ಗುರುವಾರ, ಫೆಬ್ರವರಿ 19, 2009

ಆನೂ ಕುಲ ಹೊರಗಿನವನು

ಡಾ. ಬಂಜೆಗೆರೆ ಜಯಪ್ರಕಾಶ್ ರವರ ಆನುದೇವ ಹೊರಗಣವನು ಕೃತಿಯ ಕುರಿತು ನಾಡಿನಾದ್ಯಂತ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅವರ ಕೃತಿ ಒಂದು ಉತ್ತಮ ಸಂಶೋಧನೆ ಎಂದg, ಹಲವರು ಇದು ಒಂದು ಕುಹಕ, ಸತ್ಯಕ್ಕೆ ದೂರವಾದ ಸಂಶೋಧನೆ, ಹೆಸರು ಮಾಡಲು ಹೊರಟಿರುವವನ ಬರವಣಿಗೆ ಎಂಬುದಾಗಿ ಟೀಕಿಸಿದ್ದಾರೆ. ಅದರೆ ಒಬ್ಬ ಸಂಶೋಧಕನಾಗಿ ನನಗೆ ಕೃತಿಯ ಪ್ರಸ್ಥುತತೆಯ ಬಗ್ಗೆ ತುಂಬ ಜನ ಮಾತನಾಡಿಲ್ಲ ಎಂದು ಕಂಡುಬರುತ್ತz. ಪ್ರಸ್ಥುತತೆ ಎಂದರೆ ಒಂದು ಸಂಶೊಧನೆ ಒಂದು ಕಾಲಘಟ್ಟದ ಸಮಾಜಕ್ಕೆ ನೀಡುವ ಕೊಡುಗೆ ಏನು? ಮತ್ತು ಸಮಾಜ ಸಂಶೋಧನೆಯಿಂದ ಪಡೆದುಕೊಳ್ಳುವುದೇನು? ಎಂಬುದಾಗಿದೆ. ಸರಳವಾಗಿ ಒಂದು ಸಂಶೋಧನೆ ಪ್ರಸ್ಥುತ ಇರುವ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಅಂಶಗಳ ಮೇಲೆ ಬೀರುವ ಪ್ರಭಾವವೇ ಆಗಿದೆ.

ಬಂಜೆಗೆರೆ ಜಯಪ್ರಕಾಶರವರ ಒಂದು ಕೃತಿ ಇತಿಹಾಸದ ಕಾಲದಲ್ಲಿ ಮುಚ್ಚಿಹೋದ ಕೆಲವು ಸತ್ಯಗಳನ್ನು (ವೈದಿಕರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಬಸವಣ್ಣವರ ಜಾತಿಯ ಮೂಲ ಕುರಿತ ಸತ್ಯ) ಜಗತ್ತಿಗೆ ತೋರಿಸುವುದೇ ಆಗಿದೆ, ಅಂದರೆ ಬೌದ್ಧಿಕ ಪ್ರಪಂಚದ ಕೆಲವು ಅಸ್ಪಷ್ಟತೆಗಳನ್ನು ಸರಿಪಡಿಸುವುದು ಕೃತಿಯ ಮೂಲ ಉದ್ದೇಶವಾಗಿದೆ.

ಆದರೆ ಒಂದು ಸಂಶೋಧನೆಯ ಕೊಡುಗೆ ಎರಡು ರೀತಿಯಲ್ಲಿರುತ್ತದೆ. ಒಂದು, ಲೇಖಕರು ಮೇಲೆ ಹೇಳಿದಂತೆ ಇತಿಹಾಸದಿಂದ ಉದ್ದೇಶಪೂರ್ವಕವಾಗಿ ಮುಚ್ಚಿಡಲ್ಪಟ್ಟ ಕೆಲವು ವಾಸ್ತವಗಳನ್ನು, ಅಸ್ಪಷ್ಟತೆಗಳನ್ನು ಆಧಾರ ಸಹಿತವಾಗಿ ಜಗತ್ತಿಗೆ ಹೇಳುವುದಾಗಿದೆ (ಆದರೆ ಆಧಾರಗಳು ಅಸ್ಪಷ್ಟತೆಯಿಂದ ಕೂಡಿವೆ ಎಂಬ ಕೂಗೇ ಕೃತಿಗೆ ಸಂಬಂಧಿಸಿದಂತೆ ಅಧಿಕವಾಗಿವೆ). ನನ್ನ ಪ್ರಕಾರ ಇದೇ ಅಂತಿಮವಾಗಿದ್ದರೆ ಕೃತಿ ಇಷ್ಟೊಂದು ಚರ್ಚೆಗೆ ಒಳಪಡುವ ಅವಶ್ಯಕತೆ ಇತ್ತೇ? ಖಂಡಿತವಾಗಿಯೂ ಇಲ್ಲ.

ಇನ್ನೊಂದು ದೃಷ್ಟಿಯಿಂದ ಕೃತಿ ಮಹತ್ವ ಪಡೆದಿದೆ. ಅದೆಂದರೆ, ಪ್ರಸ್ಥುತ ರಾಜಕೀಯ ಮತ್ತು ಸಮಾಜ ಕೃತಿಯಿಂದ ಏನನ್ನೊ ನೀರಿಕ್ಷಿಸುತ್ತಿದೆ, ಏನನ್ನೊ ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಧಾವಂತ ಸಮಾಜಕ್ಕಿದ್ದಂತಿದೆ. ಆದ್ದರಿಂದಲೆ ಕೃತಿ ಇಷ್ಟೊಂದು ಚರ್ಚೆಗೊಳಗಾಗುತ್ತದೆ ಎಂದಾಯಿತು ಅಲ್ಲವೇ. ಒಬ್ಬ ರಾಜ್ಯಶಾಸ್ತ್ರದ ವಿಧ್ಯಾರ್ಥಿಯಾದ ನಾನು ಇದನ್ನು, ಸಮಾಜದ ಧಾವಂತವನ್ನು ನನ್ನ ಅಧ್ಯಯನದ ಶಿಸ್ತಿನ ಬೆಳಕಿನಲ್ಲಿ ಗ್ರಹಿಸುವ ಮತ್ತು ವಿವರಿಸುವ ಪ್ರಯತ್ನಮಾಡುತ್ತೇನೆ. ಅದಕ್ಕೆ ಪೂರಕವಾಗಿ ಭಾರತದ ಜಾತಿ ಮತ್ತು ರಾಜಕಾರಣದ ಸಂಭಂದವನ್ನು ನೋಡುವುದು ಇಲ್ಲಿ ಅಗತ್ಯವಾಗಿದೆ.

ಭಾರತಕ್ಕೆ ಪ್ರಜಾಪ್ರಭುತ್ವ ಮಾದರಿ ರಾಜಕೀಯ ವ್ಯವಸ್ಥೆ ಬಂದ ನಂತರ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಪ್ರಜೆಗಳೆ ನೇರವಾಗಿ ಪ್ರಭುತ್ವದ ಆಡಳಿತದಲ್ಲಿ ಭಾಗವಹಿಸಲು ಸಾಧ್ಯವಾಗದ ಮಟ್ಟಿಗೆ ಪ್ರಭುತ್ವದ ಗಾತ್ರ ಬೆಳೆದುದರಿಂದ ಪರೋಕ್ಷವಾಗಿ ಪ್ರತಿನಿಧಿಗಳ ಮೂಲಕ ಆಳುವ ವ್ಯವಸ್ಥೆ ಹುಟ್ಟುಹಾಕಲಾಯಿತು (ದೇಶ ಕಾಲ; ಕ್ಷೀಣಿಸುತ್ತಿರುವ ಆಯ್ಕೆಯ ಸ್ವಾತಂತ್ರ ;ಪ್ರೋ ಜೆ.ಎಸ್.ಸದಾನಂದ; ಪುಟ೧೧೬)

ಪ್ರಾತಿನಿಧಿಕ ವ್ಯವಸ್ಥೆ ಅತ್ಯಂತ ಪ್ರಮುಖವಾಗಿ ಪ್ರಭಾವ ಬೀರಿದ್ದು ಮತ್ತು ಬೀರುತ್ತಲಿರುವುದು ಜಾತಿಗಳ ಸಂಚಲನದ ಮೇಲೆ (ಒಟ್ಟುಗೂಡುವಿಕೆ ಅಚಿse obiizಚಿಣioಟಿ). ಸರಳವಾಗಿ ಹೆಳುವುದಾದರೆ, ಪ್ರಾತಿನಿಧಿಕ ವ್ಯವಸ್ಥೆ ಅಳವಡಿಸಿಕೊಂಡ ನಂತರ ಪ್ರತಿಯೊಂದು ಜಾತಿಯು ತನ್ನ ಒಂದು ಗುಂಪನ್ನು ಗಟ್ಟಿಗಳಿಸಿಕಕೊಳ್ಳತೊಡಗಿತು. ಮೂಲಕ ರಾಜಕೀಯ ಅಧಿಕಾರ ಪಡೆದು ಲಾಭ ಪಡೆಯುವ ಉದ್ದೇಶ ಎಲ್ಲಾ ಜಾತಿಯ ನಾಯಕರುಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಸಾಮಾನ್ಯವಾಗಿತ್ತು (ಭಾರತದಂತಹ ಸಮಾಜಿಕ ವ್ಯವಸ್ಥೆ ಇರುವ ದೇಶದ ರಾಜಕೀಯಕ್ಕೆ ಅದು ಅನಿವಾರ್ಯವು ಆಗಿದ್ದಿತು) ಕರ್ನಾಟಕವು ಪರಿಸ್ಥಿತಿಯಿಂದ ಹೊರತಾಗಿರಲಿಲ್ಲ.

ಇಂತಹ ಸಂದರ್ಭದಲ್ಲಿ ತಮ್ಮ ಜಾತಿಯ ಜನರನ್ನು ಒಂದು ಗೂಡಿಸಲು ಜಾತಿಯ ಮುಖಂಡರಿಗೆ ಕೆಲವೊಂದು ಅಂಶಗಳನ್ನು ಅವರ ಜನಕ್ಕೆ ಮನವರಿಕೆ ಮಾಡುವ ಅಗತ್ಯತೆ ಇತ್ತು. ಉದಾಹರಣೆಗೆ ಏಕೆ ಒಂದಾಗಬೇಕು? ಅದರ ಅಗತ್ಯತೆ ಮತ್ತು ಪ್ರಯೋಜನವೇನು? ಇತ್ಯಾದಿ. ಆಗ ಅದಕ್ಕೆ ಪೂರಕವಾಗಿ ಜಾತಿಯ ಇತಿಹಾಸ ಸೃಷ್ಟಿಯಾಗತೊಡಗಿತು. ಜಾತಿಯನ್ನು ಪವಿತ್ರ, ಐತಿಹಾಸಿಕವಾಗಿ ಮಹತ್ವ ಪಡೆದ ಮಹನೀಯರು ಜನಿಸಿದ ಜಾತಿ ಎಂಬಿತ್ಯಾದಿ ಇತಿಹಾಸವನ್ನು ಹೆಣಿಯುವ ಕಾರ್ಯ ಪ್ರಾರಂಭವಾಯಿತು.(ಆಧಾರಗಳನ್ನು ನಿಡುವ ಮೂಲಕ ಅಂದರೆ ಜಾನಪದ ಕಥೆಗಳು. ಪುರಾಣಗಳು ಇವುಗಳಿಗೆ ಆಧಾರ ಒದಗಿಸಿದವು) ಹಲವಾರು ಕಥೆಗಳಿಗೆ ಮಹತ್ವ ಬರತೊಡಗಿತು, ಪುರಾಣಗಳು ಮಹತ್ವ ಪಡೆಯತೊಡಗಿದವು ( ಜಾತಿಯ ಒಳಗೆ ಗುರುತಿಸಿಕೊಳ್ಳುವುದರ ಮೂಲಕ). ಒಟ್ಟಾರೆ ಒಂದು ಜಾತಿಯು ಸಂಚಲನಕ್ಕೆ (ಅಚಿse obiizಚಿಣioಟಿ) ಪೂರಕವಾಗಿ ಪ್ರತಿಯೊಂದು ಜಾತಿ ಇತರೆ ಜಾತಿಗಿಂತ ಪವಿತ್ರ (ಆಡು ಭಾಷೆಯಲ್ಲಿ ಮೇಲೆ) ಮತ್ತು ಉತ್ತಮ ಹಿನ್ನೆಲೆ ಹೊಂದಿದೆ ಎಂಬ ಬಗೆಯ ಇತಿಹಾಸ ಮತ್ತು ಜ್ಞಾನ ಸೃಷ್ಟಿಯಾಗತೊಡಗಿತು ( ಇದರ ಅರ್ಥ ಜಾತಿಯ ಕುರಿತಾದ ಎಲ್ಲಾ ಕಥೆಗಳು, ಪುರಾಣಗಳು ಇದೇ ಕಾರಣಕ್ಕೆ ಸೃಷ್ಟಿಯಾದವು ಅಂತ ಅಲ್ಲ ಕೆಲವು ಸೃಷ್ಟಿಯಾದರೆ ಹಲವು ಇದ್ದಂತಹ ಕಥೆಗಳ ಸ್ವರೂಪವು ಜಾತಿಗೆ ಪೂರಕವಾಗಿ ಉತ್ಪ್ರೇಕ್ಷಿತವಾಗಿ (exಚಿggeಡಿಚಿಣioಟಿ) ನಿರೂಪಿಲ್ಪಟ್ಟವು ). ಐತಿಹಾಸಿಕ ವ್ಯಕ್ತಿಗಳು ಇದಕ್ಕೆ ಹೊರತಾಗಿಲ್ಲ ಉದಾ; ಬಸವಣ್ಣ, ಕನಕದಾಸ ಮುಂತಾದವರು. ರೀತಿಯ ಜ್ಞಾನವೇ ಮುಂದೆ ಜಾತಿ ಸಂಘಗಳು, ಮಠಗಳ ಉಗಮಕ್ಕೆ , ಕಾರಣೀಭೂತವಾದವು. ( ಇವು ಇಂದಿಗೂ ಏಕೆ ತಮ್ಮ ಜಾತಿ ಪ್ರಮುಖವಾಗಿದೆ, ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರವನ್ನು ನೀಡುತ್ತಲೇ ಇವೆ) ರೀತಿಯ ಜ್ಞಾನದ ಆಧಾರದ ಮೇಲೆ ತಮ್ಮ ಒಂದು ಜಾತಿಯ ಜನರನ್ನು ಕ್ರೋಢಿಕರಿಸಿ ನಾಯಕತ್ವವನ್ನು ( ಸಮಾಜಿಕ ಮತ್ತು ರಾಜಕೀಯ ನಾಯಕತ್ವ ಎರಡೂ) ಹೊಂದಿದ ವ್ಯಕ್ತಿಗೆ ಮುಂದೊಂದು ದಿನ ತಾನು ಪಡೆದ ಜ್ಞಾನ ಸರಿಯಾದುದಲ್ಲ ಮತ್ತು ಜ್ಞಾನದ ಹುಟ್ಟಿಗೆ ಅಡಿಪಾಯವಾದ ತತ್ವಗಳು ಮತ್ತು ಅವುಗಳನ್ನು ನೀಡಿದ ವ್ಯಕ್ತಿ ನಿಮ್ಮ ಜಾತಿಗೆ ಸೇರಿಯೇ ಇಲ್ಲ ಎಂದು ಯಾವುದಾದರು ಸಂಶೊಧನೆ ನಿರೂಪಿಸಲು ಪ್ರಯತ್ನಿಸಿದರೆ, ನಾಯಕರುಗಳಿಗೆ ಇದು ನಿಜವಾಗಲು ಆತಂಕದ ಸಂಗತಿಯೇ ಸರಿ. ಏಕೆಂದರೆ ಅವರು ಇದುವರೆಗೊ ನಂಬಿಕೊಂಡಂತಹ ಮತ್ತು ಹಲವರನ್ನು ನಂಬಿಸಲು ಪ್ರಯತ್ನಿಸಿದ ಸಂಗತಿಯೇ ಸುಳ್ಳು ಎಂದಾದರೆ ಇದುವರೆಗೊ ಅವರ ಜಾತಿಯ ಸಂಚಲನಕ್ಕೆ (obiizಚಿಣioಟಿ) ಪೂರಕವಾದ ಮತ್ತು ನಾಯಕತ್ವದ ತಳಹದಿಯಾದ ಜ್ಞಾನವೇ ಒಂದು ತಪ್ಪು ಕಲ್ಪನೆ ಎಂದಾದರೆ ಆಗುವ ಪರಿಣಾಮವೇ ಈಗ ಆನುದೇವ ಹೊರಗಣವನು ಕೃತಿಯ ಬಗ್ಗೆ ನಡೆಯುತ್ತಿರುವ ವಿವಾದ.

ಈಗ ಪ್ರಸ್ಥುತ ಸಮಸ್ಯೆ ಕೂಡ ಇದೇ ಆಗಿದೆ. ಬಂಜೆಗೆರೆ ಜಯಪ್ರಕಾಶ್ರವರ ಆನುದೇವ ಹೊರಗಣವನು ಕೇವಲ ಒಂದು ಇತಿಹಾಸದಲ್ಲಿ ಮುಚ್ಚಿಹೋದ ಸತ್ಯ ಹುಡುಕುವ ಮತ್ತು ಅದರ ಅಸ್ಪಷ್ಟತೆಯನ್ನು ಸರಿಪಡಿಸುವ ಕೃತಿಯೇ ಆಗಿದಿದ್ದರೆ (ಲೇಖಕರ ಪ್ರಕಾರ ಅದೇ) ಮಟ್ಟದ ಪ್ರಭಾವ ಅದಕ್ಕೆ ಬರುತ್ತಿರಲಿಲ. ಆದರೆ ಇದು ಕರ್ನಾಟಕದ ಜಾತಿ ಮತ್ತು ರಾಜಕಾರಣದ ನಂಬಿಕೆಗಳಿಗೆ (ಬ್ರಾಹ್ಮಣ ಮತ್ತು ದಲಿತ*ಮಾದಿಗ*) ಒಂದು ವಿಭಿನ್ನ ರೀತಿಯ ಪ್ರಭಾವ ಬೀರುವ ಅಂಶಗಳನ್ನು ತನ್ನೊಳಗೆ ಹೊಂದಿದೆ. ಸಾಮಾಜಿಕವಾಗಿ ವಿರುದ್ದ ದಿಕ್ಕಿನಲ್ಲಿರುವ (ಜಾತಿಯ ಸಿಂದ್ಧಾಂತಿಗಳು ನಿರೂಪಿಸಿರುವಂತೆ ಸಮಾಜದಲ್ಲಿ ಬ್ರಾಹ್ಮಣ ಮೇಲೆ ಅಸ್ಪೃಷ್ಯ ಕೆಳಗೆ) ಜಾತಿಗಳ ಪಾವಿತ್ರತೆಯ ಪ್ರಶ್ನೆಯಾಗಿದೆ. ಅವರ ಸಾಮಾಜಿಕ, ರಾಜಕೀಯ ಸಂಚಲನಕ್ಕೆ ಪೂರಕವಾಗಿ ಇರುವ ಸೈಂದ್ಧಾಂತಿಕ ಜ್ಞಾನದ ಪ್ರಶ್ನೆಯಾಗಿದೆ.(ಅವರು ಕಟ್ಟಿಕೊಂಡ) ಇಡಿ ೧೨ನೇ ಶತಮಾನದಲ್ಲಿ ವಚನ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಯಾವ ಜಾತಿ ಎಂಬ ಪ್ರಶ್ನೆ ಎಕೆ ಇಲ್ಲಿ ಪ್ರಾಮುಖ್ಯತೆ ಪಡೆದಿದೆ? ಏಕೆಂದರೆ ಒಂದು ಜಾತಿಯ ಇತಿಹಾಸದ ಮೂಲ ಬೇರು, ಮೂಲ ತತ್ವ, ಅದರ ಪವಿತ್ರತೆಯ ಪ್ರತೀಕ ಮತ್ತು ಸಂಚಲನದ ಶಕ್ತಿಯಾದ (ಅಚಿse obiizಚಿಣioಟಿ) ಬಸವಣ್ಣ ನಮ್ಮವನಲ್ಲವೇ? ಎಂಬ ಪ್ರಶ್ನೆ ಒಂದು ವರ್ಗದ ತಳಮಳವಾದರೆ ಅಂತಹ ಮಹಾನ್ ವ್ಯಕ್ತಿ ನಮ್ಮವನು ಎಂಬುದು ಮತ್ತೊಂದು ಗುಂಪಿನ ಹರ್ಷವಾಗಿದೆ, ಅದಕ್ಕೆ ವಾದ ಪ್ರತಿವಾದಗಳು ಪರಿಯಾಗಿ ನಡೆಯುತ್ತಲೆ ಇವೇ.

ಅದರೆ ವಾಸ್ತವದಲ್ಲಿ ಇದು ಪ್ರಶ್ನೆಯೇ ಅಲ್ಲ, ಏಕೆಂದರೆ ಬಸವಣ್ಣನವರು ಬ್ರಾಹ್ಮಣತ್ವವನ್ನು ಬಿಟ್ಟು, ಶೂದ್ರತ್ವವನ್ನು ತೂರೆದು ಶಿವ ಶರಣರ ಸಮಾಜವನ್ನು ( ಶರಣನಾದವನಿಗೆ ಜಾತಿ ಬೇದವಿಲ್ಲ ಎಂಬ ಪರಿಕಲ್ಪನೆಯಲ್ಲಿ ) ಕಟ್ಟುವ ಕನಸನ್ನು ಕಂಡ ಮಹಾನ್ ವ್ಯಕ್ತಿ. ಅವರು ಎಂದಿಗೂ ಸಹ ಜಾತಿಯ ತಾರತಮ್ಯವನ್ನು ಅವರ ವಿಚಾರಧಾರೆಯ ಮೂಲವಾಗಿ ಬಳಸಿಕೊಳ್ಳಲೇ ಇಲ್ಲ.

ಚಾರಿತ್ರಿಕ ಅಂಶಗಳು ಎನೇ ಇರಲಿ ನಮ್ಮ ರಾಜಕೀಯ ನಾಯಕರು ಮತ್ತು ಜಾತಿ ಗುಂಪುಗಳ ನಾಯಕರು ಬಸವಣ್ಣ ಒಬ್ಬ ಸಮಾಜಿಕ ಸುಧಾರಕ, ಜಾತಿಯನ್ನು ವಿನಾಶಮಾಡಲು ೧೨ನೇ ಶತಮಾನದಲ್ಲಿಯೇ ಪ್ರಯತ್ನಿಸಿ ಮೂಲಕ ಇಡೀ ಸಾಮಾಜಿಕ ವ್ಯವಸ್ಥೆಯನ್ನೆ ಬದಲಾಯಿಸಲು ಹೊರಟ ಮಹಾನ್ ವ್ಯಕ್ತಿ ಎಂದು ಭಾಷಣ ಮಾಡುತ್ತಾರೆ. ಆದರೆ ಇಂದು ಡಾ. ಬಂಜೆಗೆರೆ ಜಯಪ್ರಕಾಶ್ ರವರು ಬಸವಣ್ಣನವರನ್ನು ಮಾದಿಗ ಜಾತಿಯವನಿರಬಹುದೆ? ಎಂದು ತಿಳಿಸಿದಾಕ್ಷಣ ಏಕೆ ಆಶ್ಚರ್ಯಗೊಳ್ಳಬೇಕು? ಇದು ಸಮಾಜದ ನಿಜವಾದ ದ್ವಂದ್ವವೇ ಸರಿ. ಜಾತಿಯು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ, ಅದರಿಂದ ತಾವೇ(ಬಸವಣ್ಣ) ಹೊರಬಂದು ಮಾತನಾಡಿದ್ದನೆನ್ನಲಾದ ವ್ಯಕ್ತಿಯ ಜಾತಿಯ ಕುರಿತು ಪರಿ ವಾದಕ್ಕಿಳಿಯುತ್ತವೆ ಇದು ನಿಜವಾದ ವಿಪರ್ಯಾಸ

ಇನ್ನು ಕೃತಿಯ ಬಗ್ಗೆ ಹೇಳುವುದಾದರೆ ಬಂಜೆಗೆರೆಯವರು ಇತಿಹಾಸದ ವಸ್ಥುನಿಷ್ಟ ಸಮಸ್ಯಗಳನ್ನು ಚರ್ಚಿಸುತ್ತಾ ಬಸವಣ್ಣನವರ ಜಾತಿಯ ಮೂಲವನ್ನು ಪ್ರಶ್ನಿಸುತ್ತಾರೆ. ಆದರೆ ಇಷ್ಟೆಲ್ಲ ಅವರು ಮಾಡುವುದು ಅವನ ಮಾದಿಗ ಮೂಲದ ವಸ್ತುನಿಷ್ಟತೆಯನ್ನು ಸೂಚಿಸುವುದಕ್ಕಾಗಿ. ಅವರೇಕೆ ಹುಟ್ಟನ್ನು ಸಮಸ್ಯಿಕರಿಸುವುದು ಮುಖ್ಯ ಎಂದು ಭಾವಿಸುತ್ತಾರೆ. ಎಕೆಂದರೆ ಬಂಜೆಗೆರೆಯವರು ಬಸವಣ್ಣನವರ ಹುಟ್ಟು ಪ್ರಸ್ಥುತ ಸಾಂಸ್ಕೃತಿಕ ರಾಜಕೀಯದ ಒಂದು ಅಗತ್ಯ ಎಂದು ಅವರು ತಿಳಿದಿದ್ದಾರೆ. ಹಾಗಾಗಿ ಅವರೇ ಪ್ರಶ್ನಿಸುವ ಇತಿಹಾಸದ ವಸ್ತುನಿಷ್ಟತೆಯ ಆಯುಧವನ್ನು ಹಿಡಿದು ತಮ್ಮ ವಾದವನ್ನು ಹೆಣೆದಿರುವುದು ಕೃತಿಯುದ್ದಕ್ಕೂ ಕಂಡುಬರುತ್ತದೆ.

ರಾಜಕೀಯ ಅಗತ್ಯಕ್ಕಾಗಿ ಜಾತಿಯ ಜನರ ಗುಂಪನ್ನು ಕಟ್ಟುವ ತರಾತುರಿಯಲ್ಲಿ ನಾಯಕರಿಗೆ ಬಸವಣ್ಣನವರ ಆದರ್ಶಗಳು ಮುಖ್ಯವಾಗಿಲ, ಬದಲಾಗಿ ತಮ್ಮ ಜಾತಿಯ ಶ್ರೇಷ್ಟತೆಯ ಇತಿಹಾಸಕ್ಕೆ ಪ್ರತೀಕವಾಗಿ ಮಾತ್ರ ಬೇಕಾಗಿರುವುದು ನಿಜವಾದ ದುರಂತವಾಗಿದೆ.

ಕೇವಲ ರಾಜಕಾರಣ ಮತ್ತು ಜಾತಿ ಇವೆರಡರ ಹೊಂದಾಣಿಕೆಯ ನಡುವೆ ಒಬ್ಬ ಮಹಾನ್ ವ್ಯಕ್ತಿಯ ಅದರ್ಶಗಳು ದೂರವಾಗಿ ಅವರು ಕೇವಲ ಜಾತಿಯ ಪ್ರತೀಕವಾಗಿ ಮಾತ್ರ ಬಳಸಲ್ಪಡದಿರಲಿ, ವಚನ ಯುಗದ ಕುರಿತು ಇನ್ನು ಗಹನವಾದ, ಹಿರಿದಾದ ಅರ್ಥ ಮತ್ತು ಆಶಯಗಳನ್ನು ಗುರಿತಿಸುವ ಮಟ್ಟದ ಪ್ರಯತ್ನ ಆಧುನಿಕ ಚಿಂತಕರಿಂದ ನಡೆಯಲಿ ಎಂಬುದೆ ನಮ್ಮ ಅನಿಸಿಕೆ. . . . .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ