ ಹುಡುಗನ ಮಾತುಗಳು ಯಾಕೊ ಮತ್ತೆ ಮತ್ತೆ ನೆನಾಪಾಗುತ್ತಿದ್ದವು.

ಸುಮ್ಮನೆ ಗಮನಿಸಿ ಇದು ಪ್ರತಿಯೊಂದು ಕಾಲೇಜುಗಳ ಮುಂದೆ ನಡೆತಯವ ಸಾಮಾನ್ಯ ಪ್ರಕ್ರಿಯೇ ಈ ರಿತಿಯ ಸಣ್ಣ ಸಣ್ಣ ವಿಷಯಗಳ ಬಗ್ಗೆ ಯುವ ಜನತೆಯ ಗಮನ ಸೆಳೆದು ಅವರಲ್ಲಿಯು ಶೋಷಿತರ ಸಮಸ್ಯಗಳಿಗೆ ತುಡಿಯುವಂತೆ ಮಾಡುವ ಶಿಕ್ಷಣ ಯಾಕೆ ದೊರೆಯುತ್ತಿಲ್ಲ. ಶಾಲೆ ಕಾಲೇಜುಗಳ ಮುಂದಿರುವ ಪಾನಿಪುರಿ ಮಾರುವ ಹುಡುಗ , ಪೇರಲೇ ಕಾಯಿ ಉಪ್ಪು ಇಟ್ಟುಕೊಂಡು ಕುಳಿತಿರುವ ವಯಸ್ಸಾದ ಅಜ್ಜಿ . ನಾವು ಪ್ರತಿದಿನ ಒಡಾಡುವ ದಾರಿಯಲ್ಲಿ ಕುಳಿತು ಹೋಗಿ ಬರುವವರ ಕಾಲನ್ನೆ ನೋಡುವ ನಮ್ಮದೇ ವಯಸ್ಸಿನ ಚಪ್ಪಲಿ ರಿಪೇರಿ ಅಂಗಡಿಯ ಹುಡುಗ. ಇವರಲ್ಲ ಯಾಕೆ ನಮ್ಮ ಗಮನಕ್ಕೆ ಬರೊಲ್ಲ . ಇಂದಿನ ಜಾಗತಿಕರಣ ಪ್ರರಿತ ಉದ್ಯೊಗ ಮಾರುಕಟ್ಟೆಗೆ ಕೂಲಿಗಳನ್ನು ತಾಯಾರು ಮಾಡುವ ಬರದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕೇವಲ ನಾಲ್ಕು ಗೊಡೆಗಳ ಪಠ್ಯಕ್ಕೆ ಸಿಮಿತಗೊಳಿಸುತ್ತಿವೆ. ಇದರ ತಿರ್ವ ಪರಿಣಾಮ ನೈತಿಕತೆಯ ನಾಶ. ಬದುಕು ಎಂದರೆ ಕೇವಲ ಉತ್ತಮ ಕೆಲಸ. ಒಂದು ಕಾರು , ನಗರದಿಂದ ೧೦ ಕಿ.ಮಿ ದೊರದಲ್ಲಿ ಒಂದು ಸುಂದರ ಮನೆ. ಮನಕ್ಕೊಪ್ಪುವ ಹೆಂಡತಿ. ಎನ್ನುವ ಹಂತಕ್ಕೆ ನಾವು ಆಗಲೇ ಬಂದಾಗಿದೆ. ಪದವಿ ಒದುತ್ತಿರುವ ಹುಡುಗರನ್ನು ಸುಮ್ಮನೆ ಕೇಳಿ ನೋಡಿ ಜೀವನ ಅಂದರೆ ಎನು ಅಂತ. ಅದರಲ್ಲಿ ತುಂಬಾ ಜನರ ಉತ್ತರ ಒಳ್ಳೆ ಕಂಪೆನಿಯಲ್ಲಿ ಕೆಲಸ , ಮನೆ , ಕಾರು ಇವುಗಳ ಸುತ್ತಲೇ ತಿರುಗುತ್ತಿರುತ್ತದೆ. ಯಾಕೆ ಹೀಗಾಗಿದೆ ಜೀವನ ಅಂದರೆ ನಮ್ಮ ವಯಕ್ತಿಕ ಬದುಕು ಮಾತ್ರವ ? ಆದರಾಚೆಗಿನ ನಮ್ಮ ಸಾರ್ವಜನಿಕ ಬದುಕನ್ನು ಬದುಕು ಎಂದು ಎಕೆ ನಾವು ಸ್ವಿಕರಿಸುತ್ತಿಲ್ಲ.? ಯುವಕರಾಗಿ ನಮ್ಮ ನಿಜವಾದ ತುಡಿತ ಇರಬೇಕಾಗಿರುವುದು ಸಾರ್ವಜನಿಕವಾಗಿ ನಮಗಿರುವ ಜವಬ್ದಾರಿಯ ಮೇಲಲ್ಲವೆ ? ಯಾಕೆ ನಾವು ಅದರಿಂದ ದೊರ ನಿಂತು ಯೊಚಿಸುತ್ತೆವೆ. ಎಕೆಂದರೆ ಇಂದು ನಮಗೆ ಸಿಗುತ್ತಿರುವ ಶಿಕ್ಷಣ ನೈತಿಕತೆಗಿಂತ ಹೆಚ್ಚಾಗಿ ಉದ್ಯೋಗ ಮಾರುಕಟ್ಟೆಯ ಧಣಿಗಳ ಆಸೆಗೆ ಪೊರಕವಾಗುತ್ತಿದೆ. ಇಂದು ನಿಮ್ಮ ಮಗು ಅಮ್ಮ ನಾನು ಇಂಜಿನಿಯರ್ ಆಗುತ್ತೆನೆ. ಡಾಕ್ಟರಿಕೆ ಮಾಡುತ್ತೆನೆ. ಎಂದಾಗ , ಸಂತೊಷದಿಂದ ಹುಚ್ಚಿಗೆ ಬಿದ್ದಂತೆ ಅವುಗಳ ಬಗ್ಗೆ ವಿವರಿಸುವ ನಾವು. ಅದೇ ಮಗು ಮನೆಗೆ ತನ್ನದೆ ವಯಸ್ಸಿನ ಬಿಕ್ಷುಕರು ಬಂದಾಗ ಅಮ್ಮ ಯಾಕಮ್ಮ ಅವರು ಹಿಗಿದ್ದಾರೆ ಎಂದು ಕೇಳಿದಾಗ ಉತ್ತರಿಸಲು ತೊಚದೆ ಅವರೆಲ್ಲ ಮೈಗಳ್ಳರು ಅಂತ ಹೇಳಿ ತಪ್ಪಿಸಿಕೊಳ್ಳುತ್ತೆವೆ. ಹಸಿವು ಬಡತನ , ನೊವು , ಕಣ್ಣಿರು ಇವೆಲ್ಲ ಕೇವಲ ಪುಸ್ತಕದಲ್ಲಿ ತೊರಿಸಿ ಕಲಿಸಲು ಸಾಧ್ಯವಾ ಮಿತ್ರಾ ? ಆದರೆ ಆ ದಿಕ್ಕಿನಲ್ಲಿ ನಾವು ಬಹುದೊಡ್ಡ ಹೆಜ್ಜೆಗಳನ್ನಿಟ್ಟಿದ್ದವೆ. ಆದರ ಹೆಸರೆ ಆಧುನಿಕ ಶಿಕ್ಷಣ. .

ಆನೂ ಕುಲ ಹೊರಗಿನವನು

ಡಾ. ಬಂಜೆಗೆರೆ ಜಯಪ್ರಕಾಶ್ ರವರ ಆನುದೇವ ಹೊರಗಣವನು ಕೃತಿಯ ಕುರಿತು ನಾಡಿನಾದ್ಯಂತ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅವರ ಕೃತಿ ಒಂದು ಉತ್ತಮ ಸಂಶೋಧನೆ ಎಂದg, ಹಲವರು ಇದು ಒಂದು ಕುಹಕ, ಸತ್ಯಕ್ಕೆ ದೂರವಾದ ಸಂಶೋಧನೆ, ಹೆಸರು ಮಾಡಲು ಹೊರಟಿರುವವನ ಬರವಣಿಗೆ ಎಂಬುದಾಗಿ ಟೀಕಿಸಿದ್ದಾರೆ. ಅದರೆ ಒಬ್ಬ ಸಂಶೋಧಕನಾಗಿ ನನಗೆ ಕೃತಿಯ ಪ್ರಸ್ಥುತತೆಯ ಬಗ್ಗೆ ತುಂಬ ಜನ ಮಾತನಾಡಿಲ್ಲ ಎಂದು ಕಂಡುಬರುತ್ತz. ಪ್ರಸ್ಥುತತೆ ಎಂದರೆ ಒಂದು ಸಂಶೊಧನೆ ಒಂದು ಕಾಲಘಟ್ಟದ ಸಮಾಜಕ್ಕೆ ನೀಡುವ ಕೊಡುಗೆ ಏನು? ಮತ್ತು ಸಮಾಜ ಸಂಶೋಧನೆಯಿಂದ ಪಡೆದುಕೊಳ್ಳುವುದೇನು? ಎಂಬುದಾಗಿದೆ. ಸರಳವಾಗಿ ಒಂದು ಸಂಶೋಧನೆ ಪ್ರಸ್ಥುತ ಇರುವ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಅಂಶಗಳ ಮೇಲೆ ಬೀರುವ ಪ್ರಭಾವವೇ ಆಗಿದೆ.

ಬಂಜೆಗೆರೆ ಜಯಪ್ರಕಾಶರವರ ಒಂದು ಕೃತಿ ಇತಿಹಾಸದ ಕಾಲದಲ್ಲಿ ಮುಚ್ಚಿಹೋದ ಕೆಲವು ಸತ್ಯಗಳನ್ನು (ವೈದಿಕರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಬಸವಣ್ಣವರ ಜಾತಿಯ ಮೂಲ ಕುರಿತ ಸತ್ಯ) ಜಗತ್ತಿಗೆ ತೋರಿಸುವುದೇ ಆಗಿದೆ, ಅಂದರೆ ಬೌದ್ಧಿಕ ಪ್ರಪಂಚದ ಕೆಲವು ಅಸ್ಪಷ್ಟತೆಗಳನ್ನು ಸರಿಪಡಿಸುವುದು ಕೃತಿಯ ಮೂಲ ಉದ್ದೇಶವಾಗಿದೆ.

ಆದರೆ ಒಂದು ಸಂಶೋಧನೆಯ ಕೊಡುಗೆ ಎರಡು ರೀತಿಯಲ್ಲಿರುತ್ತದೆ. ಒಂದು, ಲೇಖಕರು ಮೇಲೆ ಹೇಳಿದಂತೆ ಇತಿಹಾಸದಿಂದ ಉದ್ದೇಶಪೂರ್ವಕವಾಗಿ ಮುಚ್ಚಿಡಲ್ಪಟ್ಟ ಕೆಲವು ವಾಸ್ತವಗಳನ್ನು, ಅಸ್ಪಷ್ಟತೆಗಳನ್ನು ಆಧಾರ ಸಹಿತವಾಗಿ ಜಗತ್ತಿಗೆ ಹೇಳುವುದಾಗಿದೆ (ಆದರೆ ಆಧಾರಗಳು ಅಸ್ಪಷ್ಟತೆಯಿಂದ ಕೂಡಿವೆ ಎಂಬ ಕೂಗೇ ಕೃತಿಗೆ ಸಂಬಂಧಿಸಿದಂತೆ ಅಧಿಕವಾಗಿವೆ). ನನ್ನ ಪ್ರಕಾರ ಇದೇ ಅಂತಿಮವಾಗಿದ್ದರೆ ಕೃತಿ ಇಷ್ಟೊಂದು ಚರ್ಚೆಗೆ ಒಳಪಡುವ ಅವಶ್ಯಕತೆ ಇತ್ತೇ? ಖಂಡಿತವಾಗಿಯೂ ಇಲ್ಲ.

ಇನ್ನೊಂದು ದೃಷ್ಟಿಯಿಂದ ಕೃತಿ ಮಹತ್ವ ಪಡೆದಿದೆ. ಅದೆಂದರೆ, ಪ್ರಸ್ಥುತ ರಾಜಕೀಯ ಮತ್ತು ಸಮಾಜ ಕೃತಿಯಿಂದ ಏನನ್ನೊ ನೀರಿಕ್ಷಿಸುತ್ತಿದೆ, ಏನನ್ನೊ ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಧಾವಂತ ಸಮಾಜಕ್ಕಿದ್ದಂತಿದೆ. ಆದ್ದರಿಂದಲೆ ಕೃತಿ ಇಷ್ಟೊಂದು ಚರ್ಚೆಗೊಳಗಾಗುತ್ತದೆ ಎಂದಾಯಿತು ಅಲ್ಲವೇ. ಒಬ್ಬ ರಾಜ್ಯಶಾಸ್ತ್ರದ ವಿಧ್ಯಾರ್ಥಿಯಾದ ನಾನು ಇದನ್ನು, ಸಮಾಜದ ಧಾವಂತವನ್ನು ನನ್ನ ಅಧ್ಯಯನದ ಶಿಸ್ತಿನ ಬೆಳಕಿನಲ್ಲಿ ಗ್ರಹಿಸುವ ಮತ್ತು ವಿವರಿಸುವ ಪ್ರಯತ್ನಮಾಡುತ್ತೇನೆ. ಅದಕ್ಕೆ ಪೂರಕವಾಗಿ ಭಾರತದ ಜಾತಿ ಮತ್ತು ರಾಜಕಾರಣದ ಸಂಭಂದವನ್ನು ನೋಡುವುದು ಇಲ್ಲಿ ಅಗತ್ಯವಾಗಿದೆ.

ಭಾರತಕ್ಕೆ ಪ್ರಜಾಪ್ರಭುತ್ವ ಮಾದರಿ ರಾಜಕೀಯ ವ್ಯವಸ್ಥೆ ಬಂದ ನಂತರ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಪ್ರಜೆಗಳೆ ನೇರವಾಗಿ ಪ್ರಭುತ್ವದ ಆಡಳಿತದಲ್ಲಿ ಭಾಗವಹಿಸಲು ಸಾಧ್ಯವಾಗದ ಮಟ್ಟಿಗೆ ಪ್ರಭುತ್ವದ ಗಾತ್ರ ಬೆಳೆದುದರಿಂದ ಪರೋಕ್ಷವಾಗಿ ಪ್ರತಿನಿಧಿಗಳ ಮೂಲಕ ಆಳುವ ವ್ಯವಸ್ಥೆ ಹುಟ್ಟುಹಾಕಲಾಯಿತು (ದೇಶ ಕಾಲ; ಕ್ಷೀಣಿಸುತ್ತಿರುವ ಆಯ್ಕೆಯ ಸ್ವಾತಂತ್ರ ;ಪ್ರೋ ಜೆ.ಎಸ್.ಸದಾನಂದ; ಪುಟ೧೧೬)

ಪ್ರಾತಿನಿಧಿಕ ವ್ಯವಸ್ಥೆ ಅತ್ಯಂತ ಪ್ರಮುಖವಾಗಿ ಪ್ರಭಾವ ಬೀರಿದ್ದು ಮತ್ತು ಬೀರುತ್ತಲಿರುವುದು ಜಾತಿಗಳ ಸಂಚಲನದ ಮೇಲೆ (ಒಟ್ಟುಗೂಡುವಿಕೆ ಅಚಿse obiizಚಿಣioಟಿ). ಸರಳವಾಗಿ ಹೆಳುವುದಾದರೆ, ಪ್ರಾತಿನಿಧಿಕ ವ್ಯವಸ್ಥೆ ಅಳವಡಿಸಿಕೊಂಡ ನಂತರ ಪ್ರತಿಯೊಂದು ಜಾತಿಯು ತನ್ನ ಒಂದು ಗುಂಪನ್ನು ಗಟ್ಟಿಗಳಿಸಿಕಕೊಳ್ಳತೊಡಗಿತು. ಮೂಲಕ ರಾಜಕೀಯ ಅಧಿಕಾರ ಪಡೆದು ಲಾಭ ಪಡೆಯುವ ಉದ್ದೇಶ ಎಲ್ಲಾ ಜಾತಿಯ ನಾಯಕರುಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಸಾಮಾನ್ಯವಾಗಿತ್ತು (ಭಾರತದಂತಹ ಸಮಾಜಿಕ ವ್ಯವಸ್ಥೆ ಇರುವ ದೇಶದ ರಾಜಕೀಯಕ್ಕೆ ಅದು ಅನಿವಾರ್ಯವು ಆಗಿದ್ದಿತು) ಕರ್ನಾಟಕವು ಪರಿಸ್ಥಿತಿಯಿಂದ ಹೊರತಾಗಿರಲಿಲ್ಲ.

ಇಂತಹ ಸಂದರ್ಭದಲ್ಲಿ ತಮ್ಮ ಜಾತಿಯ ಜನರನ್ನು ಒಂದು ಗೂಡಿಸಲು ಜಾತಿಯ ಮುಖಂಡರಿಗೆ ಕೆಲವೊಂದು ಅಂಶಗಳನ್ನು ಅವರ ಜನಕ್ಕೆ ಮನವರಿಕೆ ಮಾಡುವ ಅಗತ್ಯತೆ ಇತ್ತು. ಉದಾಹರಣೆಗೆ ಏಕೆ ಒಂದಾಗಬೇಕು? ಅದರ ಅಗತ್ಯತೆ ಮತ್ತು ಪ್ರಯೋಜನವೇನು? ಇತ್ಯಾದಿ. ಆಗ ಅದಕ್ಕೆ ಪೂರಕವಾಗಿ ಜಾತಿಯ ಇತಿಹಾಸ ಸೃಷ್ಟಿಯಾಗತೊಡಗಿತು. ಜಾತಿಯನ್ನು ಪವಿತ್ರ, ಐತಿಹಾಸಿಕವಾಗಿ ಮಹತ್ವ ಪಡೆದ ಮಹನೀಯರು ಜನಿಸಿದ ಜಾತಿ ಎಂಬಿತ್ಯಾದಿ ಇತಿಹಾಸವನ್ನು ಹೆಣಿಯುವ ಕಾರ್ಯ ಪ್ರಾರಂಭವಾಯಿತು.(ಆಧಾರಗಳನ್ನು ನಿಡುವ ಮೂಲಕ ಅಂದರೆ ಜಾನಪದ ಕಥೆಗಳು. ಪುರಾಣಗಳು ಇವುಗಳಿಗೆ ಆಧಾರ ಒದಗಿಸಿದವು) ಹಲವಾರು ಕಥೆಗಳಿಗೆ ಮಹತ್ವ ಬರತೊಡಗಿತು, ಪುರಾಣಗಳು ಮಹತ್ವ ಪಡೆಯತೊಡಗಿದವು ( ಜಾತಿಯ ಒಳಗೆ ಗುರುತಿಸಿಕೊಳ್ಳುವುದರ ಮೂಲಕ). ಒಟ್ಟಾರೆ ಒಂದು ಜಾತಿಯು ಸಂಚಲನಕ್ಕೆ (ಅಚಿse obiizಚಿಣioಟಿ) ಪೂರಕವಾಗಿ ಪ್ರತಿಯೊಂದು ಜಾತಿ ಇತರೆ ಜಾತಿಗಿಂತ ಪವಿತ್ರ (ಆಡು ಭಾಷೆಯಲ್ಲಿ ಮೇಲೆ) ಮತ್ತು ಉತ್ತಮ ಹಿನ್ನೆಲೆ ಹೊಂದಿದೆ ಎಂಬ ಬಗೆಯ ಇತಿಹಾಸ ಮತ್ತು ಜ್ಞಾನ ಸೃಷ್ಟಿಯಾಗತೊಡಗಿತು ( ಇದರ ಅರ್ಥ ಜಾತಿಯ ಕುರಿತಾದ ಎಲ್ಲಾ ಕಥೆಗಳು, ಪುರಾಣಗಳು ಇದೇ ಕಾರಣಕ್ಕೆ ಸೃಷ್ಟಿಯಾದವು ಅಂತ ಅಲ್ಲ ಕೆಲವು ಸೃಷ್ಟಿಯಾದರೆ ಹಲವು ಇದ್ದಂತಹ ಕಥೆಗಳ ಸ್ವರೂಪವು ಜಾತಿಗೆ ಪೂರಕವಾಗಿ ಉತ್ಪ್ರೇಕ್ಷಿತವಾಗಿ (exಚಿggeಡಿಚಿಣioಟಿ) ನಿರೂಪಿಲ್ಪಟ್ಟವು ). ಐತಿಹಾಸಿಕ ವ್ಯಕ್ತಿಗಳು ಇದಕ್ಕೆ ಹೊರತಾಗಿಲ್ಲ ಉದಾ; ಬಸವಣ್ಣ, ಕನಕದಾಸ ಮುಂತಾದವರು. ರೀತಿಯ ಜ್ಞಾನವೇ ಮುಂದೆ ಜಾತಿ ಸಂಘಗಳು, ಮಠಗಳ ಉಗಮಕ್ಕೆ , ಕಾರಣೀಭೂತವಾದವು. ( ಇವು ಇಂದಿಗೂ ಏಕೆ ತಮ್ಮ ಜಾತಿ ಪ್ರಮುಖವಾಗಿದೆ, ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರವನ್ನು ನೀಡುತ್ತಲೇ ಇವೆ) ರೀತಿಯ ಜ್ಞಾನದ ಆಧಾರದ ಮೇಲೆ ತಮ್ಮ ಒಂದು ಜಾತಿಯ ಜನರನ್ನು ಕ್ರೋಢಿಕರಿಸಿ ನಾಯಕತ್ವವನ್ನು ( ಸಮಾಜಿಕ ಮತ್ತು ರಾಜಕೀಯ ನಾಯಕತ್ವ ಎರಡೂ) ಹೊಂದಿದ ವ್ಯಕ್ತಿಗೆ ಮುಂದೊಂದು ದಿನ ತಾನು ಪಡೆದ ಜ್ಞಾನ ಸರಿಯಾದುದಲ್ಲ ಮತ್ತು ಜ್ಞಾನದ ಹುಟ್ಟಿಗೆ ಅಡಿಪಾಯವಾದ ತತ್ವಗಳು ಮತ್ತು ಅವುಗಳನ್ನು ನೀಡಿದ ವ್ಯಕ್ತಿ ನಿಮ್ಮ ಜಾತಿಗೆ ಸೇರಿಯೇ ಇಲ್ಲ ಎಂದು ಯಾವುದಾದರು ಸಂಶೊಧನೆ ನಿರೂಪಿಸಲು ಪ್ರಯತ್ನಿಸಿದರೆ, ನಾಯಕರುಗಳಿಗೆ ಇದು ನಿಜವಾಗಲು ಆತಂಕದ ಸಂಗತಿಯೇ ಸರಿ. ಏಕೆಂದರೆ ಅವರು ಇದುವರೆಗೊ ನಂಬಿಕೊಂಡಂತಹ ಮತ್ತು ಹಲವರನ್ನು ನಂಬಿಸಲು ಪ್ರಯತ್ನಿಸಿದ ಸಂಗತಿಯೇ ಸುಳ್ಳು ಎಂದಾದರೆ ಇದುವರೆಗೊ ಅವರ ಜಾತಿಯ ಸಂಚಲನಕ್ಕೆ (obiizಚಿಣioಟಿ) ಪೂರಕವಾದ ಮತ್ತು ನಾಯಕತ್ವದ ತಳಹದಿಯಾದ ಜ್ಞಾನವೇ ಒಂದು ತಪ್ಪು ಕಲ್ಪನೆ ಎಂದಾದರೆ ಆಗುವ ಪರಿಣಾಮವೇ ಈಗ ಆನುದೇವ ಹೊರಗಣವನು ಕೃತಿಯ ಬಗ್ಗೆ ನಡೆಯುತ್ತಿರುವ ವಿವಾದ.

ಈಗ ಪ್ರಸ್ಥುತ ಸಮಸ್ಯೆ ಕೂಡ ಇದೇ ಆಗಿದೆ. ಬಂಜೆಗೆರೆ ಜಯಪ್ರಕಾಶ್ರವರ ಆನುದೇವ ಹೊರಗಣವನು ಕೇವಲ ಒಂದು ಇತಿಹಾಸದಲ್ಲಿ ಮುಚ್ಚಿಹೋದ ಸತ್ಯ ಹುಡುಕುವ ಮತ್ತು ಅದರ ಅಸ್ಪಷ್ಟತೆಯನ್ನು ಸರಿಪಡಿಸುವ ಕೃತಿಯೇ ಆಗಿದಿದ್ದರೆ (ಲೇಖಕರ ಪ್ರಕಾರ ಅದೇ) ಮಟ್ಟದ ಪ್ರಭಾವ ಅದಕ್ಕೆ ಬರುತ್ತಿರಲಿಲ. ಆದರೆ ಇದು ಕರ್ನಾಟಕದ ಜಾತಿ ಮತ್ತು ರಾಜಕಾರಣದ ನಂಬಿಕೆಗಳಿಗೆ (ಬ್ರಾಹ್ಮಣ ಮತ್ತು ದಲಿತ*ಮಾದಿಗ*) ಒಂದು ವಿಭಿನ್ನ ರೀತಿಯ ಪ್ರಭಾವ ಬೀರುವ ಅಂಶಗಳನ್ನು ತನ್ನೊಳಗೆ ಹೊಂದಿದೆ. ಸಾಮಾಜಿಕವಾಗಿ ವಿರುದ್ದ ದಿಕ್ಕಿನಲ್ಲಿರುವ (ಜಾತಿಯ ಸಿಂದ್ಧಾಂತಿಗಳು ನಿರೂಪಿಸಿರುವಂತೆ ಸಮಾಜದಲ್ಲಿ ಬ್ರಾಹ್ಮಣ ಮೇಲೆ ಅಸ್ಪೃಷ್ಯ ಕೆಳಗೆ) ಜಾತಿಗಳ ಪಾವಿತ್ರತೆಯ ಪ್ರಶ್ನೆಯಾಗಿದೆ. ಅವರ ಸಾಮಾಜಿಕ, ರಾಜಕೀಯ ಸಂಚಲನಕ್ಕೆ ಪೂರಕವಾಗಿ ಇರುವ ಸೈಂದ್ಧಾಂತಿಕ ಜ್ಞಾನದ ಪ್ರಶ್ನೆಯಾಗಿದೆ.(ಅವರು ಕಟ್ಟಿಕೊಂಡ) ಇಡಿ ೧೨ನೇ ಶತಮಾನದಲ್ಲಿ ವಚನ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಯಾವ ಜಾತಿ ಎಂಬ ಪ್ರಶ್ನೆ ಎಕೆ ಇಲ್ಲಿ ಪ್ರಾಮುಖ್ಯತೆ ಪಡೆದಿದೆ? ಏಕೆಂದರೆ ಒಂದು ಜಾತಿಯ ಇತಿಹಾಸದ ಮೂಲ ಬೇರು, ಮೂಲ ತತ್ವ, ಅದರ ಪವಿತ್ರತೆಯ ಪ್ರತೀಕ ಮತ್ತು ಸಂಚಲನದ ಶಕ್ತಿಯಾದ (ಅಚಿse obiizಚಿಣioಟಿ) ಬಸವಣ್ಣ ನಮ್ಮವನಲ್ಲವೇ? ಎಂಬ ಪ್ರಶ್ನೆ ಒಂದು ವರ್ಗದ ತಳಮಳವಾದರೆ ಅಂತಹ ಮಹಾನ್ ವ್ಯಕ್ತಿ ನಮ್ಮವನು ಎಂಬುದು ಮತ್ತೊಂದು ಗುಂಪಿನ ಹರ್ಷವಾಗಿದೆ, ಅದಕ್ಕೆ ವಾದ ಪ್ರತಿವಾದಗಳು ಪರಿಯಾಗಿ ನಡೆಯುತ್ತಲೆ ಇವೇ.

ಅದರೆ ವಾಸ್ತವದಲ್ಲಿ ಇದು ಪ್ರಶ್ನೆಯೇ ಅಲ್ಲ, ಏಕೆಂದರೆ ಬಸವಣ್ಣನವರು ಬ್ರಾಹ್ಮಣತ್ವವನ್ನು ಬಿಟ್ಟು, ಶೂದ್ರತ್ವವನ್ನು ತೂರೆದು ಶಿವ ಶರಣರ ಸಮಾಜವನ್ನು ( ಶರಣನಾದವನಿಗೆ ಜಾತಿ ಬೇದವಿಲ್ಲ ಎಂಬ ಪರಿಕಲ್ಪನೆಯಲ್ಲಿ ) ಕಟ್ಟುವ ಕನಸನ್ನು ಕಂಡ ಮಹಾನ್ ವ್ಯಕ್ತಿ. ಅವರು ಎಂದಿಗೂ ಸಹ ಜಾತಿಯ ತಾರತಮ್ಯವನ್ನು ಅವರ ವಿಚಾರಧಾರೆಯ ಮೂಲವಾಗಿ ಬಳಸಿಕೊಳ್ಳಲೇ ಇಲ್ಲ.

ಚಾರಿತ್ರಿಕ ಅಂಶಗಳು ಎನೇ ಇರಲಿ ನಮ್ಮ ರಾಜಕೀಯ ನಾಯಕರು ಮತ್ತು ಜಾತಿ ಗುಂಪುಗಳ ನಾಯಕರು ಬಸವಣ್ಣ ಒಬ್ಬ ಸಮಾಜಿಕ ಸುಧಾರಕ, ಜಾತಿಯನ್ನು ವಿನಾಶಮಾಡಲು ೧೨ನೇ ಶತಮಾನದಲ್ಲಿಯೇ ಪ್ರಯತ್ನಿಸಿ ಮೂಲಕ ಇಡೀ ಸಾಮಾಜಿಕ ವ್ಯವಸ್ಥೆಯನ್ನೆ ಬದಲಾಯಿಸಲು ಹೊರಟ ಮಹಾನ್ ವ್ಯಕ್ತಿ ಎಂದು ಭಾಷಣ ಮಾಡುತ್ತಾರೆ. ಆದರೆ ಇಂದು ಡಾ. ಬಂಜೆಗೆರೆ ಜಯಪ್ರಕಾಶ್ ರವರು ಬಸವಣ್ಣನವರನ್ನು ಮಾದಿಗ ಜಾತಿಯವನಿರಬಹುದೆ? ಎಂದು ತಿಳಿಸಿದಾಕ್ಷಣ ಏಕೆ ಆಶ್ಚರ್ಯಗೊಳ್ಳಬೇಕು? ಇದು ಸಮಾಜದ ನಿಜವಾದ ದ್ವಂದ್ವವೇ ಸರಿ. ಜಾತಿಯು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ, ಅದರಿಂದ ತಾವೇ(ಬಸವಣ್ಣ) ಹೊರಬಂದು ಮಾತನಾಡಿದ್ದನೆನ್ನಲಾದ ವ್ಯಕ್ತಿಯ ಜಾತಿಯ ಕುರಿತು ಪರಿ ವಾದಕ್ಕಿಳಿಯುತ್ತವೆ ಇದು ನಿಜವಾದ ವಿಪರ್ಯಾಸ

ಇನ್ನು ಕೃತಿಯ ಬಗ್ಗೆ ಹೇಳುವುದಾದರೆ ಬಂಜೆಗೆರೆಯವರು ಇತಿಹಾಸದ ವಸ್ಥುನಿಷ್ಟ ಸಮಸ್ಯಗಳನ್ನು ಚರ್ಚಿಸುತ್ತಾ ಬಸವಣ್ಣನವರ ಜಾತಿಯ ಮೂಲವನ್ನು ಪ್ರಶ್ನಿಸುತ್ತಾರೆ. ಆದರೆ ಇಷ್ಟೆಲ್ಲ ಅವರು ಮಾಡುವುದು ಅವನ ಮಾದಿಗ ಮೂಲದ ವಸ್ತುನಿಷ್ಟತೆಯನ್ನು ಸೂಚಿಸುವುದಕ್ಕಾಗಿ. ಅವರೇಕೆ ಹುಟ್ಟನ್ನು ಸಮಸ್ಯಿಕರಿಸುವುದು ಮುಖ್ಯ ಎಂದು ಭಾವಿಸುತ್ತಾರೆ. ಎಕೆಂದರೆ ಬಂಜೆಗೆರೆಯವರು ಬಸವಣ್ಣನವರ ಹುಟ್ಟು ಪ್ರಸ್ಥುತ ಸಾಂಸ್ಕೃತಿಕ ರಾಜಕೀಯದ ಒಂದು ಅಗತ್ಯ ಎಂದು ಅವರು ತಿಳಿದಿದ್ದಾರೆ. ಹಾಗಾಗಿ ಅವರೇ ಪ್ರಶ್ನಿಸುವ ಇತಿಹಾಸದ ವಸ್ತುನಿಷ್ಟತೆಯ ಆಯುಧವನ್ನು ಹಿಡಿದು ತಮ್ಮ ವಾದವನ್ನು ಹೆಣೆದಿರುವುದು ಕೃತಿಯುದ್ದಕ್ಕೂ ಕಂಡುಬರುತ್ತದೆ.

ರಾಜಕೀಯ ಅಗತ್ಯಕ್ಕಾಗಿ ಜಾತಿಯ ಜನರ ಗುಂಪನ್ನು ಕಟ್ಟುವ ತರಾತುರಿಯಲ್ಲಿ ನಾಯಕರಿಗೆ ಬಸವಣ್ಣನವರ ಆದರ್ಶಗಳು ಮುಖ್ಯವಾಗಿಲ, ಬದಲಾಗಿ ತಮ್ಮ ಜಾತಿಯ ಶ್ರೇಷ್ಟತೆಯ ಇತಿಹಾಸಕ್ಕೆ ಪ್ರತೀಕವಾಗಿ ಮಾತ್ರ ಬೇಕಾಗಿರುವುದು ನಿಜವಾದ ದುರಂತವಾಗಿದೆ.

ಕೇವಲ ರಾಜಕಾರಣ ಮತ್ತು ಜಾತಿ ಇವೆರಡರ ಹೊಂದಾಣಿಕೆಯ ನಡುವೆ ಒಬ್ಬ ಮಹಾನ್ ವ್ಯಕ್ತಿಯ ಅದರ್ಶಗಳು ದೂರವಾಗಿ ಅವರು ಕೇವಲ ಜಾತಿಯ ಪ್ರತೀಕವಾಗಿ ಮಾತ್ರ ಬಳಸಲ್ಪಡದಿರಲಿ, ವಚನ ಯುಗದ ಕುರಿತು ಇನ್ನು ಗಹನವಾದ, ಹಿರಿದಾದ ಅರ್ಥ ಮತ್ತು ಆಶಯಗಳನ್ನು ಗುರಿತಿಸುವ ಮಟ್ಟದ ಪ್ರಯತ್ನ ಆಧುನಿಕ ಚಿಂತಕರಿಂದ ನಡೆಯಲಿ ಎಂಬುದೆ ನಮ್ಮ ಅನಿಸಿಕೆ. . . . .

ಮಹಾತ್ಮಾ ಗಾಂಧಿ ಮತ್ತು ಕ್ರಾಂತಿ

ಹಿಂದ್ ಸ್ವರಾಜ್ ದ್ವೇಷಕ್ಕೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮ ಬಲವನ್ನು ನಿಲ್ಲಿಸುತ್ತದೆ.

; ಮಹಾತ್ಮ ಗಾಂಧಿ

ಹಿಂದ್ ಸ್ವರಾಜ್ ಮಹಾತ್ಮ ಗಾಧಿಯವರು ಬರೆದ ಒಂದು ಅಂತ್ಯಂತ ಪ್ರಸಿದ್ದ ಗ್ರಂx. ಇದು ಅವರು ಲಂಡನ್ನಿನಿಂದ ದಕ್ಷಿಣ ಆಪ್ರಿಕಾಕ್ಕೆ ಹಡಗಿನಲ್ಲಿ ಹಿಂದುರುಗುವಾಗ ಬರೆದ ಪುಸ್ತಕ. ಇದು ಮೂವತ್ತು ಸಾವಿರ ಪದಗಳನ್ನು ಹೊಂದಿದೆ ೧೯೦೮ ನವೆಂಬರ್ ೧೩ ರಿಂದ ೨೨ ರವರೆಗೆ ಹಗಲು ರಾತ್ರಿ ಇದನ್ನು ಬರೆದಿದ್ದಾರೆ. ೨೭೧ ಹಸ್ತಪ್ರತಿಯ ಈ ಗ್ರಂಥದ ೫೦ ಹಸ್ತಪ್ರತಿಗಳನ್ನು ಗಾಂಧಿಜಿಯವರು ತಮ್ಮ ಎಡಗೈಯಲ್ಲಿ ಬರೆದಿದ್ದಾರೆ ಆಧುನಿಕಥೆಯನ್ನು ತಿರ್ವವಾಗಿ ಖಂಡಿಸುವ ಹಿಂದ್ ಸ್ವರಾಜ್‌ನ ಮೂಲ ಗುಜರಾತಿ ಬಾಷೆಯಲ್ಲಿದೆ.

ಹಿಂದ್ ಸ್ವರಾಜ್ ಪುಸ್ತಕದ ತಾಂತ್ರಿಕವಾದ ತಿಳುವಳಿಕೆಗೆ ಈ ಮೇಲಿನ ಮಾಹಿತಿಗಳು ಸಾಕು ಆದರೆ ಗಾಂಧಿಯವರ ವಿಚಾರ ಅವರ ತತ್ವಗಳು ಮತ್ತು ಇಂದು ಅದರ ಪ್ರಸ್ಥುತತೆಯನ್ನು ತಿಳಿಯಲು ಪುಸ್ತಕದ ಕುರಿತು ಸ್ವಲ್ಪ ವಿವರಣಾತ್ಮಕವಾಗಿ ಚರ್ಚಿಸುವ ಅಗತ್ಯತೆ ಇದೆ. ಪ್ರತಿಯೊಂದು ಗ್ರಂಥವು ಸಮಾಜಕ್ಕೆ ಕೊಡಬಹುದಾದ ಕೆಲವು ಕೊಡುಗೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುತ್ತದೆ. ಎಂದು ನೊಡುವುದಾದರೆ ಹಿಂದ್ ಸ್ವರಾಜ್ ಇಂದಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ ಏನು ? ಎಂಬುದನ್ನು ವಿಶ್ಲೇಷಿಸುವುದೆ ಈ ಲೇಖನದ ಉದ್ದೇಶ.

ನಿಜವಾದ ಅರ್ಥದಲ್ಲಿ ಹಿಂದ್ ಸ್ವರಾಜ್ ನ ತತ್ವಗಳು ಇಂದು ಪ್ರಸ್ಥುತ ಸಮಾಜಕ್ಕೆ ಅಂತ್ಯಂತ ಅಗತ್ಯವಾಗಿ ಬೇಕಾಗಿರುವ ಅಂಶಗಳಾಗಿವೆ.

ಗಾಂದಿಜಿಯವರು ಹಿಂದ್ ಸ್ವರಾಜ್ ಬರೆಯಲು ಇದ್ದ ಅನೇಕ ಪ್ರಮುಖ ಕಾರಣಗಳಲ್ಲಿ ಭಾರತೀಯ ದೇಶಸೇವಕರಲ್ಲಿ ಬೆಳೆಯುತ್ತಿದ್ದ ಹಿಂಸಾ ಪ್ರವೃತ್ತಿಯು ಒಂದು. ಗಾಂಧಿಜಿಯವರ ಪ್ರಕಾರ ಹಿಂಸೆಯಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಒಂದು ವೇಳೆ ಬದಲಾವಣೆ ಆದರೂ ಕ್ಷಣಿಕವಾಗಿರುತ್ತದೆ. ಇದನ್ನು ವಿವರವಾಗಿ ನೊಡುವುದಾದರೆ ಹಿಂದ್ ಸ್ವರಾಜ್ ಕೃತಿಯಲ್ಲಿ ಅವರು ಭಾರತದ ಕ್ರಾಂತಿಕಾರಿಗಳಿಗೆ ಹೇಳುತ್ತಾರೆ. ಬ್ರಿಟಿಷರು ನಮ್ಮನ್ನು ಆಳುತ್ತಿರುವುದು ಬಲದ ಆಧಾರದ ಮೇಲೆ ಅವರ ಆಳ್ವಿಕೆಗೆ ಶಕ್ತಿಯೇ ಮೂಲ ಒಂದು ವೇಳೆ ನಾವು ನಮ್ಮ ಪ್ರಭುತ್ವಕ್ಕೆ ಬಲವೆ ಆಧಾರ ಎಂದು ತಿಳಿದು , ಬಲದ ಮೂಲಕ ಸ್ವತಂತ್ರ್ಯ ಪಡೆಯಲು ಹೊರಟರೆ ನಮಗೊ ಅವರಿಗೊ ಅಂತಹ ವ್ಯತ್ಯಸ ಕಾಣುವುದಿಲ್ಲ ಒಂದು ವೇಳೆ ಬಲಪ್ರಯೋಗದ ಮೂಲಕ ನಾವು ಸ್ವಾತಂತ್ರ್ಯ ಪಡೆದದ್ದೆ ಆದರೆ ನಾವು ಕಟ್ಟುವ ಸ್ವಾತಂತ್ರ್ಯ ಪ್ರಭುತ್ವ ಬ್ರಿಟಿಷರ ಪ್ರಭುತ್ವಕ್ಕಿಂತ ವಿಭಿನ್ನವಾಗಿರುವುದಕ್ಕೆ ಸಾಧ್ಯವೇ ಇಲ್ಲ. (ಹಿಂದ್ ಸ್ವರಾಜ್: ಉದ್ದೇಶ: ಐತಿಹಾಸಿಕ ಸಂದರ್ಭ ಪ್ರೋ ಜೆ.ಎಸ್.ಸದಾನಂದ;) ಅದ್ದರಿಂದ ಹಿಂಸೆಗೆ ಬದಲು ಅಹಿಂಸೆ ಪ್ರಬಲವಾದ ಅಸ್ತ್ರವಾಗಬೇಕು ಎಕೆಂದರೆ ಹಿಂಸೆ ಬಲವನ್ನು ಆಶ್ರಯಿಸಿದರೆ ಅಹಿಂಸೆ ಮನೋಸ್ಥೈರ್ಯ , ಆತ್ಮವಿಶ್ವಾಸವನ್ನು ಅವಲಂಬಿಸಿರುತ್ತದೆ. ಮತ್ತು ಇದು ವ್ಯಕ್ತಿಗೆ ಆರ್ಥವಾಗಬೇಕಾದರೆ ಅವನಿಗೆ ತನ್ನನ್ನು ಆಳಿಕೊಳ್ಳಲು ತಿಳಿದಿರಬೇಕು. (Seಟಜಿ ಡಿue) ನಮಗೆ ತಿಳಿದಿರುವ ಇತಿಹಾಸ ಜಗತ್ತಿನ ಯುದ್ದಗಳ ಮತ್ತು ರಾಜರುಗಳ ಕಥೆ ಮಾತ್ರ ರಾಜರು ಹೇಗೆ ಆಟವಾಡಿದರು ಹೇಗೆ ಪರಸ್ಪರ ಹಗೆಗಳಾದರು ಹೇಗೆ ಒಬ್ಬರೊನ್ನಬ್ಬರು ಕೊಂದರು ಎಂಬುದೆಲ್ಲಾ ಈಗಿನ ಇತಿಹಾಸದಲ್ಲಿ ವರ್ಣಿತವಾಗಿದೆ. ಜಗತ್ತಿನಲ್ಲಿ ಇಷ್ಟೆ ಆಗಿದ್ದರೆ ಈ ಲೋಕ ಏಂದೊ ಮುಳುಗಿ ಹೋಗುತ್ತಿತ್ತು ಜಗತ್ತಿನ ಇತಿಹಾಸ ಯುಧ್ದದಿಂದ ಮೂದಲಾಗಿದ್ದರೆ ಇಂದು ಒಬ್ಬ ಮನುಷ್ಯನು ಬದುಕಿರುತ್ತಿರಲಿಲ್ಲ. ಜಗತ್ತಿನಲ್ಲಿ ಇನ್ನೂ ಕೋಟ್ಯಾಂತರ ಜನ ಬದಿಕಿದ್ದಾರೆ ಏಂಬುದೇ ಈ ಜಗತ್ತು ಶಸ್ತ್ರಬಲದಿಂದ ನಡಿದಿಲ್ಲ ಆತ್ಮಬಲದಿಂದ ನಡೆದಿದೆ ಎಂಬುದಕ್ಕೆ ಸಾಕ್ಷಿ. ಇಂದು ಜಗತ್ತಿನಲ್ಲಿ ಲಕ್ಷಾಂತರ ಜನ ಈ ಆತ್ಮ ಬಲವನ್ನೆ ನಂಬಿ ಬದುಕುತ್ತಿದ್ದಾರೆ. ( ಗಾಂಧಿಜಿ, ಹಿಂದ್ ಸ್ವರಾಜ್, ಪುಟ ೭೫) ಪ್ರಸ್ಥುತ ಸಮಾಜಕ್ಕೆ ಗಾಂದಿಜಿಯವರ ಈ ಅಂಶ ಅತ್ಯಂತ ಅಗತ್ಯವಾಗಿ ಅರ್ಥವಾಗಬೇಕಿದೆ ಎಕೆಂದರೆ ಇಂದು ನಮ್ಮ ಕಣ್ಣೆದುರಿಗೆ ಹಲವಾರು ಹಿಂಸಾತ್ಮಾಕ ಚಳುವಳಿಗಳು ನಡೆಯುತ್ತಿವೆ ಇವು ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ , ಶೋಷಿತರ ಧ್ವನಿ ಇಂದು ಹೊರಾಟದಲ್ಲಿ ಅಡಗಿದೆ. ಎಂದು ಬಿಂಬಿಸುವುದರ ಮೂಲಕ ಹಿಂಸೆಯನ್ನೆ ಪ್ರಚೋದಿಸುತ್ತಿದೆ. ಉದಾ; ನಕ್ಸಲಿಸಂ , ಅಸ್ಸಾಂನ ಮಾವೂಯಿಸಂ ,ಕಾಶ್ಮಿರದ ಭಯೊತ್ಪಾದನೆ ಮುಂತಾದವು . ನಿಜ ಇಂದು ವ್ಯವಸ್ಥೆ ಭ್ರಷ್ಟರಿಂದ ಕೊಡಿದೆ , ಉಳ್ಳವನು ಇಲ್ಲದವನ್ನು ಶೋಷಿಸುತ್ತಿದ್ದಾನೆ , ಶೋಷಿತರ ಹೋರಾಟಕ್ಕೆ ಸದೃಢ ದ್ವನಿಯೇ ಇಲ್ಲವಾಗಿದೆ , ಇಂದು ಕೆಲವೇ ಜನರ ಹಿತಾಸಕ್ತಿ ಸಾರ್ವಜನಿಕ ಹಿತಾಸಕ್ತಿ ಎಂದು ಬಿಂಬಿತವಾಗುತ್ತಿವೆ. ಪಟ್ಟಭದ್ರ ಹಿತಾಸಕ್ತಿಗಳು ಇಂದು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಉನ್ನತ ಹಂತದ ರಾಜಕಾರಣಿಯಿಂದ ಹಿಡಿದು ಕೆಳಗಿನ ಸಾಮಾನ್ಯ ಡಿ ಗ್ರೋಪ್ ನೌಕರನವರೆಗೆ ಭ್ರಷ್ಟಚಾರ ಹಬ್ಬಿದೆ ! ಪರಿಸ್ಥಿತಿ ಹಿಗಿರುವಾಗ ನಿಜವಾದ ಶೋಷಿತರ ದ್ವನಿಗೆ ಬೇಲೆ ಎಲ್ಲಿದೆ ? ಇದಕ್ಕೆ ಪರಿಹಾರವೇನು ? ಎಂಬ ಪ್ರಶ್ನೆಗಳಿಗೆ ಹಿಂದ್ ಸ್ವರಾಜ್‌ನಲ್ಲಿ ತಕ್ಕ ಮಟ್ಟಿಗೆ ಉತ್ತರ ಪಡೆಯಬಹುದು.

ಸರಿ ತಾವು ಹೇಳಿದ ಎಲ್ಲಾ ಸಮಸ್ಯಗಳೂ ಇವೆ. ಅದರೆ ಆದಕ್ಕೆ ಪರಿಹಾರ ಕ್ರಾಂತಿ ಅಲ್ಲ , ಇ ಎಲ್ಲಾ ಸಮಸ್ಯಗಳನ್ನು ಇಂದು ತಂದೊದಡ್ಡಿದವರು ಈ ದೇಶದ ಪ್ರಭಾವಿ ರಾಜಕಾರಣಿಗಳು , ನೌಕರಶಾಹಿತ್ವ , ಮತ್ತು ಬಂಡವಾಳಶಾಹಿಗಳು, ಆದರೆ ನೆನಪಿಡಿ ಇವರೆಲ್ಲರೂ ಸಾಮಾನ್ಯ ಜನರನ್ನು ಶೋಷಿಸಲು ಬಳಸುತ್ತಿರುವುದು ಬದಲಾದ ಬಲದ ಸ್ವರೊಪನ್ನೆ ಅಂದರೆ ಬ್ರಿಟಿಷರು ಅಂದು ನಮ್ಮನ್ನು ಆಳಲು ಸೈನಿಕಬಲ , ನೌಕಬಲವನ್ನು ಆಶ್ರಯಿಸಿದ್ದರೆ ಇಂದು ಈ ಪಟ್ಟಭದ್ರ ಗುಂಪುಗಳು ನಮ್ಮನ್ನು ಆಳಲು ಹಣದ ಬಲ , ಜಾತಿಯ ಬಲ , ಅಧಿಕಾರದ ಬಲಗಳನ್ನು ಬಳಸುತ್ತಿದ್ದಾರೆ. ಒಂದುವೇಳೆ ನಾವು ಇವರನ್ನು ಮಣಿಸಲು ಮತ್ತು ಶೋಷಿತರ ಪರ ಅವರ ಹಕ್ಕುಗಳಿಗಾಗಿ ಹೋರಾಡಲು ಬಲವನ್ನೆ (ಕ್ರಾಂತಿ) ಅವಲಂಬಿಸಿದರೆ. ನಮಗೂ ಅವರಿಗೂ ಅಂತಹ ವ್ಯತ್ಯಸ ಕಾಣುವುದಿಲ್ಲ. ಹಿಂದಿನ ಹಲವಾರು ಚಳುವಳಿಗಳಂತೆ ಈ ಚಳುವಳಿಯು ಸಹ ಯಾವುದೂ ಒಂದು ವರ್ಗಕ್ಕೊ ಜಾತಿಗೊ ಸಿಮಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಹಿಂಸೆಯನ್ನು ಬಿಟ್ಟು , ಅಸ್ತ್ರಬಲದ ಬದಲು ಆತ್ಮಬಲ , ಮನೋಸ್ಥೈರ್ಯ,ದ ಮೂಲಕ ಹೋರಾಡುವ ಅಗತ್ಯತೆ ಇದೆ. ಈ ರೀತಿಯ ಹೋರಾಟಕ್ಕೆ ಇರುವ ದಾರಿ ಸತ್ಯಗ್ರಹ ಸ್ವಯಂ ಕಷ್ಟಸಹಿಸಿ ತಮ್ಮ ಅಧಿಕಾರಗಳನ್ನು ಗಳಿಸುವ ಪದ್ದತಿಯೇ ಸತ್ಯಗ್ರಹ ( ಗಾಂಧಿಜಿ, ಹಿಂದ್ ಸ್ವರಾಜ್, ಪುಟ ೭೭) ಈ ದಾರಿ ಇಂದಿನ ಸಮಾಜಕ್ಕೆ ಸಹ್ಯವೇ ಎಂಬುದೆ ನಮ್ಮ ಮುಂದಿರುವ ಪ್ರಶ್ನೆ ? ಕೊನೆಯ ಮಾತು ಹಿಂಸೆ ಎಂದಿಗೂ ಬಲವನ್ನೆ ನಂಬಿದೆ ಹಿಂಸೆ ಕೈಗೂಳ್ಳಲು ಜನಬಲ ಬೇಕು ಆದರೆ ಗಾಂಧಿಜಿಯವರು ತಿಳಿಸಿದ ಅಹಿಂಸಾ ಮಾರ್ಗಕ್ಕೆ ಆತ್ಮಬಲ ಹೊಂದಿರುವ ಒಬ್ಬ   ಸಾಕು.

ರಿಲಿಜಿಯನ್ ಎಂಬ ಪರಿಕಲ್ಪನೆ ಮತ್ತು ಭಯೋತ್ಪಾದನೆ

ಭಯೊತ್ಪಾದನೆ ಎಂದರೆ ಸಾಮಾನ್ಯ ಅರ್ಥದಲ್ಲಿ ಜನರಲ್ಲಿ ಭಯವನ್ನು ಉತ್ಪಾದಿಸಿ ಹಿಂಸೆಯ ಮೂಲಕವಾದರು ಸರಿ ತಾವು ಅಂದುಕೊಂಡ ಗುರಿಯನ್ನು ತಲುಪ ಬಯಸುವ ಒಂದು ಗುಂಪಿನ ಚಟುವಟಿಕೆ ಎನ್ನಬಹುದು.
ತಾವು ನೀಡಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ನನಗೆ ಅನ್ನಿಸುವಂತೆ ರಿಲಿಜನ್ ಕುರಿತಾದಂತೆ ಇನ್ನು ಮೂಲಭೂತವಾದ ಕೆಲವು ಅಂಶಗಳನ್ನು ಮನವರಿಕೆ ಮಾಡಿಕೊಳ್ಳುವುದು ಅವಶ್ಯಕ ಮತ್ತು ಆ ರೀತಿ ರಿಲಿಜಿಯನ್ ಅನ್ನು ಗ್ರಹಿಸುವ ದಾರಿಯೇ ತಮ್ಮ ಎಲ್ಲಾ ಪ್ರಶ್ನೆಗಳಿಗೆ (ಭಯೋತ್ಪಾದನೆಗೆ ಸಂಬಂಧಿಸಿದ) ಉತ್ತರವಾಗುತ್ತದೆ. ಎಂಬ ನಂಬಿಕೆಯೊಂದಿಗೆ ರೀಲಿಜಿಯನ್ ಕುರಿತಾಗಿ ಮಾತನಾಡುತ್ತೆನೆ. ಮೂದಲು ನಮಗೆ ರಿಲಿಜಿಯನ್ ಮತ್ತು ನಾವು ಕನ್ನಡದಲ್ಲಿ ಕರೆಯುವ ಧರ್ಮ ಇವೆರಡು ಬೇರೆಯದೆ ಅರ್ಥವನ್ನು ನಿಡುವ ಪದಗಳು ಎಂಬುದು ತಿಳಿದಿರಬೇಕಾದ ವಿಷಯ. ಹಾಗಾದರೆ ರಿಲಿಜಿಯನ್ ಎಂದರೆ ಎನು ಒಂದು ಗುಂಪು ರಿಲಿಜಿಯಸ್ ಗುಂಪು ಎಂದು ಕರೆದುಕೊಳ್ಳಬೇಕಾದರೆ ಅದಕ್ಕೆ ಇರಬಾಕಾದ ಮೂಲಭೂತ ಲಕ್ಷಣಗಳಾವುವು. ಎಂದು ತಿಳಿದುಕೊಳ್ಳೂಣ. ಒಂದು ಗುಂಪನ್ನು ರಿಲಿಜಿಯಸ್ ಗುಂಪು ಎಂದು ಕರೆಯಬೇಕಾದರೆ ಅದು ಈ ಕೇಳಗಿನ ಅಂಶಗಳನ್ನು ಹೊಂದಿರಲೇ ಬೇಕು ಅವು ಯಾವುವೆಂದರೆ.
ಏಕದೇವ ಕಲ್ಪನೆ,
ಒಬ್ಬ ಪ್ರವಾದಿ,
ದೇವೋಪಾಸನೆಗೆ ಒಂದು ಸಂಸ್ಥೆ
ಒಂದು ಪವಿತ್ರ ಗ್ರಂಥ,
ಇವುಗಳನ್ನು ಹೊಂದಿರುವ ರಿಲಿಜಿಯನ್‌ಗಳು ಸೆಮೆಟಿಕ್ (semitic) ರಿಲಿಜನ್ ಗಳು ಎಂದು ಕರೆಯುತ್ತಾರೆ ಉದಾ; ಇಸ್ಲಾಂ ಕ್ರಿಶ್ಚಿಯಾನಿಟಿ ಜೂಡಾಯಿಸಂ. ಈ ರಿತಿಯ ತಿoಡಿಟಜ view ಇಲ್ಲದ ರಿಲಿಜಿಯನ್ ಗಳು ನಾನ್ ಸೆಮೇಟಿಕ್ ರಿಲಿಜಿಯನ್ನುಗಳು ಎಂದು ಗುರುತಿಸಲ್ಪಡುತ್ತವೆ ಉದಾ ; ಹಿಂದುಯಿಸಂ ( ಪಾಶ್ಚಾತ್ಯರು ಗ್ರಹಿಸುವ ದೃಷ್ಟಿಯಲ್ಲಿ)
ಇಲ್ಲಿ ನಾವು ಪ್ರಮುಖವಾಗಿ ತಿಳಿಯಬೇಕಾದ ಅಂಶಗಳು ಎಂದರೆ ಸೆಮೆಟಿಲ್ ರಿಲಿಜಿಯನ್ನಿನ ತಿoಡಿಟಜ view
(ಜಗತ್ತನ್ನು ಅರ್ಥಮಾಡಿಕೊಳ್ಳುವ ರೀತಿ) ಹೇಗಿರುತ್ತದೆ ಎಂದು ಆದರ ಪ್ರಕಾರ ಇಡಿ ಜಗತ್ತನ್ನು ವಿವರಿಸುವ ಅದನ್ನು ಅರ್ಥೈಸುವ ಒಂದು ಶಕ್ತಿ ಇರುವುದು ನನಗೆ ಎಕೆಂದರೆ ಜಗತ್ತಿನ ಒಟ್ಟಾರೇ ಸಾರವೇ ನನ್ನ ರಿಲಿಜನ್. ನನ್ನ ರಿಲಿಜಿಯನ್ನಿನ ಹೊರಾತಾಗಿ ಬೆರೊಂದು ರಿಲಿಜನ್ ಇರಲು ಸಾಧ್ಯವೇ ಇಲ್ಲ ಇದ್ದರೆ ಖಂಡಿತ ಅದು ನಾಗರೀಕತೆಯ ಆರಂಭದ ಹಂತದಲ್ಲಿರುವ ಹಿದನ್ ಗಳಾಗಿರುತ್ತಾರೆ. ಅವರು ದೇವರನ್ನು ಪೊಜಿಸದೇ ದವ್ವಗಳನ್ನು ಪೊಜಿಸುತ್ತಿರುತ್ತಾರೆ. (false religion) ಎಕೆಂದರೆ ಅವರಿಗೆ ದೆವರು ತೊರಿರುವ ಸನ್ಮಾರ್ಗ ಅರ್ಥವಾಗಿಲ್ಲ. ಮತ್ತು ಅದನ್ನು ಅವರಿಗೆ ತಿಳಿಸುವ ಅವರನ್ನು ಸರಿಯಾದ ರೀಲಿಜಿಯನ್ (true religion) ನೆಡೆಗೆ ತರುವ ಹೊಣೆಗಾರಿಕೆ ನಮ್ಮ ಮೇಲಿದೆ ಅದು ದೇವರೆ ನಮಗೆ ಲೋಕ ಕಲ್ಯಾಣಕ್ಕಾಗಿ ನಮಗೆ ವಹಿಸಿರುವ ಕೆಲಸ. ಅದ್ದರಿಂದಲೇ ಸೆಮೆಟಿಕ್ ರಿಲಿಜಿಯನ್ ಗಳು ಮತಾಂತರ ಪ್ರಕ್ರಿಯೇಯಲ್ಲಿ ತೊಡಗುತ್ತವೆ . ಅವರ ಪ್ರಕಾರ ಮತಾಂತರ ಎಂದರೆ ತಪ್ಪು ರಿಲಿಜಿಯನ್ ಹೊಂದಿರುವ ವ್ಯಕ್ತಿಯನ್ನು ಸರಿಯಾದ ರೀಲಿಜಿಯನ್ನೆಡೆಗೆ ತರುವ ವಿಧಾನ ಎಕೆಂದರೆ ಈ ರೀತಿಯ ಗ್ರಹಿಕೆ ಅವರ ರಿಲಿಜಿಯನ್ ನಲ್ಲಿಯೇ ಇರುತ್ತದೆ . ಮತ್ತು ಅವರು ಸಿದ್ದಾಂತದ ಪರ ಜನರಾಗಿರುತ್ತಾರೆ. ಅವರ ಪ್ರತಿಯೊಂದು ಕ್ರಿಯೇಯನ್ನು ಯಾವುದೊ ಒಂದು ಸಿಧ್ದಾಂತ ಗೈಡ್ ಮಾಡುತ್ತಿರುತ್ತದೆ. ಉದಾ; ಬೈಬಲ್ , ಕುರಾನ್ ಮುಂತಾದ ಗ್ರಂಥಗಳು. ಇವರಲ್ಲಿಯೇ ಇರುವ ಕೆಲವು ಕಟ್ಟರ್ ಮನಸ್ಥಿತಿಯವರೇ ಭಯೊತ್ಪಾದಕರು. ಮತಾಂತರ ಪ್ರಕ್ರಿಯೇ ಶಾಂತ ರೀತಿಯಿಂದ ನಡೆದರೆ ಭಯೊತ್ಪಾದನೆ ಹಿಂಸೆಯಿಂದಲಾದರು ಸರಿ ಜಗತ್ತನ್ನು ಸರಿದಾರಿಗೆ ( ಸರಿಯಾದ ರಿಲಿಜಿಯನ್ ನೆಡೆಗೆ ) ತರಬೇಕು ಎಂದು ವಿವರಿಸುವ ಎರಡು ಪರಿಳಾಗಿವೆ. ಯಾಕೆ ಈ ರೀತಿಯ ಮನೋಭಾವನೆ ಸೆಮೆಟಿಕ್ ರೀಲಿಜಿಯನ್ಗಳಲ್ಲಿ ಇದೆ. ಎಂದರೆ ಅವರ ಪ್ರಕಾರ ರೀಲಿಜಿಯನ್ ಇಲ್ಲದ ಯಾವುದೇ ಸಮಾಜದ ಅಸ್ಥಿತ್ವ ಸಾಧ್ಯವೇ ಇಲ್ಲ ಪ್ರತಿಯೋಂದು ಸಮಾಜವು ರಿಲಿಜಿಯನ್ ಹೊಂದಿರುತ್ತದೆ ಮತ್ತು ಹೊಂದಿರಲೇ ಬೇಕು ಅದ್ದರಿಂದಲೇ ಅವರು true religion ಮತ್ತು false religion ಗಳ ಬಗ್ಗೆ ಮಾತ್ರ ಮಾತಾನಾಡುತ್ತಾರೆ non religion ( ರಿಲಿಜಿಯನ್ ರಹಿತ) ಎಂಬ ಒಂದು ಪರಿಕ್ಪನೆ ಪಾಶ್ಚಾತ್ಯರಲ್ಲಿ ಇಲ. ಎಕೆಂದರೆ ಮೂದಲೇ ತಿಳಿನಿದಂತೆ ಅವರು ಸಿದ್ದಾಂತ ಪರವಾದ ಜನರು ಮತ್ತು ಅವರ ಪ್ರತಿಯೋಂದು ಕ್ರಿಯೇಯನ್ನು ಯಾವುದಾದರೊ ಒಂದು ಸಿದ್ದಾಂತ ನಿರ್ದೆಶಿಸುತ್ತಿರುತ್ತದೆ. ಮುಸ್ಲಿಂ ಜನಾಂಗ ಮಾತ್ರ ಈ ರೀತಿಯ ಗುಣ ಹೊಂದಿಲ್ಲ ಯಾವುವುಗಳನ್ನು ನಾವು Semitic ರಿಲಿಜಿಯನ್‌ಗಳು ಎಂದು ಕರೆಯುತ್ತೆವೊ ಅವೆಲ್ಲವುಗಳ ಜಗತ್ತನ್ನು ನೋಡುವ ಅರ್ಥೈಸುವ ವಿಧಾನವೇ ಇದಾಗಿದೆ ಮತ್ತು ಈ ರೀತಿಯ religious way of understanding the world  ಅವರನ್ನು ಭಯೊತ್ಪಾದನೆ ಮತ್ತು ಮತಾಂತರ ಮುಂತಾದ ಕ್ರಿಯೇಯಲ್ಲಿ ತೊಡಗುವಂತೆ ಮಾಡುತ್ತದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು ಹೆಚ್ಚಿನ ವಿವರಣೆಗಾಗಿ ಎಸ್.ಎನ್ ಬಾಲಗಂಗಾಧರ್ ಅವರ ಹಿದನ್ ಇನ್ ಹಿಸ್ ಭ್ಲೈಂಡ್ ನೆಸ್ ಎಂಬ ಪುಸ್ತಕವನ್ನು ನೋಡಬಹುದು.

ಎಲ್ಲೋ ಇರುವ ತೇಜಸ್ವಿಯವರ ಆತ್ಮ . . .

ಸುಮ್ಮನೆ ಅಂದುಕೊಳ್ಳಿ ಸಂಜೆ ಕಾಡ ಹಾದಿಯಲ್ಲಿ ನೀವು ನಿಮ್ಮ ಎಳು ಎಂಟು ವರ್ಷದ ಮಗು ನಡೆಯುತ್ತಿರುವಾಗ ಧುತ್ತನೆ ಮೊಲಗಳ ಹಿಂಡೊಂದು ನಿಮ್ಮ ಎದುರಿಗೆ ಹಾದು ಹೊದರೆ ನಿಮ್ಮ ಮಗುವಿಗೆ ಆಗುವ ರೊಮಾಂಚನ ಹೇಗಿರಬಹುದು, ಮಲೆನಾಡಿನ ರಸ್ತೆರಲ್ಲಿ ಬೈಕ್ ನಲ್ಲಿ ಹೊಗುವಾಗ ಇದ್ದಕ್ಕಿಂದಂತೆ ನಾಲ್ಕು ಜಿಂಕೆಗಳ ಗುಂಪು ರಸ್ತೆಯಾಚೆ ಜಿಗಿದರೆ ಆಗುವ ಅನುಭೂತಿ , ಇದ್ದಕ್ಕಿಂದಂತೆ ರಸ್ತೆಯಲ್ಲಿ ಆನೆ ಒಂದು ಅಡ್ಡ ಬಂದರೆ ಆ ಕ್ಷಣದಲ್ಲಿ ನಿಮಗೆ ಆಗುವ ಭಯ * ಅದರ ಕಾಲಲ್ಲಿ ಸರಪಳಿ ನೂಡಿ ಅದು ಸಾಕಿದ ಆನೆ ಎಂದು ತಿಳಿದಾಗ ನಿಮಾಗಾಗುವ ಸಮಾಧಾನ ಎಂತದ್ದು , ಪ್ರಕೃತಿ ಮತ್ತು ಮನುಷ್ಯನ ಸಂಬಧವೇ ಹೀಗೆ ಇದೊಂದು ಅದ್ಬುತ ಪ್ರಕೃತಿಯೊಳಗಿನ ನಿಶ್ಯಬ್ದ , ನಿಗೊಢ , ರಹಸ್ಯ , ರೊಮಾಂಚನ ಜಗತ್ತು ಮನುಷ್ಯನಿಗೆ ಎಂದಿಗೊ ಸವಾಲೇ? ಒಮ್ಮ ನಾನು ನನ್ನ ಬಾಲ್ಯಕ್ಕೆ ಹಿಂದುರಿಗಿ ನೊಡಿದರೆ ಮನದ ನೆನಪಿನ ಹಂದರದಲ್ಲಿ ನೂರಾರು ನೆನಪುಗಳು ಪ್ರಕೃತಿ, ಪರಿಸರದೊಂದಿಗೆ ಹೊಂದಿಕೊಂಡಂತಿವೆ. ನನಗೆ ನಮ್ಮ ಮನೆ ಕಿಟಕಿಯಲ್ಲಿ ಗೊಡು ಕಟ್ಟಿದ ಗುಬ್ಬಚ್ಚಿ , ನಮ್ಮ ನುಗ್ಗೆ ಮರಕ್ಕೆ ಪ್ರತಿ ವರ್ಷ ಬಂದು ಹತ್ತಿಕೊಳ್ಳುವ ಕಂಬಳಿ ಹುಳುಗಳ ದಂಡು , ನೆರಳೆ ಮರದ ಪಿಳಿಕಾರ ಹಕ್ಕಿಯ ಮೊಟ್ಟೆಗಾಗಿ ಕಾಯುವ ಹಾವು , ಮಳೆಗಾಲದಲ್ಲಿ ಶಾಲೆಗೆ ಹೊಗುವ ದಾರಿಯ ನಿರಿನಲ್ಲಿ ತೇಲುವ ಆಮೆ , ಏಡಿ , ನಾವು ಹೊಳೆಗೆ ಹೊಗುತ್ತಿದ್ದಾಗ ಹಿಡಿಯುತ್ತಿದ್ದ ಕಲ್ಲು ಕುರಿಕಿ ಮಿನು (ಮೀನಿನ ಒಂದು ಜಾತಿ) ಕಾಡಿನಲ್ಲಿ ನಾವೇ ಮಾಡಿಕೊಂಡು ತಿನ್ನುತ್ತಿದ್ದ ಊಟದ ರುಚಿ , ಇವೆಲ್ಲ ಇನ್ನು ನನ್ನ ನೆನಪಿನಂಗಳದಲ್ಲಿ ಹಚ್ಚ ಹಸಿರಾದ ಹೆಜ್ಜೆ ಗುರುತುಗಳಾಗಿವೆ. ಇಂದು ಮಲೆನಾಡಿನ ಆ ನಿಗೊಢ , ನಿಷ್ಯಬ್ದ , ರೊಮಾಂಚಕ, ಅರಣ್ಯಗಳು ಇಲ್ಲದೆ ಇರಬಹುದು ಅದಕ್ಕೆ ಕಾರಣ ಮನುಷ್ಯನ ಕ್ರೌರ್ಯ, ಇದೆಲ್ಲ ಯಾಕೆ ಹೇಳಿದೆ ಅಂದರೆ ನಿನ್ನೆ ಲೈಬ್ರರಿಯ ಕನ್ನಡ ವಿಭಾಗದಲ್ಲಿ ಸುಮ್ಮನೆ ಪುಸ್ತಕಕ್ಕಾಗಿ ಅಲೆಯುತ್ತಿದ್ದಾಗ ಕೈಗೆ ಸಿಕ್ಕ ಪುಸ್ತಕವೇ ಕೆ.ಪಿ. ಪೊರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆ  ಪುಸ್ತಕದ ಶಿರ್ಷಿಕೆ ಅಷ್ಟಾಗಿ ಆಸಕ್ತಿ ಕೆರಳಿಸದಿದ್ದರು ತೇಜಸ್ವಿಯವರದು ಚೆನ್ನಾಗಿರಬಹುದು ಎಂದು ಒದಲು ಕುಳಿತಾಗ ಇಡೀ ೧೪೪ ಪುಟಗಳನ್ನು ಒಂದೆ ಗುಕ್ಕಿನಲ್ಲಿ ಒದಿಸಿಕೊಂಡಿತು. ಆಮೇಲೆ ಅನ್ನಿಸಿದ್ದು , ಅದು ಕಥೆಯ , ಅವರೇ ಎಲ್ಲೊ ಎದುರಿಗೆ ನಿಂತು ಹೇಳುತ್ತಿರುವಂತೆ ಭಾಸವಾಗುವ ಭಾವವ , ಅಥವ ಮಲೆನಾಡಿನ ಕಾಡಿನ ವೈಚಿತ್ರವ ಎಂಬ ಪ್ರಶ್ನೆಗಳು ಮನದಲ್ಲಿ ಉಳಿದುಕೊಂಡವು ಮೂಡಿಗೆರೆUಯಲ್ಲಿ ಕಾಫಿ ತೋಟ ಮಾಡುವ ಸಲುವಾಗಿ ಬಂದ ತೆಜಸ್ವಿಯವರು ತಮ್ಮ ಮತ್ತು ತಮ್ಮ ಸುತ್ತಲಿನ ಪ್ರಕೃತಿ ಮತ್ತು ಪರಿಸರದ ನಡುವಿನ ಸಂಭಂದವನ್ನು ಅಕ್ಷರ ರೊಪದಲ್ಲಿ ಕಟ್ಟಿಕೊಟ್ಟ ಉತ್ತಮ ಕೃತಿ ಅದು. ಅದರಲ್ಲಿ ಅವರು ಎದುರುಗೊಳ್ಳುವ ಸನ್ನಿವೇಷಗಳು ಅದನ್ನು ವಿವರಿಸಿವ ಅವರ ವೈಚಾರಿಕಥೆ ಆ ಮೂಲಕ ಅವರಿಗೆ ದೊರೆಯುವ ಉತ್ತರ , ಕೆಲವೂಮ್ಮ ಪ್ರಶ್ನೇಗಳಾಗಿಯೇ ಉಳಿಯುವ ಪ್ರಶ್ನೇಗಳು ಎಲ್ಲವನ್ನು ಮನೊಙವಾಗಿ ಚಿತ್ರಿಸಿದ್ದಾರೆ ಈ ಪುಸ್ತಕಲ್ಲಿ ಅವರ ಜೊತೆ ಇರುವ ಕಿವಿ(ಅವರ ಸಾಕು ಬೇಟೆ ನಾಯಿ) ಮಾರ , ಮಾಸ್ತಿ , ಬೈರ , ಶ್ರೀರಾಮ ಎಲ್ಲರು ಮನುಷ್ಯನ ಒಂದೊಂದು ಭಾವದ ಪ್ರತಿನಿಧಿಗಳಂತೆ ಕಾಣುತ್ತಾರೆ ಒಟ್ಟಾರೆ ಇಂದು ಮನುಷ್ಯ ನಗರಿಕರಣ ನಾಗರೀಕರಣದ ಹೆಸರಿನಲ್ಲಿ ಪ್ರಕೃತಿಯ ನಡುವಿನ ಗಾಢ ಮತ್ತು ವಿವರಿಸಲಾಗದ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಇಂದು ಒಂದು ಮಗುವಿಗೆ ಕಾಡಿನ ಬಗ್ಗೆ ಅದರಲ್ಲಿನ ಪ್ರಾಣಿಗಳ ಬಗ್ಗೆ ಪುಸ್ತಕದಲ್ಲಿ ಹೇಳುವ ಸನ್ನಿವೇಷ ಬಂದಿದೆ ಕಡೇ ಪಕ್ಷ ಈ ರೀತಿಯ ಪುಸ್ತಕಗಳಾದರು ಇವೆ ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಅವು ನಮ್ಮಿಂದ ಮರೆಯಾಗುತ್ತವೆ ಕಾಡೇ ಇಲ್ಲದ ಮೇಲೆ ಅದರಲ್ಲಿ ಬದುಕುವವರಾರು ಕಾಡಿನ ಬಗ್ಗೆ ಬರೆಯುವವರಾರು. ಮಾನವನ ಜೀವನ ಮತ್ತು ಪರಿಸರದ ನಡುವಿನ ಸಂಬಂಧ ನಿಜವಾಗಲು ಅದ್ಬುತ ಆ ಸಂತೋಷ , ಸಂಭ್ರಮ , ರೊಮಾಂಚನ ಎಷ್ಟು ಹಣಕೊಟ್ಟರು ಸಿಗಲಾರದು. ನಿಮ್ಮ ಮಗು ಬೆಲಿಯಲ್ಲಿನ ಒತಿಕ್ಯತ , ಇದ್ದಕ್ಕಿಂದಂತೆ ಎದುರಾಗಿ ಮಾಯವಾಗುವ ಮೊಲ , ಜಿಂಕೆ , ಭಯ ಹುಟ್ಟಿಸುವ ಆನೆ , ಇವುಗಳಿಗೆ ರೊಮಾಂಚನಗೊಂಡಷ್ಟು ಬೇರಾವುದಕ್ಕು ರೊಮಾಂಚನಗೊಳ್ಳಲು ಸಾಧ್ಯವಿಲ್ಲ. ಒಂದು ಮಗುವಿನ ಸರ್ವತೊಮುಖ ಬೆಳವಣಿಗೆ ಅದರ ಸುತ್ತಲಿನ ಪರಿಸರವನ್ನು ಅವಲಂಬಿಸಿದೆ ಎಂದು ತಿಳಿದವರು ಹೇಳುತ್ತಾರೆ. ಆ ಉತ್ತಮ ಪರಿಸರ ನಿರ್ಮಿಸಿಕೊಡುವ ಕರ್ತವ್ಯ ನಮ್ಮ ಮೇಲಿದೆ ಅದರ ಮೂದಲ ಪ್ರಯತ್ನವಾಗಿ ಕೆ.ಪಿ. ಪೊರ್ಣಚಂದ್ರ ತೆಜಸ್ವಿಯವರ ಪರಿಸರದ ಕಥೆ ಪುಸ್ತಕ ಮನೆಗೆ ತಂದು ನಿಮ್ಮ ಮಕ್ಕಳ ಕೈಗೆ ಕೊಡಿ. ಒಮ್ಮೆ ಒದಿ ರೊಮಾಂಚನಗೊಳ್ಳಲಿ ಆಶ್ಚರ್ಯಗೊಳ್ಳಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಜಾಗೃತರಾಗಲಿ. ನಾಗರಿಕಥೆಯ ಹೆಸರಿನಲ್ಲಿ ಕಾಡಿನ ನಿಜವಾದ ಅನುಭವಗಳನ್ನು ಮಕ್ಕಳಿಗೆ ಕೊಡಲಾಗದಷ್ಟು ದೊರ ಬಂದಿದ್ದೆವೆ. ಕೊನೆ ಪಕ್ಷ ಆ ಅನುಭವಗಳ ಪುಸ್ತಕ ರೂಪವನ್ನಾದರು ನೀಡುವ. ಪುಟ್ಟ ಮಗುವಿನ ಕೈಯಲ್ಲಿ ಪರಿಸರದ ಪುಸ್ತಕ ನೋಡಿ ಎಲ್ಲೊ ಇರುವ ತೇಜಸ್ವಿಯವರ ಆತ್ಮ ಸಂತಸದಿಂದ ಮಗ್ಗಲು ಬದಲಿಸಿ ನಕ್ಕಂತಾಗಲಿ.

ನಕ್ಸಲ್ ಹೋರಾಟದ ಗೆಳೆಯರಿಗೆ . .

ಭಾರತದ ಆಂತರೀಕ ಭದ್ರತೆಗೆ ಚೀನಾ ಮತ್ತು ಪಾಕಿಸ್ತಾನ ಧಕ್ಕೆ ತರಲು ಪ್ರಯತ್ನಿಸುತ್ತಿದೆ.. ಎಂಬ ಗುಪ್ತಚರ ವಾರ್ತೆಯ ಹಿಂದೆಯೇ ಅಯೋದ್ಯೇ ರಾಮಜನ್ಮ ಭೂಮಿ ಪ್ರವೇಶಕ್ಕೆ ಪ್ರಯತ್ನಿಸಿ ೬ ಉಗ್ರರ ಹತ್ಯೆಯಾಗಿದೆ. ಅಂತೆಯೇ ಕರ್ನಾಟಕದಲ್ಲಿ ಎನ್‌ಕೌಂಟರ್‌ಗೆ ಒಳಗಾದ ನಕ್ಸಲರ ಕೈಯಲ್ಲಿ ವಿದೇಶಿ ನಿರ್ಮಿತ ಎ. ಕೆ. -೪೭, ಸ್ಟೆನ್‌ಗನ್ ನಂತಹ ಶಸ್ತ್ರಾಸ್ತ್ರಗಳು ಸಿಗುತ್ತಿವೆ, ಹೈದರಾಬಾದ್ ಮಸೀದಿಯಲ್ಲಿ ಬಾಂಬ್ ಸ್ಪೋಟದಿಂದ ೧೨ ಮಂದಿ ಸಾವು, ಹಂಪಿಯಲ್ಲಿ ಉಗ್ರಗಾಮಿಯ ಬಂಧನ, ಮುಖ್ಯವಾಗಿ ಬೆಂಗಳೂರಿನ ಇಮ್ರಾನ್ ಹನೀಷ್, ನಂತಹ ಉಗ್ರಗಾಮಿಗಳು ಬಂಧಿತರಾಗಿದ್ದಾರೆ. ಜೊತೆಗೆ ಬೆಂಗಳೂರು, ಅಹಮದಾಬಾದ್, ಮುಂಬಯಿ ಬಾಂಬ್ ಸ್ಪೋಟಗಳು ಮೆಣಸಿನಹಾಡ್ಯದಲ್ಲಿ ನಕ್ಸಲರು ಮತ್ತು ಪೋಲಿಸರ ನಡುವಿನ ಕಾದಾಟದಲ್ಲಿ ೫ ಮಂದಿಯ ಸಾವು. ಜೊತೆಗೆ ಪಾಕಿಸ್ತಾನ ತಾಲಿಬಾನ್ ಉಗ್ರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಇತ್ತಿಚೆಗೆ ನಕ್ಸಲ್ ಜಗನ್ನಾಥನ ಬಂಧನ.
ಕಳೆದ ಕೆಲವು ತಿಂಗಳಿನ ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಆಶ್ಚರ್ಯ, ಭಯ ಎರಡು ಆಗುತ್ತಿವೆ. ಅದಕ್ಕಿಂತ ಮುಖ್ಯವಾಗಿ ನಮ್ಮ ಯುವ ಜನತೆ ಎತ್ತಸಾಗುತ್ತಿದೆ ಎಂಬ ಅತಿ ದೊಡ್ಡ ಪ್ರಶ್ನೆ ನಮ್ಮ ಎದುರಿಗೆ ನಿಲ್ಲುತ್ತದೆ?
ಇಂದು ಭಾರತದಲ್ಲಿನ ಉಗ್ರಗಾಮಿಗಳ ಹತ್ಯಾಕಾಂಡ ಸಂಘಟನೆಗಳ ಮಾತು ಬಿಡಿ. ನಮ್ಮ ಶಾಂತ ಕರ್ನಾಟಕದ ಪರಿಸ್ಥಿತಿ ಏನಾಗಿದೆ. ಏಕೆ ಹೀಗೆ ನಕ್ಸಲಿಸಂ ಚಳುವಳಿ ಹುಟ್ಟಿಕೊಂಡು ಅವು ಕ್ರಾಂತಿಯ ಹಾದಿ ಹಿಡಿದು ರಾಜ್ಯದ ಆಂತರೀಕ ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಯೋಚಿಸ ಹೊರಟರೆ ಸಿಗುವ ಉತ್ತರ ಇಂದು ಯುವ ಜನತೆ ಕ್ರಾಂತಿ ಬಯಸುತ್ತಿದೆ. ಒಂದೇ ದಿನ ಇಡೀ ವ್ಯವಸ್ಥೆಯನ್ನು ಕ್ರಾಂತಿಯಿಂದ ಬದಲಿಸಿ ಹೊಚ್ಚ ಹೊಸ ವ್ಯವಸ್ಥೆ ತರುವ ಕನಸು ಕಾಣುತ್ತಿವೆ. ಆದರೆ ಇದು ಸಾಧ್ಯವೇ? ಖಂಡಿತಾ ಇಲ್ಲ. ಯಾವ ಚಳುವಳಿಗೆ ಸಮಾಜದ ವ್ಯವಸ್ಥೆಯ ಬೆಂಬಲ ದೊರಕುವುದಿಲ್ಲವೋ ಅಲ್ಲಿಯವರೆಗೆ ಆ ಚಳುವಳಿ ಯಶಸ್ವಿಯಾಗಲು ಸಾಧ್ಯವಿಲ್ಲ. ಏಕೆಂದರೆ ನಾವು ಸಮಾಜ ಜೀವಿಗಳು ಅದರಲ್ಲಿಯೂ ಒಂದು ವ್ಯವಸ್ಥೆಯ ಒಳಗೆ ಬದುಕುತ್ತಿದ್ದೇವೆ. ಆದರೂ ಕರ್ನಾಟಕದಲ್ಲಿ ನಕ್ಸಲಿಸಂನ ಈ ಒಂದು ರಕ್ತಕ್ರಾಂತಿ ನೋಡುತ್ತಿದ್ದರೆ ಎಲ್ಲೋ ಒಂದು ಕಡೆ ನಮ್ಮ ಯುವ ಜನತೆಯ ಯೋಚನಾ ಲಹರಿ ಬದಲಾಗಬೇಕು ಅನ್ನಿಸುತ್ತದೆ.
ನಕ್ಸಲಿಸಂನ ಮೂಲ ತತ್ವಗಳು ಸಿದ್ದಾಂತಗಳು ಅದರಲ್ಲಿಯೂ ಅವರ ಸಾಮಾಜಿಕ ನ್ಯಾಯ (Soಛಿiಚಿಟ ಎusಣiಛಿe) ಪರಿಕಲ್ಪನೆ ಇಂದು ಅತ್ಯಂತ ಅಗತ್ಯವಾಗಿ ಸಮಾಜಕ್ಕೆ ಬೇಕಾಗಿರುವ ಅಂಶವಾಗಿದೆ. ಆದರೆ ಆ ಒಂದು ಗುರಿಸಾಧನೆಗೆ ಅವರು ಅಳವಡಿಸಿಕೊಂಡಿರುವ ಮಾರ್ಗ ತಪ್ಪಾಗಿದೆ. ನಕ್ಸಲಿಸಂ ಒಂದು ಜನಪರ ಹೋರಾಟವಾಗಬೇಕೇ ಹೊರತು ಪೋಲಿಸ್ ಮತ್ತು ನಕ್ಸಲರ ನಡುವಿನ ಕಾದಾಟವಾಗಬಾರದು. ಈಗ ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿದೆ. ನಕ್ಸಲಿಸಂನ ಮೂಲ ತತ್ವಗಳನ್ನು ಅರಿತು ಅದನ್ನು ಮತ್ತು ಆ ಒಂದು ಚಳುವಳಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಮತ್ತು ಅದು ಸಾಧ್ಯವಿದೆ.
ಹೇಗೆಂದರೆ .....
ಇಂದು ನಕ್ಸಲರು ಕಾಡಿನಲ್ಲಿ ವಾಸಿಸುತ್ತಾ ಅಲ್ಲಿನ ಜನರಿಗೆ ಸಾಮಾಜಿಕ ತಿಳುವಳಿಕೆ ನೀಡುತ್ತಾ ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಎಂಬುದು ನಿಜ ಅಂತೆಯೇ ಅದೇ ನಕ್ಸಲರು ಯಾರದೋ ಪೋಲಿಸನ ಗುಂಡಿಗೆ ಎದೆಕೊಟ್ಟು ಅನಾಥವಾಗಿ ಸಾಯುತ್ತಿದ್ದಾರೆ. ಮತ್ತು ಅವರ ಸಾವು ಮೊದಲಿನ ರೀತಿ ಸಿಂಪಥಿಗೆ ಒಳಗಾಗುತ್ತಿಲ್ಲ. ಸಾಮಾಜಿಕ ಮನ್ನಣೆ ಪಡೆಯುತ್ತಿಲ್ಲ ಎಂಬುದು ಸತ್ಯವಾಗಿದೆ.
ಆದ್ದರಿಂದ ಇಂದು ಒಂದು ವ್ಯವಸ್ಥೆಯಲ್ಲಿ ಅದು ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ನಾವು ಅದರಲ್ಲಿ ನಕ್ಸಲಿಸಂನಲ್ಲಿ ಗುರುತಿಸಿಕೊಂಡಿರುವ ಯುವಕರು ಏಕೆ ತಮ್ಮ ಒಂದು ಚಳುವಳಿಯನ್ನು ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗಕ್ಕೆ ತರಬಾರದು ಉದಾಹರಣೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಜೀವಕ್ಕೆ ಹೆದರದ ಜನತೆಗಾಗಿ ಅವರ ಸಮಸ್ಯೆಗಳಿಗಾಗಿ ಜೀವ ನೀಡಲು ಸಿದ್ದರಿರುವ ಈ ನಕ್ಸಲರು ಸಮಾಜದಲ್ಲಿನ ಮತ್ತು ಕಾಡಿನ ಗಿರಿಜನರ ಸಮಸ್ಯೆಗಳಿಗಾಗಿ ಒಂದು ಅಹಿಂಸಾತ್ಮಕ ಹೋರಾಟ ಹಮ್ಮಿಕೊಳ್ಳಲಿ. ಯಾವುದಾದರೂ ಜಿಲ್ಲಾಧಿಕಾರಿ ಅಥವಾ ಮುಖ್ಯಮಂತ್ರಿಗಳ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಎಲ್ಲಯವರೆಗೆ ಸರ್ಕಾರ ನಮ್ಮ ಒಂದೂ ಬೇಡಿಕೆ ಮತ್ತು ಸಮಸ್ಯೆಗಳನ್ನು ಈಡೇರಿಸುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಒತ್ತಡಕ್ಕೆ ಮಣಿಯದೆ ಹೋರಾಟ ನಡೆಸಲಿ (ಉದಾ. ಮೇಧಾ ಪಾಟ್ಕರ್) ಅದರಲ್ಲಿ ಉಪವಾಸದಿಂದ ಒಬ್ಬೇ ಒಬ್ಬ ಸತ್ತರು ಸರಿ ಇಡೀ ಸಮಾಜ ಮರುಕ ಪಡುತ್ತದೆ. ಇಡೀ ವ್ಯವಸ್ಥೆ ನಕ್ಸಲಿಸಂನಂತ ಗರ್ವದಿಂದ ನೋಡುತ್ತದೆ. ಏಕೆಂದರೆ ಆ ಸಾವಿಗೆ ಒಂದು ಗುರಿ ಇದೆ. ನಿಜವಾಗಲು ಆತ ಮಹಾತ್ಮನಾಗುತ್ತಾನೆ. ಜೊತೆಗೆ ನಕ್ಸಲಿಸಂ ನಂತಹ ಜನಪರ ಚಳುವಳಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದರಿಂದ ಹೋರಾಟಕ್ಕೆ ಜನ ಮನ್ನಣೆ ದೊರೆತ್ತದೆ. ಹುತಾತ್ಮನಾದ ವ್ಯಕ್ತಿಯ ತಾಯಿ ತನ್ನ ಮಗನ ಸಾವನ್ನು ಹೆಮ್ಮೆಯಿಂದ ಸ್ವೀಕರಿಸುತ್ತಾಳೆ.
ಅದನ್ನು ಬಿಟ್ಟು ಯಾವುದೋ ಕಾಡಿನಲ್ಲಿ ಯಾರ ಮಕ್ಕಳೋ ಏನೋ ಪೋಲಿಸರ ಗುಂಡಿಗೆ ಅನಾಥವಾಗಿ ಸಾಯುವುದು ಎಷ್ಟು ಸೂಕ್ತ? ಜೊತೆಗೆ ರಾಜ್ಯವಿರೋಧಿ ಎಂಬ ಪಟ್ಟಬೇರೆ ಯಾವ ತಾಯಿಯ ಮಗನಾದರೇನು ಸಾವು ಸಾವೇ ಅಲ್ಲವೇ? ಆದರೆ ಆ ಸಾವು ಆ ಬಲಿದಾನ, ತನ್ನ ನಂಬಿಕೆಗೆ ಚಳುವಳಿಗೆ ಹೋರಾಟಕ್ಕೆ ಮುಖ್ಯವಾಗಿ ಸಾಮಾಜಿಕ ಮನ್ನಣೆಗೆ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎಂಬುದು ಮುಖ್ಯ ಅಲ್ಲವೇ ಗೆಳೆಯ.
ಪ್ರತಿ ಬಲಿದಾನವೂ ಅತ್ಯಂತ ಅಮೂಲ್ಯ. ಸಾಮಾಜಿಕ ಸಮಸ್ಯೆಗಳಿಗಾಗಿ ಹೋರಾಡಿ ಬಲಿಯಾದ ನಕ್ಸಲರ ಆ ಎಲ್ಲಾ ಬಲಿದಾನಗಳಿಗೂ ನನ್ನ ನಮನ. ಆದರೆ ಅದರಿಂದ ಸಾಧಿಸಿದ್ದಾರೂ ಏನು? ತಾಯಿಯ ರೋದನೆ, ಕಣ್ಣೀರು, ಅಸಹಾಯಕತೆ ಮಾತ್ರ ಅದಕ್ಕೆ ಗೆಳೆಯರೇ ಒಂದು ವ್ಯವಸ್ಥೆಯನ್ನು ಬದಲಾಯಿಸಲು ಹೊರಟರೆ ನಾವು ವ್ಯವಸ್ಥೆಯಲ್ಲಿ ಬದುಕಿಯೇ ಅದನ್ನು ಬದಲಾಯಿಸಬೇಕು ಎಂಬ ಹಿರಿಯರ ಮಾತು ನೆನಪಿಗೆ ಬರುತ್ತದೆ.
ಮಹಾತ್ಮಗಾಂಧಿ ಸ್ವತಂತ್ರಕ್ಕಾಗಿ ಜೀವ ತೆತ್ತ ವ್ಯಕ್ತಿಗಳನ್ನು ಜನತೆ ಮತ್ತು ಇತಿಹಾಸ ಇಂದು ನೆನಪಿನಲ್ಲಿ ಇಟ್ಟುಕೊಂಡಿದೆ ಎಂದರೆ ಅವರ ಹೋರಾಟ ಮತ್ತು ಬಲಿದಾನಗಳು ಸಮಾಜದ ಮನ್ನಣೆ ಗಳಿಸಿದ್ದವು. ಆದ್ದರಿಂದ ಇಂದಿಗೂ ಅವರ ನೆನಪು ಇದೆ, ಮುಂದೆಯೂ ಇರುತ್ತದೆ ಕೂಡ. ಆದರೆ ಪೋಲಿಸರ ಎನ್‌ಕೌಂಟರ್‌ನಲ್ಲಿ ಸತ್ತ ನಕ್ಸಲರ ಸಾವು? ನಿಜ ಅದು ಬಲಿದಾನವೆ ಆದರೆ ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿ ಒಂದೇ ಮಾರ್ಗವಲ್ಲ ಗೆಳೆಯ ಅದಕ್ಕಿಂತ ಮುಖ್ಯವಾಗಿ ಹೋರಾಟಕ್ಕೆ ಸಮಾಜದ ಮನ್ನಣೆ ಅಗತ್ಯ. ನಮ್ಮ ಯುವ ಜನತೆ ನಕ್ಸಲಿಸಂ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯತೆ ಇದೆ. ಏಕೆಂದರೆ ಒಂದು ವ್ಯವಸ್ಥೆಯನ್ನು ಬದಲಾಯಿಸಬೇಕು ಅಂದರೆ ನಾವು ಆ ವ್ಯವಸ್ಥೆಯಲ್ಲಿ ಬದುಕಲೇ ಬೇಕು ಅಲ್ಲವೇ ಗೆಳೆಯ. ಎಕೆ ಇದನ್ನೆಲ್ಲ ಬರೆದೆ ಅಂದರೆ ಮೊನ್ನೆ ಬಂಧಿತನಾದ ಜಗನ್ನಾಥನನ್ನು ಕೊರ್ಟ್‌ನಲ್ಲಿ ನೊಡಿದೆ N.S.S ಕ್ಯಾಂಪ್‌ನಲ್ಲಿ ಬನಿಯನ್ ಧರಿಸಿ ನಮ್ಮೊಂದಿಗೆ ಒಡಾಡುತ್ತಿದ್ದ, ಉಣ್ಣುತ್ತಿದ್ದ, ಅಣ್ಣಾ ಎಂದು ಕರೆಯುತ್ತಿದ್ದ ಗೆಳೆಯ ಇವನೇನಾ ಅಂತ ಆಶ್ಛರ್ಯವಾಯಿತು ಜೋತೆಗೆ ಅಲ್ಲಿಯೇ ಇದ್ದ ಅವರ ತಾಯಿಯ ಕಣ್ಣಲ್ಲಿದ್ದ ನೀರ ಹನಿಯು ಅರ್ಥವಾಯಿತು. . .
....... ಯೋಚನಾ ಲಹರಿ ಹೀಗೆ ಮುಂದುವರಿಯುತ್ತಿದೆ. ಅತ್ತ ಮತ್ತೆ ಉಗ್ರರ ಆರ್ಭಟ ಕೇಳಿಸುತ್ತಿದೆ. ಇತ್ತ ಮತ್ತೆ ಮೂರು ಜನ ನಕ್ಸಲರು ಪೋಲಿಸರ ಗುಂಡಿನಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತದೆ. ಮತ್ತೆ ಯಾವ ತಾಯಿ ರೋದಿಸಬೇಕಾಗಿದೆಯೋ? ಮತ್ತು ದೇಶದ ಬಾಹ್ಯ ಶತ್ರುಗಳಾದ ಚೀನಾ ಮತ್ತು ಪಾಕಿಸ್ತಾನ ದೇಶದ ಆಂತರೀಕ ಭದ್ರತೆ ಕದಡಲು ಶಸ್ತ್ರಾಸ್ತ್ರ ಪೂರೈಸುತ್ತಿವೆ ಎಂಬ ಗುಪ್ತ ವಾರ್ತೆ ಬೆಳಕಿಗೆ ಬರುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಬೆಂಗಳೂರಿನಲ್ಲಿ ಬಂಧಿತನಾದ ಉಗ್ರಗಾಮಿ ಇಮ್ರಾನ್ ಮನೆಯಲ್ಲಿ ಆಧುನಿಕ ಅಸ್ತ್ರಗಳು ದೊರೆಯುತ್ತವೆ ಜೊತೆಗೆ ಎನ್‌ಕೌಂಟರ್‌ನಲ್ಲಿ ಸತ್ತ ನಕ್ಸಲರ ಕೈಯಲ್ಲಿ ಎ.ಕೆ. - 47, ಸೈನ್‌ಗನ್, ನಂತಹ ಆಧುನಿಕ ಅಸ್ತ್ರಗಳು ಅನಾಥವಾಗಿ ಬಿದ್ದಿರುತ್ತವೆ. ಅವರಂತೆ .......
ನಿಜವಾಗಲೂ ದೇಶದ ಬಾಹ್ಯ ಶತ್ರುಗಳು ಯುವಕರ ಅಸಹಾಯಕತೆ, ಸಿಟ್ಟು, ಆಕ್ರೋಷ, ನಿರಾಸೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅವರ ಮೂಲಕ ದೇಶದ ಆಂತರಿಕ ಭದ್ರತೆ ಕದಡಲು ಪ್ರಯತ್ನಿಸುತ್ತಿವೆಯೇ? (ಅಸ್ತ್ರಗಳನ್ನು ಸರಬರಾಜು ಮಾಡುವ ಮೂಲಕ) ಎಂಬ ಆಲೋಚನೆಯೇ ಭಯ ಹುಟ್ಟಿಸುವಂತಿದೆ.
ಮನಸ್ಸು ಮತ್ತು ಕಣ್ಣು ಮುಂದಿನ ಬೆಳವಣಿಗೆಗೆ ಕಾಯುತ್ತಿವೆ. ನಮ್ಮ ಯುವಕ ಎಂದು ಈ ನಿಟ್ಟಿನಲ್ಲಿ ಯೋಚಿಸುತ್ತಾನೆ......?

ನಿನ್ನೆ ನಾನು ಸಮುದ್ರನಾ ಭೇಟಿ ಮಾಡಿದ್ದೆ . .

ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ ಸಮುದ್ರಕ್ಕೆ ನಿನ್ನ ಬಗ್ಗೆ ಹೇಳಿದೆ you know ಸಮುದ್ರ ಮಾತೆ ಆಡದೇ ಸುಮ್ಮನಾಗಿ ಬಿಟ್ಟಿತು !! ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ. . . 

ಎಂಬರ್ಥದ ಒಂದು ಮೇಸೆಜ್ ನನ್ನ ಮೊಬೈಲ್ ಪರೆದೆಯ ಮೇಲೆ ಮೂಡಿ ಮರೆಯಾಗುವ ಹೊತ್ತಿಗೆ ಆಕಾಶದಲ್ಲಿ ಧೋ ಮಳೆ ಆಗಲೇ ಮನಸ್ಸಿಗೆ ಅನ್ನಿಸಿದ್ದು ಗ್ರಿಷ್ಮ ಋತು ಪ್ರಾರಂಭವಾಗಿದೆ ಅಂತ .ಗ್ರಿಷ್ಮ ಋತು. ಋತುಗಳಲ್ಲೆ ಅಂತ್ಯಂತ ಸುಂದರವಾದದ್ದು. ಈ ಋತುವಿನಲ್ಲಿ ಬಿಳುವ ಚುಮು ಚುಮು ಮಳೆ , ಸ್ವಲ್ಪ ಸ್ವಲ್ಪ ಬಿಸಿಲು , ಸಂಜೆ ನಾಲ್ಕರ ಹೊತ್ತಿಗೆ ಆಕಾಶದ ಮೂಲೆಯಲ್ಲಿ ಮೂಡುವ ಕಾಮನಭಿಲ್ಲು, ಅದನ್ನು ನೂಡುವುದೇ ಚೆಂದ. ನನ್ನ ಬದುಕಿನ ಕೆಲವು ಸುಂದರ ಕ್ಷಣಗಳಲ್ಲಿ ಗ್ರಿಷ್ಮ ಋತುವಿನಲ್ಲಿ ಸಂಜೆ ಬೈಕ್‌ನಲ್ಲಿ ಒಂದು ರೈಡ್ ಹೋಗಿ ಮಲ್ಲಿಕಾರ್ಜುನ ಚಿತ್ರಮಂದಿರದ ಬಲಗಡೆ ಒಣಿಯಲ್ಲಿ ಇರುವ ಕಾಫಿ ಶಾಪ್‌ನಲ್ಲಿ ಚೀನಿ ಸಾಸರ್ ಕಪ್‌ನಲ್ಲಿ ಸಿಗುವ ಹಬೆಯಾಡುವ ಕಾಫಿ ಕುಡಿಯೊದು ಒಂದು. ಅದರ ಬಗ್ಗೆಯೆ ಯೊಚಿಸುತ್ತಾ ಹಾಸ್ಟೆಲ್‌ನ ಕಿಟಕಿಯಿಂದ ಆಚೆ ನೋಡಿದರೆ ಆಗತಾನೆ ಧೋ ಮಳೆಯಲ್ಲಿ ನೆನೆದು ಮರದ ಕೆಳಗೆ ನಿಂತಿರುವ ಒಂದು ಯುವ ಜೋಡಿ ಕಾಣಿಸಿತು ಹುಡುಗ ತನ್ನ ಕೈಯಲ್ಲಿರುವ ನೊಟ್ ಪುಸ್ತಕ ಆಕೆಯ ತಲೆಯ ಮೇಲೆ ಇಟ್ಟಿದ್ದ ಆಕೆ ತನ್ನ ಚುನ್ನಿ ಯನ್ನು ಆವನ ತಲೆಯ ಮೇಲೆ ಹೊದ್ದಿಸುತ್ತಿದ್ದಳು. ಅದನ್ನೆ ನೋಡುತ್ತಾ ಮನಸ್ಸು ಪ್ರಿತಿಯ ಬಗ್ಗೆ ಯೋಚಿಸಲು ಪ್ರಾರಂಬಿಸಿತು.

ಪ್ರಿತಿ ಯಾರು ಎಷ್ಟೆ ಅಥೈಸಲು ಪ್ರಯತ್ನಿಸಿದರು ಅಥೈಸಲು ಆಗದ ಒಂದು ಅದ್ಬುತ ಕಂಪನ ಜಗತ್ತಿನ ಪ್ರತಿಯೊಂದು ಜೀವಿಯು ಆ ಪ್ರಿತಿಗಾಗಿ ಅದು ನೀಡುವ ಕಂಪನಕ್ಕಾಗಿ ಹಾತೋರೆಯುತ್ತವೆ. ಪ್ರತಿಯೊಂದು ಯುವ ಮನಸ್ಸು ಅದಕ್ಕಾಗಿ ಹಂಬಲಿಸುವ ತುಡಿಯುವ ಕಾತರಿಸುವ ಭವ್ಯವಾದ ಒಂದು ಜಗತ್ತು ಅದು.

ಆದರೆ ದೇವರ ಒಂದು ತಪ್ಪು ಅಂದರೆ ಅವನು ಪ್ರಿತಿ ಮತ್ತು ಒದು ಎರಡನ್ನು ಒಂದೇ ವಯಸ್ಸಿನಲ್ಲಿ ಕರುಣಿಸಿದ್ದಾನೆ. ಪ್ರಿತಿಸಲು ಹೋದರೆ ಒದು ದೊರವಾಗುತ್ತದೆ. ಒದಲು ಹೋದರೆ ಪ್ರಿತಿ ದೊರವಾಗುತ್ತದೆ. ಈ ದ್ವಂದ್ವ ಇಂದು ನಿನ್ನೆಯದಲ್ಲ ತುಂಬಾ ಜನ ಇದರ ಬಗ್ಗೆ ಮಾತನಾಡಿದ್ದಾರೆ. ಆದರೆ ಇದಕ್ಕೆ ಪರಿಹಾರ ಎನು ? ಬದುಕಿನ ಈ ಎರಡು ಪ್ರಮುಖ ಭಾವಗಳನ್ನು ಪಡೆಯುವ ಬಗೆ ಯಾವುದು ? ಎಂಬುದೆ ಇಂದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ ? ಈ ಎರಡೂ ಬದುಕಿಗೆ ಅನಿವಾರ್ಯ ಹಾಗದರೆ ಅವನ್ನು ಪಡೆಯುವ ಬಗೆ ಹೇಗೆ ಎಂದು ಯೋಚಿಸಹೊರಟರೆ ಇಂದು ನಮ್ಮ ಯುವಜನತೆ ಪ್ರಿತಿಯನ್ನು ನೋಡುವ ದೃಷ್ಟಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡಿದ್ದೆ ಆದಲ್ಲಿ ಅದು ಸಾಧ್ಯವಿದೆ ! ಅಂದರೆ ಇಂದು ನಮ್ಮ ಯುವಜನತೆ ಪ್ರಿತಿಯನ್ನು ವ್ಯಕ್ತಿ ಕೆಂದ್ರವಾಗಿ ಮಾತ್ರ ನೋಡುತ್ತಿದೆ. ಅಂದರೆ ಪ್ರಿತಿ ಎಂದರೆ ಒಬ್ಬ ವ್ಯಕ್ತಿ. ಅವನು ಅಥವ ಅವಳು ಇಲ್ಲಾ ಎಂದರೆ ಬದುಕೆ ಇಲ್ಲ ? ಬದುಕಿನ ಅಂತಿಮ ಗುರಿ ಅಂದರೆ ಪ್ರಿತಿಸಿದವರೊಂದಿಗೆ ಬದುಕುವುದು. ಆ ರೀತಿಯ ವ್ಯಕ್ತಿ ಕೆಂದ್ರಿತ ಅಲೋಚನೆಗಳು ವಿದ್ಯಾರ್ಥಿಯ ಬದುಕಿನ ನಿಜವಾದ ಗುರಿ ಆಸೆ ಅಕಾಂಕ್ಷೆ ಎಲ್ಲಕ್ಕು ಮಾರಕವೇ ? ಹಾಗದರೆ ಇನ್ನಾವ ರೀತಿಯಲ್ಲಿ ಪ್ರಿತಿಯನ್ನು ನೋಡಬಹುದು ಅಂದರೆ. ಪ್ರಿತಿ ಎಂಬ ಭಾವವನ್ನೆ ಪ್ರಿತಿಸುವುದು ಅಂದರೆ ಪ್ರಿತಿಯನ್ನು ವ್ಯಕ್ತಿಯ ಸುತ್ತಾ ಕಟ್ಟಿಕೊಳ್ಳದೇ ಬದುಕಿನ ಸುತ್ತ ಕಟ್ಟಿಕೊಳ್ಳುವುದು ಅಂದರೆ ಯಾವುದೇ ವ್ಯಕ್ತಿಯನ್ನು ಪ್ರಿತಿಸದೆ ಪ್ರಿತಿ ಎಂಬ ಭಾವವನ್ನೆ ಪ್ರಿತಿಸಿಕೊಳ್ಳುವುದು (ನಮ್ಮ ಜೀವನದ ಗುರಿ ತಲುಪುವವರೆಗೆ ) ಅಂದರೆ ಯಾರಿಗಾಗಿಯೊ ಕಾಯುವುದರಲ್ಲಿ ಇರುವ ಸಂತೋಷ ಅವರಿಗಾಗಿಯೇ ಜೀವನದಲ್ಲಿ ಎನಾದರೋ ಸಾಧಿಸುವೆ ಎಂಬ ಛಲ ಮುಂತಾದವುಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ನಾವು ಸಾಧಿಸಬೇಕಾದ ಗುರಿ ತಲುಪಿದ ನಂತರ ಜೀವನದಲ್ಲಿ ಬರುವ ವ್ಯಕ್ತಿಯೊಂದಿಗೆ ಅ ಎಲ್ಲಾ ಭಾವನೆಗಳನ್ನು ಹಂಚಿಕೊಂಡು ಆನಂದಿಸುವುದು. ಇದೆಲ್ಲಾ ಯಾಕೆ ಹೇಳಿದೆ ಅಂದರೆ . . . . . . . .

ಶಿವಮೊಗ್ಗ ಮಲೇನಾಡಿನ ಮಧ್ಯದ ಒಂದು ಪ್ರಶಾಂತ ನಗರ ಇಲ್ಲಿನ ಕಾಲೇಜುಗಳಲ್ಲಿ ಒದುವ ಶೇ ೭೫ ರಷ್ಟು ಮಕ್ಕಳು ಸುತ್ತ ಮುತ್ತಲ ಹಳ್ಳಿಗಳಿಂದ ಬಂದು ಒದುವವರು ಅವರ ಒದಿನ ಹಿಂದೆ ಯಾವುದೋ ತಂದೆ ತಾಯಿಯ ದುಡಿಮೆ ,ಬೆವರು ,ಕನಸು ,ನೀರಿಕ್ಷೆ ಎಲ್ಲಾ ಇರುತ್ತದೆ. ಅದು ಅಲ್ಲದೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತನ್ನನ್ನು ತಾನು ರೂಪಿಸಿಕೊಳ್ಳುವ ಹೊಣೆಗಾರಿಕೆ ಇಂದಿನ ಯುವಕರ ಮೇಲಿದೆ. ಇಂದು ಪದವಿ ಪ್ರಮಾಣ ಪತ್ರಗಳು ನಿಮಗೆ ಕೆಲಸ ಕೊಡಿಸುತ್ತವೆ. ಅಂತ ಅಂದುಕೊಂಡಿದ್ದರೆ ಅದು ನಿಜವಾಗಲು ನಿಮ್ಮ ತಪ್ಪು ಕಲ್ಪನೆ ಇಂದಿನ ಜಾಗತಿಕರಣ ಪ್ರೇರಿತ ಉದ್ಯೋಗ ಮಾರುಕಟ್ಟೆಯಲ್ಲಿ ನೀವು ಸಲ್ಲಬೇಕಾದರೆ ಪದವಿಯ ಆಚೆಗೆ ಕೆಲವು ಕೌಶಲ್ಯಗಳು ತುಂಬ ಪ್ರಮುಖವಾಗುತ್ತವೆ . ಉದಾಹರಣೆಗೆ ನಾನೆ ಗಮನಿಸಿದ ಹಾಗೆ ನಮ್ಮಲ್ಲಿ ತುಂಬಾ ವಿಧ್ಯಾರ್ಥಿಗಳಿಗೆ ಇಂಗ್ಲಿಷ್ ಅಂದರೆ ಕಬ್ಬಿಣದ ಕಡಲೆ ಹಾಗಂತ ಅವರೆಲ್ಲರು ದಡ್ಡರ ! ಖಂಡಿತ ಅಲ್ಲ ಇವರಿಗೆ ಇರುವ ಜ್ಞಾನ ಅಧ್ಬುತವಾದುದು ಎಕೆಂದರೆ ಮೂದಲೇ ಹೇಳಿದಂತೆ ಇವರು ಹೆಚ್ಚಾಗಿ ಹಳ್ಳಿಯಿಂದ ಬಂದವರು ಇವರು ಅಲ್ಲಿನ ಕಷ್ಟ, , ಸುಖ , ನೋವು , ನಲಿವು , ರಾಜಕೀಯ , ಸಾಮಾಜಿಕ ರಚನೆಗಳ ಬಗ್ಗೆ ಹತ್ತಿರದಿಂದ ಬಲ್ಲವರು ಆದರೆ ಅದನ್ನು ಜಗತ್ತಿಗೆ ವಿವಿರಿಸುವ ಭಾಷ ಜ್ಞಾನ ಇಲ್ಲದೆ ಇವರು ದಡ್ಡರೆನಿಸಿಕೋಂಡಿದ್ದಾರೆ . ಇಂದು ಜಗತ್ತು ಅಂಗೈ ಬೆರಳ ತುದಿಯಲ್ಲಿ ಇದೆ ಎಂದು ಮಾತನಾಡುತ್ತೆವೆ . ಅದು ಯಾವಾಗ ಅಂದರೆ ನಿಮಗೆ ಕಂಪ್ಯೂಟರ್ ಜ್ಞಾನ ಇದ್ದಾಗ , ಇಂಟರ್ ನೆಟ್ ಬಳಸಲು ಬಂದಾಗ. ಇಲ್ಲವಾದರೆ ನಿಮ್ಮ ಪಾಲಿಗೆ ಜಗತ್ತು ಎಂದಿಗೂ ದೂರವೆ ಗೆಳೆಯ ಇಂದು ನಾವು ಮಾತನಾಡಬೇಕಾಗಿರುವುದು ನಮ್ಮ ಪಕ್ಕದ ಮನೆ , ಪಕ್ಕದ ಊರಿನವರೊಂದಿಗಲ್ಲ ಗೆಳಯ ಇಂದು ನಾವು ಮಾತನಾಡಬೇಕಾಗಿರುವುದು ಜಗತ್ತಿನೊಂದಿಗೆ. ಇಂದು ಜಗತ್ತಿಗೆ ನಿಮ್ಮ ಭಾವನೆ ನಿಮ್ಮ ಸಾಧನೆ ನಿಮ್ಮ ಕನಸನ್ನು ನಿನೇ ತೊರಿಸಿ ವಿವರಿಸಬೇಕಿದೆ. ಅದಕ್ಕೆ ಬೇಕಾಗಿರುವುದು ಕೌಶಲ್ಯ . ಇಂದಿನ ಜಾಗತಿಕರಣ ಪ್ರೆರಿತ ಉದ್ಯೋಗ ಮಾರುಕಟ್ಟೆಯಲ್ಲಿ ನೀನು ಸಲ್ಲಬೇಕಾದರೆ ಇದೆಲ್ಲಾ ಅಗತ್ಯ ಮಾತ್ರವಲ್ಲ ಅನಿವಾರ್ಯವು ಹೌದು. ಅದಕ್ಕೆ ಹೇಳಿದ್ದು ಪ್ರಿತಿ ಎಂಬ ಬಾವವನ್ನು ವ್ಯಕ್ತಿಕೆಂದ್ರವಾಗಿಸಬೇಡ ಅಂತ . ಅಂತಿಮವಾಗಿ ನಮ್ಮ ಬದುಕಿಗೆ ಒಂದು ಜೋತೆ ಸಿಗಲೇಬೆಕಲ್ಲವೇ. .  ಅಂದುಕೊಂಡ ಗುರಿ ತಲುಪಿದ ನಂತರ ನಮ್ಮ ಬದುಕಿನಲ್ಲಿ ಬರುವ ನಮ್ಮದೇ ಜೀವಕ್ಕೆ ನಿನೇ ಹೇಳಬಹುದಲ್ಲವ ನೋಡು ನಿನ್ನ ನೀರಿಕ್ಷೆಯಲ್ಲಿಯೇ , ನಿನಗಾಗಿಯೇ ಇದೆಲ್ಲಾ ಸಾಧಿಸಿದ್ದೆನೆ ಅಂತ. ಆಗ ನಿನ್ನಲ್ಲಿರುವ ಆತ್ಮವಿಶ್ವಾಸ , ಆ ಜೀವದ ಕಣ್ಣಲ್ಲಿನ ನಿನ್ನೆಡೆಗಿನ ಬೆರಗು , ತಂದೆ ತಾಯಿಯ ಸಮಾಧಾನದ ನಿಟ್ಟುಸಿರು ಎಲ್ಲವು ಪ್ರಿತಿಯೇ ಅಲ್ವಾ ! ಆಗ ಧೈರ್ಯವಾಗಿ ಹೇಳಬಹುದು ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ ಅಂತ. ಹಾಗೆ ಹೇಳುವುದಕ್ಕಿಂತ ಮುಂಚೆ ಸಾಧಿಸುವುದು ತುಂಬಾ ಇದೆ

ಭಾರತದ ಸಮಾಜ ವಿಜ್ಞಾನಗಳು ಮತ್ತು ಜಾತಿ ವ್ಯವಸ್ಥೆ . . .

ಪ್ರಸ್ತುತ ಲೇಖನದಲ್ಲಿ ನಾನು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ನನ್ನ ಜ್ಞಾನದ ಮಿತಿಯಲ್ಲಿ ಜಾತಿ, ಧರ್ಮ ಮತ್ತು ತಾರತಮ್ಯ ಕುರಿತಾಗಿನ ಚರ್ಚೆಗೆ ಪ್ರತಿಕ್ರಿಯೆ ನೀಡಲು ಬಯಸುತ್ತೇನೆ. ಇಲ್ಲಿನ ನನ್ನ ವಾದಗಳು ಯಾರ ಪರವೂ ಅಲ್ಲ ವಿರುದ್ಧವು ಅಲ್ಲ ಬದಲಾಗಿ ಸಮಾಜ ವಿಜ್ಞಾನಗಳ ಸಂಶೋಧನೆಯ ಬಗೆಗಿನ ನನ್ನ ಆಸಕ್ತಿಯಿಂದ ನೀಡಿದಂತಹವು. ಒಟ್ಟಾರೆ ಈ ಲೇಖನದ ಪ್ರಯತ್ನ ಕುಸಿಯುತ್ತಿರುವ ಸಮಾಜ ವಿಜ್ಞಾನಗಳ ಜನಪ್ರ್ರಿಯತೆಯ ಬಗೆಗಿನ ನನ್ನ ಕಾಳಜಿ ಮಾತ್ರವಾಗಿದೆ. ಹೊಸ ಆಲೋಚನೆಗಳು ಅಥವಾ ಅವುಗಳ ಪರ ವಿರೋಧ ವಾದಗಳು ಸಮಾಜ ವಿಜ್ಞಾನಗಳ ಈಗಿನ ಕುಸಿತ ತಡೆದು ಅವುಗಳಿಗೆ ಒಂದು ಭದ್ರ ಸೈದ್ಧಾಂತಿಕ ಬುನಾದಿ ನೀಡಬಹುದು ಎಂಬ ಅಲೋಚನೆ ನನ್ನ ಈ ಬರವಣಿಗೆಗೆ ಕಾರಣ.


ಆಗಸ್ಟ್ ತಿಂಗಳ ಸಂವಾದ ಪ್ರತಿಕೆಯಲ್ಲಿ ಪ್ರಕಟಗೊಂಡ ಜಾತಿ, ಧರ್ಮ, ತಾರತಮ್ಯ ಕುರಿತಾದ ಚರ್ಚೆ ಸಮಾಜ ವಿಜ್ಞಾನ ಶಾಖೆಗಳಲ್ಲಿ ಸಂಶೋಧನೆ ಕೈಗೊಂಡಿರುವ ಸಂಶೋಧಕರಿಗೆ ಒಂದು ಹೊಸ ರೀತಿಯ ಆಲೋಚನೆಗೆ ಆಹ್ವಾನ ನೀಡುತ್ತದೆ, ಪ್ರಸ್ತುತ ಚರ್ಚೆ ಸಮಾಜ ವಿಜ್ಞಾನದ ಸಂಶೋದನಾ ವಿದ್ಯಾರ್ಥಿಯಾದ ನನ್ನ ದೃಷ್ಟಿಯಲ್ಲಿ ಅಗತ್ಯ ಮಾತ್ರವಲ್ಲದೆ ಅನಿವಾರ್ಯವೂ ಆಗಿದೆ. ಈ ಒಂದು ಚರ್ಚೆಗೆ ವೇದಿಕೆಯನ್ನು ಒದಗಿಸಿಕೊಟ್ಟ ಸಂವಾದದ ಸಂಪಾದಕರಿಗೆ ನನ್ನ ಕೃತಜ್ಞತೆಗಳು.
ನಾನು ನೋಡಿದಂತೆ ಕಳೆದ ಮೂರು ಸಂಚಿಕೆಗಳಿಂದ ಈ ಕುರಿತಾದ ಚರ್ಚೆಗಳು ನಡೆಯುತ್ತಿವೆ. ಡಾ. ಡೊಮಿನಿಕ್.ಡಿ ರವರ ಲೇಖನಕ್ಕೆ ಪ್ರತಿಕ್ರಿಯಿಸಿರುವ ಡಾ. ಎ. ಷಣ್ಮುಖರವರು ಭಾರತದಲ್ಲಿನ ಜಾತಿ ಪದ್ಧತಿಯ ಕುರಿತಾದ ಪ್ರೊ. ಬಾಲಗಂಗಾಧರ್ ರವರ ತಾತ್ವಿಕವಾದಂತಹ ನಿಲುವುಗಳನ್ನು ವಿವರಿಸಿದ್ದಾರೆ. ಡಾ.ಎ.ಷಣ್ಮುಖರವರ ಲೇಖನಕ್ಕೆ ಪ್ರತಿಕ್ರಿಯಿಸಿ ಡಾ.ಸಿ.ಜಿ. ಲಕ್ಷ್ಮೀಪತಿ, ಡಾ. ವಿ.ಎನ್. ಶ್ರೀಧರ್ ಮತ್ತು ಡಾ. ಡಿ ಡೊಮಿನಿಕ್ ರವರು ತಮ್ಮ ಲೇಖನಗಳನ್ನು ಬರೆದಿದ್ದಾರೆ. ಸಂಶೋಧನೆಯ ದೃಷ್ಟಿಯಿಂದ ಈ ಎಲ್ಲಾ ಲೇಖನಗಳು ಬಹಳಷ್ಟು ವಿದ್ವತ್‌ಪೂರ್ಣವಾಗಿ ಮತ್ತು ಉಪಯುಕ್ತವಾಗಿವೆ (Iಟಿಜಿoಡಿmಚಿಣive) ಎಂಬುದನ್ನು ನಾವೆಲ್ಲರೂ ಒಪ್ಪಬೇಕಾಗಿದೆ. ನಿಜವಾಗಿಯೂ ಸೈದ್ಧಾಂತಿಕ ತಳಹದಿಯಲ್ಲಿ ಗ್ರಹಿಸುವುದಾದರೆ ಎಲ್ಲಾ ವಾದಗಳು ಪ್ರಸ್ತುತವೇ (ಪರ ವಿರೋಧ ಎಂಬ ಭಾವನೆಯನ್ನು ತೆಗೆದುನೋಡಿದಾಗ) ನಾನು ಪ್ರೊ. ಬಾಲುರವರ ಖಿhe ಊeಚಿಣheಟಿ iಟಿ his ಃಟiಟಿಜಟಿess ಮತ್ತು ಅವರ ಇತರ ಲೇಖನಗಳನ್ನು ಅರ್ಥಮಾಡಿಕೊಂಡಂತೆ ಅವರ ಪ್ರಮುಖವಾದ ವಾದವೇನೆಂದರೆ ಇಂದು ಸಮಾಜ ವಿಜ್ಞಾನಗಳಲ್ಲಿ ಕಂಡುಬರುವ ಭಾರತದ ಸಮಾಜದ ಕುರಿತ ವಿವರಣೆ (ಸಿದ್ಧಾಂತಗಳು) ನಮ್ಮ ಸಮಾಜದ ನಿಜವಾದ ಸ್ವರೂಪವನ್ನು ಕಟ್ಟಿಕೊಡುವಲ್ಲಿ ಸೋತಿವೆ. ಅದಕ್ಕೆ ಪ್ರಬಲವಾದ ಕಾರಣ ಈ ಸಿದ್ಧಾಂತಗಳು ಪಾಶ್ಚ್ಚಾತ್ಯ ಚಿಂತನಾ/ಪರಿಕಲ್ಪನಾ ಚೌಕಟ್ಟಿನಿಂದ ಪ್ರೇರಿತವಾಗಿ ಕಟ್ಟಲ್ಪಟ್ಟವು. ಅವು ಅವರ ಅಂದರೆ ಪಾಶ್ಚಾತ್ಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ನಿರೂಪಣೆಗೊಂಡಂತಹವು. ಆದ್ದರಿಂದ ಈ ಸಿದ್ಧಾಂತಗಳು ನಮ್ಮ ಸಮಾಜದ ಬಗ್ಗೆ ಪರಿಣಾಮಕಾರಿಯಾದಂತಹ ವಿವರಣೆ ನೀಡುವ ಬದಲು ಒಂದು ರೀತಿಯ ಚಿಜ-hoಛಿ ವಿವರಣೆಗಳನ್ನು ನೀಡಿವೆ. ಇದಕ್ಕೆ ಮೂಲ ಕಾರಣ ಪಾಶ್ಚಾತ್ಯರ ಒಂದು ರಿಲಿಜಿಯಸ್ ಸಾಂಸ್ಕೃತಿಕ ಹಿನ್ನೆಲೆಯಾಗಿದೆ. ಇದನ್ನು ಸ್ವಲ್ಪ ವಿವರಿಸುವ ಅಗತ್ಯವಿದೆ.
ಏಕೆ ಭಾರತವನ್ನು ಕುರಿತಂತೆ ಈ ರೀತಿಂii ಗ್ರಹಿಕೆಗಳಿವೆ ?

ಪ್ರೊ. ಬಾಲಗಂಗಾಧರ್ ರವರು ತಮ್ಮ ಒಂದು ಪುಸ್ತಕ ದ ಹಿದನ್ ಇನ್ ಹಿಸ್ ಬ್ಲೈಂಡ್ನೆಸ್ ನಲ್ಲಿ ಭಾರತದ ಸಮಾಜವನ್ನು ಕುರಿತಂತೆ ವಿಭಿನ್ನವಾದ ವಾದಗಳನ್ನು ಮಂಡಿಸಿದ್ದಾರೆ. ಭಾರತವನ್ನು ಕುರಿತ ಪ್ರಸ್ತುತ ಇರುವ ಸಿದ್ಧಾಂತ ಮತ್ತು ವಿವರಣೆಗಳು ಹೇಗೆ ಭಾರತದ ಸಾಮಾಜಿಕ ರಚನೆಯನ್ನು ವಾಸ್ತವದಲ್ಲಿರುವಂತೆ ಅರ್ಥಮಾಡಿಕೊಳ್ಳಲು ವಿಫಲವಾಗಿವೆ ಎಂಬುದನ್ನು ವಿವರಿಸಿದ್ದಾರೆ. ಬಾಲಗಂಗಾಧರ ರವರ ವಿವರಣೆಯ ಪ್ರಕಾರ ಪಾಶ್ಚಾತ್ಯ ಪ್ರವಾಸಿಗರು, ಕ್ರಿಶ್ಚಿಯನ್ ಮಿಷನರಿಗಳು, ನಂತರ ಬಂದಂತಹ ಪಾಶ್ಚಿಮಾತ್ಯ ಚಿಂತಕರು ಭಾರತದ ಸಂಸ್ಕೃತಿಯನ್ನು ತಮ್ಮ ಒಂದು ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಗ್ರಹಿಸಿ ವಿವರಿಸಿದ್ದಾರೆ. ಪಾಶ್ಚಾತ್ಯರ ಪ್ರಕಾರ ರಿಲಿಜಿಯನ್ ಎಂಬುದು ಸಾರ್ವತ್ರಿಕವಾಗಿ ಸಂಸ್ಕೃತಿಯೊಂದಿಗೆ ಸಮ್ಮಿಲನಗೊಂಡಿರುವ (ಖeಟigioಟಿ is ಚಿಟಿ iಟಿಣegಡಿಚಿಟ ಠಿಚಿಡಿಣ oಜಿ ಣhe ಛಿuಟಣuಡಿe) ಅಂಶ. ಅಥವ ಜಗತ್ತಿನಲ್ಲಿ ಎಲ್ಲೂ ರಿಲಿಜನ್ ಇಲ್ಲದ ಸಂಸ್ಕ್ರತಿಗಳು ಇರಲು ಸಾಧ್ಯವಿಲ್ಲ ಎನ್ನುವ ನಂಬಿಕೆ. ಇಂತಹ ನಂಬಿಕೆಯ ಹಿಂದಿರುವ ಬಲವಾದ ಕಾರಣವೇನೆಂದರೆ ಪಾಶ್ಚಿಮಾತ್ಯರ ಬದುಕಿನ ಅನುಭವ (ಟiveಜ exಠಿeಡಿieಟಿಛಿe). ಈ ಅಂಶ ಅವರನ್ನು ಜಗತ್ತಿನ ಎಲ್ಲಾ ಸಂಸ್ಕೃತಿಗಳು ರಿಲಿಜಿಯನ್ ಹೊಂದಿವೆ ಎಂಬ ನಂಬಿಕೆಗೆ ನಿರ್ಬಂಧಗೊಳಿಸಿದೆ. (ಖಿheiಡಿ ಠಿಡಿe ಣheoಡಿeಣiಛಿಚಿಟ ಚಿssumಠಿಣioಟಿs oಜಿ ಡಿeಟigioಟಿ ಚಿs ಚಿ ಛಿuಟಣuಡಿಚಿಟ uಟಿiveಡಿse.) ಭಾರತೀಯ ಸಂಸ್ಕ್ರತಿಯಲ್ಲಿ ಹಿಂದೂಯಿಸಂ ಅವರಿಗೆ ಕಾಣಿಸಿದ್ದು ಅಂತಹ ನಂಬಿಕೆಯಿಂದಾಗಿಯೆ. ಜಾತಿ ವ್ಯವಸ್ಥೆ ಮತ್ತು ವರ್ಣದ ಸಿದ್ಧಾಂತಗಳು ಇಲ್ಲಿನ ಸ್ಥಳೀಯ ರಿಲಿಜಿಯನ್ ಆದ ಹಿಂದೂಯಿಸಂನ ಅಂತಸ್ಸತ್ವಗಳಾಗಿ ಗುರುತಿಸಲ್ಪಟ್ಟವು. ಮನುಧರ್ಮ ಶಾಸ್ತ್ರ, ವೇದಗಳು ಮತ್ತು ಪುರುಷಸೂಕ್ತಗಳು ಹಿಂದೂ ರಿಲಿಜಿಯನ್‌ನ ರಿಲಿಜಿಯಸ್ ಗ್ರಂಥಗಳಾದವು. ಒಟ್ಟಾರೆಯಾಗಿ ಹೇಳುವುದಾದರೆ ರಿಲಿಜಿಯನ್ ಎನ್ನುವುದು ಪ್ರತಿ ಸಂಸ್ಕೃತಿಯ ಸಾರ್ವತ್ರಿಕ ಮತ್ತು ಮೂಲಭೂತ ಲಕ್ಷಣ ಎನ್ನುವ ಗ್ರಹಿಕೆಯ ಮೇಲೆ ಅವರು ಭಾರತವನ್ನು ಅಧ್ಯಯನ ಮಾಡಿದ್ದಾರೆ.

ಇಲ್ಲಿನ ಸಮಸ್ಯ್ಯೆ ಎಂದರೆ ಪಾಶ್ಚ್ಯಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಿರೂಪಿತವಾದ ಭಾರತದ ಸಮಾಜದ ಕುರಿತಾದ ಈ ವಿವರಣೆ ಒಂದು ವೈಜ್ಞಾನಿಕ ನಿರೂಪಣೆ ಎಂದೇ ಸಮಾಜ ವಿಜ್ಞಾನದ ವಲಯದಲ್ಲಿ ಇಂದಿಗೂ ನಂಬಲಾಗಿದೆ. ಅಷ್ಟೇ ಅಲ್ಲ ಈ ವಿಶ್ಲೇಷಣೆಗಳು ಭಾರತದ ಸಾಮಾಜಿಕ ನ್ಯಾಯ, ಮೀಸಲಾತಿ, ಶಿಕ್ಷಣ ವ್ಯವಸ್ಥೆಗಳನ್ನು ಪ್ರಭಾವಿಸಿರುವುದು ಮಾತ್ರವಲ್ಲದೆ. ಭಾರತದ ಸಮಾಜದ ಬಗೆಗಿನ ಒಟ್ಟಾರೆ ಸಂಶೋಧನೆಯ ಮೇಲೆ ಯಜಮಾನ್ಯತೆಯನ್ನು ಹೊಂದಿವೆ. ಪಾಶ್ಚಾತ್ಯರು ಮತ್ತು ಕ್ರೈಸ್ತ ಮಿಷನರಿಗಳು ಮಧ್ಯಯುಗದ ಯುರೋಪ್‌ನಲ್ಲಿದ್ದ ತಮ್ಮ ಅನುಭವಾತ್ಮಕ ರಿಲಿಜಿಯನ್, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗಳ ಮಾದರಿಯಲ್ಲಿ ಭಾರತೀಯ ಸಮಾಜವನ್ನು ವಿವರಿಸಿದ್ದಾರೆ. ಕಳೆದ ೫ ಶತಮಾನಗಳಿಂದಲೂ ಈ ಜ್ಞಾನ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಕುರಿತಂತೆ ಕೆಲಸ ಮಾಡುತ್ತಿರುವ ವಿದ್ವಾಂಸರು ಮತ್ತು ಚಿಂತಕರ ಮೇಲೆ ಗಾಢವಾದ ಪ್ರಭಾವ ಬೀರಿದೆ.

ಭಾರತ ಸಮಾಜವನ್ನು ತಮಗಿಂತ ಹಿಂದುಳಿದ ಸಮಾಜವಾಗಿದೆ ಎಂಬ ಪೂರ್ವಗ್ರಹಿಕೆ ಪಾಶ್ಚಾತ್ಯರನ್ನು ಇಲ್ಲಿ ರಿಲಿಜಿಯನ್, ಜಾತಿವ್ಯವಸ್ಥೆ ಮುಂತಾದವನ್ನು ಗುರುತಿಸುವಂತೆ ಮಾಡಿದೆ. (ಇದು Uಟಿiveಡಿsಚಿಟ ಊisಣoಡಿಥಿ ಯ ಪರಿಕಪಲ್ಪನೆಯೊಳಗಿನಿಂದ ಪಡೆದ ಗ್ರಹಿಕೆ ) ಪ್ರೊ. ಬಾಲಗಂಗಾಧರ್ ರವರು ಹೇಳುವಂತೆ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿನಲ್ಲಿ ತಮ್ಮ ಚಿಂತನೆಯನ್ನು ರೂಪಿಸಿಕೊಂಡ ಪಾಶ್ಚಾತ್ಯರು ಕ್ರಿಶ್ಚಿಯನ್‌ರಲ್ಲದವರು ಸುಳ್ಳಾದ ರಿಲಿಜಿಯನ್ ಹೊಂದಿದ್ದಾರೆ ಎಂಬ ಪ್ರಬಲವಾದ ನಂಬಿಕೆಯನ್ನು ಹೊಂದಿದ್ದರು. (ಬ್ಯೆಬಲ್ ನ ಪ್ರಕಾರ ದೇವದೂತ ಏಸು ಜನರಿಗೆ ಸತ್ಯವಾದ ಧೈವವಾಣಿಯನ್ನು ತಿಳಿಸುವ ಮೊದಲು ವಿಶ್ವದ ಎಲ್ಲ ಜನರು ಸುಳ್ಳು ದೇವರುಗಳನ್ನು ಪೂಜಿಸುತಿದ್ದರು) ಅಂತಹ ನಂಬಿಕೆಗೆ ಪೂರಕವಾಗಿ ಭಾರತೀಯರೂ ಸಹ ತಪ್ಪಾದ ರಿಲಿಜಿಯನ್ ಹೊಂದಿದ್ದಾರೆ ಎಂದು ಗ್ರಹಿಸಿದರು ಏಕೆಂದರೆ ಇವರು ಪ್ರಾಣಿ, ಮರ, ಗಿಡಗಳಂತಹ ಸುಳ್ಳು ದೇವರುಗಳಾದ ಡೆವಿಲ್ಸ್ (ದೆವ್ವ)ಗಳನ್ನು ಪೂಜಿಸುತ್ತಾರೆ. ಆದ್ದರಿಂದಲೆ ಮಿಷನರಿಗಳು ಭಾರತೀಯರು ಅಥವಾ ಹಿದನ್‌ಗಳನ್ನು ಕ್ರಿಶ್ಚಿಯಾನಿಟಿಯ ಮೂಲಕ ಪಾವಿತ್ರ್ಯಗೊಳಿಸಿ ಅವರನ್ನು ಸರಿಯಾದ ರಿಲಿಜಿಯನ್ ಕಡೆಗೆ ತರುವುದು ಅಗತ್ಯವಾದ ಒಂದು ಅಂಶ ಎಂದು ಚಿಂತಿಸಿದರು. ಆದರೆ ಹಾಗೆ ಮಾಡಲು ಅವರಿಗೆ ಈ ಸುಳ್ಳು ರಿಲಿಜನ್ ನ ಸ್ವರೂಪವೇನು ಎನ್ನುವುದು ತಿಳಿಯಬೇಕಿತ್ತು.

ಈ ಒಂದು ಹಿನ್ನೆಲೆಯಲ್ಲಿಯೇ ಕ್ರೈಸ್ತ ಮಿಷನರಿಗಳು ಭಾರತೀಯ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಚೌಕಟ್ಟಿನ ಒಳಗೆ ಅಧ್ಯಯನ ಮಾಡಲು ಪ್ರಾರಂಬಿಸಿದರು. ಭಾರತೀಯ ಸಂಸ್ಕೃತಿ ರಿಲಿಜಿಯನ್ ಅನ್ನು ಹೊಂದಿರದೆ ಕ್ರಿಶ್ಚಿಯನ್ ಸಂಸ್ಕ್ರತಿಗಿಂತ ಭಿನ್ನವಾಗಿರಬಹುದು ಎಂಬ ಆಲೋಚನೆಯನ್ನು ಪಾಶ್ಚಾತ್ಯರು ಮಾಡಲೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಹೋಲಿಸಿದರೆ ಭಾರತೀಯ ಸಂಸ್ಕೃತಿ ಇನ್ನು ಬಾಲ್ಯವಸ್ಥೆಯಲ್ಲಿ ಇದೆ ಎಂಬ ಗ್ರಹಿಕೆಯನ್ನು ಹೊಂದಿದ್ದರು. ಈ ಒಂದು ಅಂಶದ ಹಿನ್ನೆಲೆಯಲ್ಲಿ ಪ್ರೊ. ಬಾಲಗಂಗಾಧರ್‌ರವರು ರಿಲಿಜಿಯನ್ ವಿಶ್ವ ವ್ಯಾಪ್ತಿಯಾಗಿದೆಯೇ ಎಂಬ (Is ಡಿeಟigioಟಿ is ಛಿuಟಣuಡಿಚಿಟ uಟಿiveಡಿse?) ಪ್ರಶ್ನೆಯನ್ನು ಎತ್ತುತ್ತಾರೆ. ಉದಾ: ಎಲ್ಲಾ ಸಂಸ್ಕೃತಿಗಳು ರಿಲಿಜಿಯನ್ ಹೊಂದಿವೆ ಎಂಬ ಪಾಶ್ಚಾತ್ಯ ಚಿಂತನೆಯನ್ನು ಪ್ರಶ್ನಿಸುತ್ತಾರೆ. ಮುಂದುವರಿದು ತಮ್ಮ ಗ್ರಂಥದಲ್ಲಿ ಪ್ರತಿಯೊಂದು ಸಂಸ್ಕೃತಿಯು ಅವುಗಳದ್ದೆ ಆದಂತಹ ಕಲಿಯುವಿಕೆಯ ವಿಧಾನವನ್ನು ಹೊಂದಿರುತ್ತವೆ. ಅಂತೆಯೇ ಪಾಶ್ಚಾತ್ಯ ಸಂಸ್ಕೃತಿಯು ಸಿದ್ಧಾಂತ ಪ್ರಧಾನವಾದ (ಖಿheoಡಿeಣiಛಿಚಿಟ ತಿಚಿಥಿ oಜಿ ಟeಚಿಡಿಟಿiಟಿg) ಕಲಿಯುವಿಕೆಯನ್ನು ಹೊಂದಿದ್ದು ಕ್ರಿಶ್ಚಿಯನ್ನರು ಸಿದ್ಧಾಂತಗಳಿಂದ ಪ್ರಭಾವಿತರಾದ ಜನರಾಗಿದ್ದಾರೆ. ಆದ್ದರಿಂದಲೇ ಅವರಿಗೆ ಃeಟieಜಿ, ಈಚಿiಣh ಗಳು ಆಚರಣೆಗಳಿಗಿಂತಲೂ ತುಂಬಾ ಪ್ರಮುಖವಾಗಿರುತ್ತವೆ. ಮತ್ತು ಅವರ ಪ್ರಬಲ ನಂಬಿಕೆಯೆಂದರೆ ಎಲ್ಲಾ ಸಂಸ್ಕೃತಿಗಳಲ್ಲೂ ಆಚರಣೆಗಳ ಹಿಂದೆ ಃeಟieಜಿ ಇರುತ್ತದೆ ಮತ್ತು ಅದು ಆಚರಣೆಯನ್ನು ನಿರ್ದೆಶಿಸುತ್ತದೆ ಎನ್ನುವುದಾಗಿತ್ತು.

ಆದರೆ ಏಷ್ಯಾ ಅದರಲ್ಲಿಯೂ ಭಾರತ ಸಂಸ್ಕೃತಿ ಇದಕ್ಕಿಂತ ಭಿನ್ನವಾದ ಒಂದು ಕಲಿಕಾ ವಿಧಾನವನ್ನು ಹೊಂದಿದೆ. ಉದಾ: ಇಲ್ಲಿ ಆಚರಣೆಯೇ ಪ್ರಧಾನ, ಮತ್ತು ಅಂತಹ ಆಚರಣೆಯನ್ನು ಯಾವುದೇ ರೀತಿಯ ಃeಟieಜಿ ನಿರ್ದೇಶಿಸುತ್ತಿರುವುದಿಲ್ಲ. ಕ್ರಿಶ್ಚಿಯನ್ನರಿಗೆ ರಿಲಿಜಿಯನ್ ಎಷ್ಟು ಮುಖ್ಯವೋ ಭಾರತೀಯ ಸಮಾಜಕ್ಕೆ ಖiಣuಚಿಟ (ಸಂಪ್ರದಾಯ) ಅಷ್ಟೇ ಮುಖ್ಯವಾಗಿದೆ. ಆದ್ದರಿಂದಲೇ ಭಾರತೀಯ ಸಮಾಜ ಒಂದು ಆಚರಣೆ ಪ್ರಧಾನ ಜ್ಞಾನದ (Peಡಿಜಿoಡಿmಚಿಣive ಞಟಿoತಿಟeಜge) ಸಮಾಜವೇ ಹೊರತು ಪಾಶ್ಚಾತ್ಯರು ವಿವರಿಸುವಂತೆ ಸಿದ್ಧಾಂತ ಪ್ರಧಾನವಾದ ರಿಲಿಜಿಯಸ್ ಸಮಾಜವಲ್ಲ ಆದ್ದರಿಂದ ರಿಲಿಜಿಯನ್ ಎಂಬ ಪರಿಕಲ್ಪನೆ ಭಾರತದಂತಹ ಆಚರಣೆಯ ಪ್ರಧಾನ ಸಂಸ್ಕೃತಿಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಮತ್ತು ಆ ಜ್ಞಾನದ ಸೈದ್ಧಾಂತಿಕ ಚೌಕಟ್ಟಿನಲ್ಲಿ (ಖeಟigious) ಭಾರತದಂತಹ ಸಂಪ್ರದಾಯ ಪ್ರಧಾನ ಸಮಾಜವನ್ನು ವಿವರಿಸಲು ಸಾಧ್ಯವಿಲ್ಲ. ರಿಲಿಜಿಯನ್ ಎಂಬ ಒಂದು ಪರಿಕಲ್ಪನೆಯೇ ಭಾರತದ ಸಾಮಾಜಿಕ ಸಂದರ್ಭಕ್ಕೆ ಅಗತ್ಯವಿಲ್ಲದ್ದಾಗಿದೆ. ವಸಾಹತುಷಾಹಿ ಚಿಂತಕರ ಪ್ರಮುಖವಾದ ಸಮಸ್ಯೆಯೆಂದರೆ ಅವರು ಈ ಎರಡು ಕಲಿಕಾ ವಿಧಾನಗಳ ನಡುವಿನ ಭಿನ್ನತೆಯನ್ನು ಗುರುತಿಸಲು ವಿಫಲರಾಗಿದ್ದಾರೆ. ಆದರೆ ಪಾಶ್ಚಾತ್ಯ ದೃಷ್ಠಿಕೋನದ ಹಿನ್ನೆಲೆಯಲ್ಲಿ ಕಟ್ಟಲ್ಪಟ್ಟ ಹಲವಾರು ಪ್ರಖ್ಯಾತ ವಾದಗಳು ಭಾರತ ಸಮಾಜ ಕುರಿತಂತೆ ಅಸ್ಥಿತ್ವದಲ್ಲಿವೆ. ಅವುಗಳಲ್ಲಿ ಪ್ರಮುಖವಾದುದು ಜಾತಿ ವ್ಯವಸ್ಥೆಯು ಭಾರತದ ಹಿಂದೂ ರಿಲಿಜನ್ ಸಮಾಜದ ಅಂತಸ್ಸತ್ವವಾಗಿದೆ ಹಾಗೂ ಶತಮಾನಗಳಿಂದಲೂ ಯಾವುದೇ ಬದಲಾವಣೆಗೆ ಒಳಗಾಗದೆ ತನ್ನತನವನ್ನು ಉಳಿಸಿಕೊಂಡಿದೆ ಎನ್ನುವುದು.

ಪ್ರೊ. ಬಾಲಗಂಗಾಧರ್ ರವರ ಪ್ರಕಾರ ಭಾರತದ ಸಮಾಜದಲ್ಲಿ ಅಚಿsಣe ಅಥವಾ ಜಾತಿಯನ್ನು ಒಂದು ವ್ಯವಸ್ಥೆಯಾಗಿ ಗುರುತಿಸುವುದು ಅರ್ಥವಾಗದ ವಿಶ್ಲೇಷಣೆ (ಚಿಜ-hoಛಿ exಠಿಟಚಿಟಿಚಿಣioಟಿ) ಭಾರತದ ಸಮಾಜದಲ್ಲಿ ನಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಜಾತಿಗಳು ಅಸ್ಥಿತ್ವದಲ್ಲಿವೆ. ಆದರೆ ಅವುಗಳನ್ನೆಲ್ಲ ಈಗಾಗಲೇ ನಾವು ಬೌದ್ಧಿಕ ವಾದಗಳಲ್ಲಿ ಗುರುತಿಸಿರುವಂತೆ ಒಂದು ವ್ಯವಸ್ಥೆಯ ಮಾದರಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜಾತಿಗಳ ಪರಸ್ಪರ ಸಂಬಂಧ ಅವುಗಳ ಆಚರಣೆಯ ನಿರ್ದೇಶಿಸುವ ಸಂಪ್ರದಾಯಗಳ ಸ್ವರೂಪ ಪಾಶ್ಚಾತ್ಯರು ನೀಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿವರಿಸಿರುವುದಕ್ಕಿಂತ ಭಿನ್ನವಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜಾತಿಗಳು ಸಮಾಜದಲ್ಲಿ ಹೇಗೆ ಸಂಘಟನೆಗೊಂಡವು ಮತ್ತು ಹೇಗೆ ಜನರಿಂದ ಗುರುತಿಸಲ್ಪಡುತ್ತವೆ ಎನ್ನುವುದರ ಕುರಿತ ಅಧ್ಯಯನವು ಇಂದಿನ ಅಗತ್ಯವಾಗಿದೆ. ಈ ರೀತಿಂii ಅಧ್ಯಯನಕ್ಕೆ ನಾವು ಜಾತಿಯನ್ನು ಭಿನ್ನ ದೃಷ್ಠಿಕೋನದಿಂದಲೇ ನೋಡಬೇಕಾಗುತ್ತದೆ.

ನನಗನಿಸಿದಂತೆ ಮೇಲಿನ ವಿವರಣೆಗಳಿಂದ ತಿಳಿಯುವ ಅಂಶಗಳೆಂದರೆ.


೧. ಭಾರತದ ಸಮಾಜ ವಿಜ್ಞಾನಗಳಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವರ್ಗೀಕರಣ ಪದಗುಚ್ಚಗಳು (ಕೆಟೆಗರಿಸ್) ಕ್ರಿಶ್ಚಿಯನ್ ಥಿಯಾಲಜಿಯ ಮೂಲದಿಂದ ಬಂದವುಗಳಾದ್ದರಿಂದ ನಮ್ಮ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ನಿಜರೂಪವನ್ನು ಗುರುತಿಸಲು ವಿಫಲವಾಗಿವೆ. ಪಾಶ್ಚಾತ್ಯರು ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ದಾರೆ ಎಂದು ಅವರು (ಬಾಲು) ಹೇಳುವುದಿಲ್ಲ. ಯುರೋಪಿನವರು ಬಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸ್ವರೂಪವನ್ನು ಹಾಗೆ ಗುರುತಿಸದೆ ಅನ್ಯ ಮಾರ್ಗವೇ ಅವರಿಗಿರಲಿಲ್ಲ ಎನ್ನುವುದು ಅವರ ವಾದ. ಒಂದು ರೀತಿಯಲ್ಲಿ ಇದು ಎರಡು ಭಾಗಗಳ (ಇಚಿsಣ ಚಿಟಿಜ ತಿesಣ) ನಡುವಿನ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿರುವ ಜ್ಞಾನದ ಸ್ವರೂಪವನ್ನು ನಿರ್ಧರಿಸುವ ಪ್ರಶ್ನೆಯಾಗಿ ಕಾಡುತ್ತದೆ. ಇದನ್ನು ನಾವು ಒಂದು ಪ್ರಾಕಲ್ಪನೆ ಎಂದು ಸ್ವೀಕರಿಸಿದರೂ ಪ್ರಸ್ತುತ ಸಮಾಜ ವಿಜ್ಞಾನಿಗಳ ಸಂಶೋಧನೆಯನ್ನು ಒಂದು ಭಿನ್ನವಾದಂತಹ ದೃಷ್ಟಿಕೋನದಿಂದ ಪರೀಕ್ಷಿಸಲು ಅರ್ಹವಾಗಿದೆ. ಡಾ. ವಿ.ಎಸ್. ಶ್ರೀಧರ್ ಮತ್ತು ಡಾ. ಸಿ.ಜಿ ಲಕ್ಷ್ಮಿಪತಿ ಇವರು ಪ್ರತಿಪಾದಿಸಿರುವಂತೆ ಒeಣhoಜoಟogಥಿ ಯ ಸಮಸ್ಯೆ ತುಂಬಾ ಗಂಭೀರವಾದುದಾಗಿದೆ. ಅಂದರೆ ನಾವು ಈ ಒಂದು ಪ್ರಮೇಯ ಮತ್ತು ಗ್ರಹಿತಗಳನ್ನು ಯಾವ ಒಂದು ಒeಣhoಜoಟogಥಿ ಯನ್ನು ಬಳಸಿ ಸಾಧಿಸಬಹುದಾಗಿದೆ ಎಂಬುದು.

೨. ಬಾಲಗಂಗಾಧರ ಅವರ ವಾದವನ್ನು ಒಪ್ಪುವುದು ಅಥವ ಒಪ್ಪದೆ ಇರುವುದು ಬೇರೆ ವಿಷಯ ಆದರೆ ಪ್ರಸ್ತುತ ಅವರ ಚಿಂತನೆ ಇದುವರೆಗೂ ನಡೆದಿರುವ ಸಮಾಜ ವಿಜ್ಞಾನಗಳ ಸಂಶೋಧನೆಯ ದಿಕ್ಕಿಗೆ ಭಿನ್ನವಾದ ಬೆಳಕನ್ನು ಚೆಲ್ಲುತ್ತದೆ ಎಂಬುದು ಸಮಾಜ ವಿಜ್ಞಾನಗಳ ಸಂಶೋಧನೆಯ ದೃಷ್ಟಿಯಿಂದ ಸ್ವಾಗತಾರ್ಹ ಎನ್ನುವುದು ನನ್ನ ನಂಬಿಕೆ. ಅವರ ಚಿಂತನೆಗಳು, ಪ್ರಮೇಯಗಳು ಮತ್ತು ಗ್ರಹಿತಗಳಂತೆ ಕಂಡರೂ ಸಹ ಡಾ. ಡೊಮಿನಿಕ್.ಡಿ ಇವರು ಹೇಳಿದಂತೆ ಈ ಪ್ರಮೇಯ ಮತ್ತು ಗ್ರಹಿತಗಳು ಮುಂದೆ ಕೈಗೊಳ್ಳಬಹುದಾದ ಸಂಶೋಧನೆಯ ಧಿಕ್ಕನ್ನು ಸೂಚಿಸುತ್ತವೆ ಎಂಬುದು ಸಹ ಆಸಕ್ತಿಕರ ಅಂಶವೆ. ಇಲ್ಲಿ ಗಮನಿಸಬಹುದಾದ ಪ್ರಮುಖ ಅಂಶವೆಂದರೆ ಸ್ವತಃ ಬಾಲುರವರೇ ತಮ್ಮ ಗ್ರಂಥದ ಮೂದಲನೇ ಅಧ್ಯಾಯದಲ್ಲಿ ಹೇಳುವಂತೆ ನಾನು ಇಂದು ಪ್ರಭಾವಶಾಲಿಯಾಗಿರುವ ವಿಚಾರಗಳನ್ನು ಮುಖಾಮುಖಿ ಮಾಡುತ್ತ ಈ ಪ್ರಶ್ನೆಗಳನ್ನು ರೂಪಿಸುತ್ತೇನೆ. ಏಕೆಂದರೆ ಭಾಗಶಃ ಈ ವಿಚಾರಗಳು ತಾವೇ ಸಮಸ್ಯೆಯನ್ನು ರಚಿಸುತ್ತವೆ. ಅಂದರೆ ರಿಲಿಜನ್ನಿನ ಸ್ವರೂಪಕ್ಕೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೇ, ಅನ್ಯ ಸಂಸ್ಕೃತಿಗಳಲ್ಲಿ ನಮ್ಮ ಲೇಖಕರು ರಿಲಿಜನ್ನುಗಳನ್ನು ಕಾಣುವುದೇ ಒಂದು ಸಮಸ್ಯೆಯಾಗಿದೆ ಎಂದು ವಾದಿಸುತ್ತೇನೆ. ಈ ಅರ್ಥದಲ್ಲಿ ಈ ಅಧ್ಯಾಯದಲ್ಲಿ ಬಳಸಲಾಗುವ ವಾದಗಳು ಸಂಶೋಧನೆಗೆ ಪ್ರವೇಶವನ್ನು ನೀಡುತ್ತವೆಯೇ ವಿನಃ ಅದರ ಸಮಸ್ಯೆಯನ್ನು ಯಾವುದೇ ರೀತಿಯಲ್ಲೂ ಪರಿಹರಿಸುವುದಿಲ್ಲ ಅಂದರೆ ಈ ಒಂದು ಪ್ರಯತ್ನ ಒಂದು ಪ್ರಮುಖ ಸಂಶೋಧನೆಗೆ ಸಿದ್ಧತೆಯಾಗಿರುವುದು ಕಂಡುಬರುತ್ತದೆ (ಊeuಡಿisಣiಛಿ ಜಿuಟಿಛಿಣioಟಿs)
೩. ತಮ್ಮ ಲೇಖನದಲ್ಲಿ ಡಾ.ಸಿ.ಜಿ.ಲಕ್ಷ್ಮೀಪತಿಯವರು ಹೇಳುವಂತೆ ಒರಿಯಂಟಲಿಸಂನ ದೃಷ್ಟಿಕೋನದಿಂದ ಜಾತಿಯನ್ನು ವಿವರಿಸ ಹೊರಟ ಕೂಡಲೇ ಅನ್ಯಾಯಕ್ಕೆ, ಅಸಮಾನತೆಗೆ ಗುರಿಯಾಗಿರುವ ಜಾತಿಗಳು, ಕುಲಸಮುದಾಯಗಳು ಆತಂಕಕ್ಕೆ ಒಳಗಾಗುವುದು ಸಹಜ. ಏಕೆಂದರೆ ಒರಿಯಂಟಲಿಸಂ ಪಶ್ಚಿಮದ ಅಧಿಕಾರವನ್ನು ವಿರೋಧಿಸುವ ನೆಲೆಯಲ್ಲಿಯೇ ಆಧುನಿಕತೆ, ತರ್ಕ, ಕಾರ್ಯಕಾರಣ ಸಂಬಂಧ, ವೈಜ್ಞಾನಿಕ ಮನೋಭಾವ ಮತ್ತು ಉದಾರ ಪ್ರಜಾಸತ್ತಾತ್ಮಕ ನೆಲೆಗಳನ್ನು ವಿರೋಧಿಸುವ ಸ್ವರೂಪ ಒಳಗೊಂಡಿದೆ. ಎಂಬುದು ತುಂಬಾ ಗಮನಾರ್ಹ ಅಂಶವಾದರೂ ಪ್ರೊ. ಬಾಲಗಂಗಾಧರ ರವರ ವಿಚಾರಗಳು ಒರಿಯಂಟಲಿಸಂನ ಮುಂದುವರೆದ ತಾತ್ವಿಕ ಪ್ರಣಾಳಿಕೆಯಂತೆ ಕಾಣುತ್ತವೆ ಎಂಬದು ಸಮಸ್ಯಾತ್ಮಕವಾಗಿದೆ. ಸಮಾಜ ವಿಜ್ಞಾನಗಳ ಜ್ಞಾನ ಮೀಮಾಂಸೆಯಲ್ಲಿ ಎಡ್ವರ್ಡ್ ಸೈದ್‌ನ ನಂತರ ಮುಂದೇನಾದರು ಇದೆಯೇ? ಎಂಬ ಪ್ರಶ್ನೆಯಲ್ಲಿ ಡಾ.ಲಕ್ಷ್ಮೀಪತಿಯವರ ವಾದ ನೆಲೆ ಕಂಡುಕೊಂಡಿರುವಂತೆ ಅನ್ನಿಸುತ್ತದೆ. ವಸಾಹತುಷಾಹಿ ಪಠ್ಯಗಳನ್ನು ಓದುವ ರೀತಿ ಮತ್ತು ಅರ್ಥೈಸುವ ಕ್ರಮದ ಬಗ್ಗೆ ಎತ್ತಿರುವ ಪ್ರಶ್ನೆ ತುಂಬಾ ಸೂಕ್ಷ್ಮವಾಗಿದ್ದು ಗಮನ ಸೆಳೆಯುತ್ತದೆ.
ಒಟ್ಟಾರೆ ಸಮಾಜ ವಿಜ್ಞಾನಗಳ ಸಂಶೋಧನೆ ಒಂದು ಆಸಕ್ತಿಯಾಗಿ ಕಂಡವರಿಗೆ ಈ ರೀತಿಯ ಬೆಳವಣಿಗೆಗಳು ನಿಜವಾಗಲು ಒಂದು ಹೊಸ ರೀತಿಯ ಚೈತನ್ಯವನ್ನು, ನೆಲೆಗಳನ್ನು ಸಂಶೋಧನೆಯ ಹಾದಿಯಲ್ಲಿ ತೆರೆಯುತ್ತದೆ. ಸಮಾಜ ವಿಜ್ಞಾನಿಗಳಿಗಿರಬೇಕಾದ ಮೂಲ ಗುಣಗಳಾದ ವಸ್ತುನಿಷ್ಠತೆ (ಔbರಿeಛಿಣiviಣಥಿ ಚಿಟಿಜ vಚಿಟue ಓeuಣಡಿಚಿಟiಣಥಿ) ಮತ್ತು ಮೌಲ್ಯ ತಟಸ್ಥ ನೆಲೆಯಿಂದ ತರ್ಕ ಮಾಡಿದ್ದೆ ಆದರೆ ಈ ಚರ್ಚೆ ಸಮಾಜ ವಿಜ್ಞಾನಗಳ ಸಂಶೋಧಕರಿಗೆ ಉಪಯುಕ್ತವಾಗಬಲ್ಲದ್ದಾಗಿದೆ. ಔbರಿeಛಿಣiviಣಥಿ ಮತ್ತು vಚಿಟue ಓeuಣಡಿಚಿಟiಣಥಿ ಗಳು ಪಾಶ್ಚಾತ್ಯರ ಸಮಾಜ ವಿಜ್ಞಾನಗಳ ನೆಲೆಯಿಂದಲೇ ಜನ್ಮತಾಳಿದವು ಎಂಬ ವಾದ ಮುಂದಿಟ್ಟರೆ ಈ ಪ್ರಶ್ನೆಗಳಿಗೆ ಉತ್ತರ, ಸಮಾಜ ವಿಜ್ಞಾನಗಳ ಥಿಯರಿ ಮತ್ತು ಸಂಶೋಧನೆಯ ಬೆಳವಣಿಗೆಯ ವಿವಿಧ ಹಂತಗಳನ್ನು ವಿವರಿಸಬೇಕಾಗುತ್ತದೆ.
ಪ್ರಸ್ತುತ ಬಾಲುರವರ ಚಿಂತನೆ ಮತ್ತು ಸಮಸ್ಯೆ ಇರುವುದು ಭಾರತದ ಸಮಾಜವನ್ನು ಕುರಿತಂತೆ ಇರುವ ಜ್ಞಾನ ಯಾವ ರೀತಿ ತನ್ನನ್ನು ನಿರ್ವವಹಿಸಿಕೊಂಡಿದೆ. ಇದರಲ್ಲಿರುವ ಸಮಸ್ಯೆಗಳೇನು? ಎಂಬುದಾಗಿದೆಯೇ ಹೊರತು ನನಗೆ ತಿಳಿದಿರುವಂತೆ ಜಾತಿಯ ಪ್ರಶ್ನೆಯನ್ನು ಕೇಂದ್ರವಾಗಿಟ್ಟುಕೊಂಡು ಅವರು ತಮ್ಮ ಸಿದ್ದಾಂತವನ್ನು ಮುಂದಿಡುತ್ತಿಲ್ಲ. ಒಟ್ಟು ಸಮಾಜ ವಿಜ್ಞಾನಗಳ ಸಮಸ್ಯೆಯನ್ನು ಕುರಿತಂತೆ ಅವರು ಎತ್ತಿರುವ ಪ್ರಶ್ನೆಯ ವ್ಯಾಪ್ತಿಯಲ್ಲಿ ಜಾತಿಯ ಕುರಿತಾದ ಸಿದ್ಧಾಂತಗಳು ಸಹ ಬರುತ್ತವೆ ಎನ್ನುವುದನ್ನು ನಾವು ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಬಾಲುರವರ ವಾದವನ್ನು ನಾವು ಸಮಾಜ ವಿಜ್ಞಾನಗಳ ನಿರೂಪಣೆಯಲ್ಲಿನ ಸಮಸ್ಯೆಯಾಗಿ ಗ್ರಹಿಸಿದರೆ ಇನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಬದಲಾಗಿ ಕೇವಲ ಜಾತಿ ವ್ಯವಸ್ಥೆಯ ಕುರಿತಾದಂತೆ ಸಂಕುಚಿತ ಅರ್ಥದಲ್ಲಿ ಅವರ ವಾದಗಳು ಅರ್ಥವಾಗುವುದು ಕಷ್ಟಸಾಧ್ಯವಾಗಿದೆ.